×
Ad

ಹೊಸ ಫೋನ್ ಖರೀದಿಸಿ ʼಟ್ರೀಟ್ʼ ಕೊಡಲು ನಿರಾಕರಿಸಿದ ಬಾಲಕನ ಕೊಲೆ

Update: 2024-09-24 17:18 IST

Photo credit: NDTV

ಹೊಸದಿಲ್ಲಿ: ಹೊಸ ಪೋನ್ ಖರೀದಿಸಿದ ನಂತರ ಟ್ರೀಟ್ (ಔತಣ) ನೀಡಲು ನಿರಾಕರಿಸಿದ 16 ವರ್ಷದ ಬಾಲಕನನ್ನು ಆತನ ಮೂವರು ಸ್ನೇಹಿತರು ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಪೂರ್ವ ದಿಲ್ಲಿಯ ಶಕರ್ಪುರದಲ್ಲಿ ನಡೆದಿದೆ.

ಮೃತ ಬಾಲಕನನ್ನು ಸಚಿನ್ (16) ಎಂದು ಗುರುತಿಸಲಾಗಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿ 16ರ ಹರೆಯದ ಮೂವರು ಅಪ್ರಾಪ್ತರು ಮತ್ತು 9ನೇ ತರಗತಿಯ ಓರ್ವ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ ಸಂಜೆ 7.15ರ ಸುಮಾರಿಗೆ ಶಕರ್ಪುರದ ರಾಮ್ಜಿ ಸಮೋಸಾ ಅಂಗಡಿಯ ಬಳಿ ಗಸ್ತು ತಿರುಗುತ್ತಿದ್ದ ಪೊಲೀಸರ ತಂಡ ರಕ್ತದ ಕಲೆಗಳನ್ನು ಗುರುತಿಸಿ ವಿಚಾರಿಸಿದೆ. ಈ ವೇಳೆ ಬಾಲಕನಿಗೆ ಇರಿದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಚೂರಿ ಇರಿತ ಸಾರ್ವಜನಿಕ ಸ್ಥಳದಲ್ಲೇ ನಡೆದಿದೆ. ಎಲ್ಎನ್ಜೆಪಿ ಆಸ್ಪತ್ರೆಗೆ ಬಳಿಕ ಗಾಯಾಳು ಬಾಲಕನ್ನು ದಾಖಲಿಸಲಾಗಿತ್ತು. ಆದರೆ ಬಾಲಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ಡಿಸಿಪಿ ಅಪೂರ್ವ ಗುಪ್ತಾ ತಿಳಿಸಿದ್ದಾರೆ.

ಸಚಿನ್ ಮತ್ತು ಆತನ ಸ್ನೇಹಿತ ಮೊಬೈಲ್ ಖರೀದಿಸಿ ಮನೆಗೆ ಮರಳುತ್ತಿದ್ದಾಗ ದಾರಿ ಮಧ್ಯೆ ಸ್ನೇಹಿತರ ಗುಂಪು ಟ್ರೀಟ್ ಕೊಡುವಂತೆ ಬೇಡಿಕೆ ಇಟ್ಟಿದೆ. ಈ ವೇಳೆ ಸಚಿನ್ ನಿರಾಕರಿಸಿದ್ದು, ವಾಗ್ವದ ನಡೆದು ಚೂರಿ ಇರಿತ ನಡೆದಿದೆ. ಈ ಕುರಿತು ಶಕರ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಮೂವರು ಅಪ್ರಾಪ್ತ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News