×
Ad

ತಮಿಳು ಸ್ಟಂಟ್ ಕಲಾವಿದ ಎಸ್.ಎಂ.ರಾಜು ನಿಧನ

Update: 2025-07-14 21:33 IST

ಚೆನ್ನೈ,ಜು.14: ಖ್ಯಾತ ಸ್ಟಂಟ್ ಕಲಾವಿದ ಎಸ್.ಎಂ.ರಾಜು ಅವರು ರವಿವಾರ ಚಿತ್ರೀಕರಣದ ಸಂದರ್ಭದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ತಮಿಳು ನಟ ಆರ್ಯ ನಟಿಸುತ್ತಿರುವ ವೆಟ್ಟುವನ್ ಚಿತ್ರದ ಶೂಟಿಂಗ್ ಸಮಯದಲ್ಲಿ ರಾಜು ಕಾರನ್ನು ಬುಡಮೇಲುಗೊಳಿಸುವ ಅಪಾಯಕಾರಿ ಸನ್ನಿವೇಶವನ್ನು ನಿರ್ವಹಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಕಾರು ಅಡಿಮೇಲಾಗಿ ಬಿದ್ದು ನಜ್ಜುಗುಜ್ಜಾಗುವ ಮುನ್ನ ರಾಜು ಅತ್ಯಂತ ವೇಗವಾಗಿ ಅದನ್ನು ಚಲಾಯಿಸುತ್ತಿದ್ದನ್ನು ಘಟನೆಯ ದೃಶ್ಯಾವಳಿಗಳು ತೋರಿಸಿವೆ. ಚಿತ್ರತಂಡದ ಸದಸ್ಯರು ರಾಜುವನ್ನು ತಕ್ಷಣ ಕಾರಿನಿಂದ ಹೊರಕ್ಕೆಳೆದರಾದರೂ ಆ ವೇಳೆಗೆ ಅವರು ಕೊನೆಯುಸಿರೆಳೆದಿದ್ದರು.

ತಮಿಳು ಚಿತ್ರರಂಗದ ಹಿರಿಯ ಸ್ಟಂಟ್ ಕಲಾವಿದರಾಗಿದ್ದ ರಾಜು ಹಲವಾರು ಚಿತ್ರಗಳಲ್ಲಿ ಅಪಾಯಕಾರಿ ದೃಶ್ಯಗಳಲ್ಲಿ ಪಾಲ್ಗೊಂಡಿದ್ದರು.

ನಟ ವಿಶಾಲ್,ಸ್ಟಂಟ್ ಮಾಸ್ಟರ್ ಸ್ಟಂಟ್ ಸಿಲ್ವಾ ಸೇರಿದಂತೆ ಹಲವರು ರಾಜು ಸಾವಿಗೆ ದುಃಖ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News