ತೆಲಂಗಾಣ – ಛತ್ತೀಸ್ ಗಡದಲ್ಲಿ ʼಕೈʼಹಿಡಿಯಲಿರುವ ಮತದಾರ?
Update: 2023-12-03 09:23 IST
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ : ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಬಿಜೆಪಿ ಕಾಂಗ್ರೆಸ್ ನಡುವೆ ಜಿದ್ದಾ ಜಿದ್ದಿ ಏರ್ಪಡಿಸಿದೆ. ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ತೆಲಂಗಾಣ ಮತ್ತು ಛತ್ತೀಸ್ ಗಡದಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ.
ಛತ್ತೀಸ್ ಗಡದಲ್ಲಿ ಸಿಎಂ ಭೂಪೇಶ್ ಬಘೆಲ್ಗೆ ಆರಂಭಿಕ ಹಿನ್ನಡೆಯಾಗಿದೆ. ತೆಲಂಗಾಣದಲ್ಲಿ ಸಿಎಂ ಕೆಸಿಆರ್ ಅವರು ಎರಡು ಕ್ಷೇತ್ರದಲ್ಲಿ ಅದೃಷ್ಠ ಪರೀಕ್ಷೆಗೆ ಒಡ್ಡಿದ್ದು, ಗಜ್ವೆಲ್ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಮರೆಡ್ಡಿಯಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಮುನ್ನಡೆ ಪಡೆದಿದ್ದಾರೆ.
ಲೋಕಸಭಾ ಚುನಾವಣೆಗೆ ಮುನ್ನುಡಿ ಎಂದೇ ಭಾವಿಸಿರುವ ಪಂಚ ರಾಜ್ಯ ಚುನಾವಣೆಗಳ ಪೈಕಿ ನಾಲ್ಕು ರಾಜ್ಯಗಳ ಫಲಿತಾಂಶ ಇವತ್ತು ಹೊರಬೀಳಲಿದೆ. ಮಿಜೋರಾಂ ಫಲಿತಾಂಶ ನಾಳೆ ಬರಲಿದೆ.