×
Ad

ಹಣ ಅಕ್ರಮ ವರ್ಗಾವಣೆ ಪ್ರಕರಣ | ತೆಲಂಗಾಣ ಸಚಿವ ಶ್ರೀನಿವಾಸ ರೆಡ್ಡಿ, ಇತರರು ನಂಟು ಹೊಂದಿದ ಸ್ಥಳಗಳ ಮೇಲೆ ಈಡಿ ದಾಳಿ

Update: 2024-09-27 20:28 IST

ಶ್ರೀನಿವಾಸ ರೆಡ್ಡಿ | PTI

ಹೈದರಾಬಾದ್ : ನೂರು ಕೋಟಿ ರೂ.ಗೂ ಅಧಿಕ ಅಕ್ರಮ ಸಾಗಾಟ ಜಾಲದೊಂದಿಗೆ ನಂಟು ಹೊಂದಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣದ ಭಾಗವಾಗಿ ತೆಲಂಗಾಣದ ಕಂದಾಯ ಸಚಿವ ಪಿ. ಶ್ರೀನಿವಾಸ ರೆಡ್ಡಿ ಹಾಗೂ ಇತರ ಕೆಲವರಿಗೆ ಸೇರಿದ ಹಲವು ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ(ಈಡಿ) ಶುಕ್ರವಾರ ಶುಕ್ರವಾರ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಹೈದರಾಬಾದ್ ಸೇರಿದಂತೆ ರಾಜ್ಯದ ಸುಮಾರು 5 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅದು ಹೇಳಿದೆ.

5 ಕೋಟಿ ರೂ. ಮೌಲ್ಯದ 7 ವಾಚ್‌ಗಳನ್ನು ಖರೀದಿಸಿದ್ದಾರೆಂದು ಹೇಳಲಾದ ರಾಘವ ಸಮೂಹದ ರೆಡ್ಡಿ ಅವರ ಪುತ್ರ ಹರ್ಷ ರೆಡ್ಡಿ ವಿರುದ್ಧ ಕಂದಾಯ ಬೇಹುಗಾರಿಕೆ ನಿರ್ದೇಶನಾಲಯ(ಈಡಿ) ದಾಖಲಿಸಿದ ದೂರು ಈ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಮೂಲವನ್ನು ಹೊಂದಿದೆ.

ಈ ಪಾವತಿ 100 ಕೋಟಿ ರೂ.ನ ಹವಾಲಾ ಹಾಗೂ ಕ್ರಿಪ್ಟೋ ಕರೆನ್ಸಿ ಜಾಲಕ್ಕೆ ನಂಟು ಹೊಂದಿದೆ ಎಂದು ಹೇಳಲಾಗಿದೆ. ನವೀನ್ ಕುಮಾರ್ ಹೆಸರಿನ ವ್ಯಕ್ತಿ ಈಗ ಜಾರಿ ನಿರ್ದೇಶನಾಲಯ(ಈಡಿ)ದ ಪರಿಶೀಲನೆಯಲ್ಲಿದ್ದಾನೆ.

ಪೊಂಗುಲೇಟಿ ಶ್ರೀನಿವಾಸ ರೆಡ್ಡಿ ಕಾಂಗ್ರೆಸ್ ನಾಯಕ. ಇವರು ತೆಲಂಗಾಣ ಸರಕಾರದಲ್ಲಿ ಕಂದಾಯ, ಗೃಹ, ಮಾಹಿತಿ ಹಾಗೂ ಸಾರ್ವಜನಿಕ ಸಂಪರ್ಕ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News