×
Ad

Tamil Nadu | ಸರಕಾರಿ ನೌಕರರಿಗೆ ಶೇ.50ರ ಪಿಂಚಣಿ ಘೋಷಿಸಿದ ಎಂ.ಕೆ. ಸ್ಟಾಲಿನ್

Update: 2026-01-04 22:18 IST

ಎಂ.ಕೆ. ಸ್ಟಾಲಿನ್ | Photo Credit:  PTI 

ಚೆನ್ನೈ, ಜ.4: ಸರಕಾರಿ ನೌಕರರಿಗೆ ಅವರು ಕೊನೆಯದಾಗಿ ಪಡೆದ ವೇತನದ ಶೇ.50 ಅನ್ನು ಮಾಸಿಕ ಪಿಂಚಣಿಯಾಗಿ ನೀಡುವ ಹೊಸ ಪಿಂಚಣಿ ಯೋಜನೆಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಘೋಷಿಸಿದ್ದಾರೆ.

ಆಡಳಿತಾರೂಢ ಡಿಎಂಕೆ ಹಳೆಯ ಪಿಂಚಣಿ ಯೋಜನೆಯನ್ನು ಪುನಃ ಸ್ಥಾಪಿಸುವ ಭರವಸೆ ನೀಡಿತ್ತು. ಈ ಯೋಜನೆ ಹಳೆಯ ಯೋಜನೆ ಅಲ್ಲದಿದ್ದರೂ ಅದೇ ಸೌಲಭ್ಯಗಳನ್ನು ಹೊಂದಿದೆ ಎಂದು ಸರಕಾರ ಪ್ರತಿಪಾದಿಸಿದೆ.

ನಿವೃತ್ತರಾಗುತ್ತಿರುವ ನೌಕರರಿಗೆ ಗರಿಷ್ಠ 25 ಲಕ್ಷ ರೂ. ಗ್ರ್ಯಾಚ್ಯುಟಿ ಸಿಗಲಿದೆ. ಸೇವೆ ಸಲ್ಲಿಸುತ್ತಿರುವ ಸರಕಾರಿ ನೌಕರರಂತೆ ನಿವೃತ್ತ ನೌಕರರು ಕೂಡ ವರ್ಷಕ್ಕೆ ಎರಡು ಬಾರಿ ತುಟ್ಟಿ ಭತ್ಯೆ ಪಡೆಯಲಿದ್ದಾರೆ.

ಪಿಂಚಣಿದಾರರು ಮೃತಪಟ್ಟ ಸಂದರ್ಭದಲ್ಲಿ ಅವರ ಕುಟುಂಬವು ಪಿಂಚಣಿಯ ಶೇ.60ರಷ್ಟನ್ನು ಪಡೆಯುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News