ತಮಿಳನಾಡು | ವಿವಾದಕ್ಕೀಡಾದ ಕೇಸರಿ ಉಡುಪಿನಲ್ಲಿರುವ ತಿರುವಳ್ಳುವರ್ ಚಿತ್ರ
ಆರ್.ಎನ್. ರವಿ | NDTV
ಚೆನ್ನೈ : ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರು ಕಳುಹಿಸಿರುವ ‘ತಿರುವಳ್ಳುವರ್ ತಿರುನಾಳ್ ವಿಝಾ’ ಆಚರಣೆಯ ಆಹ್ವಾನ ಪತ್ರಿಕೆಯಲ್ಲಿ ಕೇಸರಿ ಉಡುಪಿನಲ್ಲಿರುವ ತಮಿಳು ಕವಿ-ಸಂತ ತಿರುವಳ್ಳುವರ್ ಅವರ ಚಿತ್ರ ವಿವಾಕ್ಕೆ ಕಾರಣವಾಗಿದೆ.
ತಿರುವಳ್ಳುವರ್ ಅವರನ್ನು ಕೇಸರಿ ಉಡುಪಿನಲ್ಲಿ ಚಿತ್ರೀಕರಿಸಿರುವುದಕ್ಕೆ ಎಂಡಿಎಂಕೆಯ ನಾಯಕ ವೈಕೊ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ತಿರುವಳ್ಳುವರ್ ಅವರು ಜಾತಿ ಹಾಗೂ ಧರ್ಮವನ್ನು ಮೀರಿದವರು ಎಂದು ಹೇಳಿದ್ದಾರೆ.
ಇಂದು ಖಂಡನಾರ್ಹ. ಕವಿ, ಸಂತ ತಿರುವಳ್ಳುವರ್ ಅವರು ಜಾತಿ ಹಾಗೂ ಧರ್ಮವನ್ನು ಮೀರಿದವರು. ರಾಜ್ಯಪಾಲರು ರಾಜ ಭವನವನ್ನು ನಗೆಪಾಟಲಿಗೀಡು ಮಾಡುತ್ತಿದ್ದಾರೆ ಎಂದು ವೈಕೊ ಹೇಳಿದ್ದಾರೆ.
ಇತ್ತೀಚೆಗೆ ಕೇಸರಿ ಉಡುಪು ಧರಿಸಿರುವ ಹಾಗೂ ಹಣೆಗೆ ವಿಭೂತಿ ಬಳಿದಿರುವ ತಿರುವಳ್ಳುವರ್ ಅವರ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ರಾಜ್ಯಪಾಲ ಆರ್.ಎನ್. ರವಿ ಅವರು ವಿವಾದ ಸೃಷ್ಟಿಸಿದ್ದರು. ಇದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹಂಚಿಕೊಂಡಿರುವ ಬಿಳಿ ವಸ್ತ್ರದಲ್ಲಿರುವ ತಿರುವಳ್ಳುವರ್ ಅವರ ಚಿತ್ರಕ್ಕಿಂತ ಭಿನ್ನವಾಗಿತ್ತು.