×
Ad

ಯುದ್ಧವಿಮಾನದಿಂದ ರುದ್ರ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

Update: 2024-05-29 22:07 IST

PC: PTI

ಹೊಸದಿಲ್ಲಿ : ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO)ಯು ಬುಧವಾರ ಪೂರ್ವಾಹ್ನ 11:30ರ ಸುಮಾರಿಗೆ ಒಡಿಶಾ ಕರಾವಳಿಯಾಚೆಯಿಂದ ಎಸ್‌ಯು-30 ಎಂಕೆಐ ಯುದ್ಧವಿಮಾನದ ಮೂಲಕ ತನ್ನ ರುದ್ರ M- IIಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಉಡಾವಣೆಯನ್ನು ನಡೆಸಿದೆ. ಈ ಕ್ಷಿಪಣಿಯು ಆಗಸದಿಂದ ಭೂಮಿಯ ಮೇಲಿನ ಗುರಿಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ.

ರುದ್ರ M- IIಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯು ಎಲ್ಲ ಪ್ರಾಯೋಗಿಕ ಉದ್ದೇಶಗಳನ್ನು ಪೂರೈಸಿದೆ. ಪ್ರೊಪಲ್ಶನ್ ಸಿಸ್ಟಮ್,ನಿಯಂತ್ರಣ ಮತ್ತು ಮಾರ್ಗದರ್ಶನ ಅಲ್ಗರಿದಂ ಅನ್ನು ಮೌಲ್ಯೀಕರಿಸಿದೆ ಎಂದು ರಕ್ಷಣಾ ಸಚಿವಾಲಯವು ತಿಳಿಸಿದೆ.

ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಉಡಾವಣೆಗಾಗಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಡಿಆರ್‌ಡಿಒ ಮತ್ತು ವಾಯುಪಡೆಯನ್ನು ಅಭಿನಂದಿಸಿದ್ದಾರೆ.

ಯಶಸ್ವಿ ಪರೀಕ್ಷೆಯು ಸಶಸ್ತ್ರ ಪಡೆಗಳ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ರುದ್ರ M- IIಕ್ಷಿಪಣಿಯ ಪಾತ್ರವನ್ನು ಸಾಬೀತುಗೊಳಿಸಿದೆ ಎಂದು ಅವರು ಹೇಳಿದ್ದಾರೆ.

ರುದ್ರ M- II ಸ್ಥಳೀಯವಾಗಿ ಅಭಿವೃದ್ಧಿಗೊಳಿಸಲಾದ ಸಾಲಿಡ್-ಪ್ರೊಪೆಲ್ಡ್ ಏರ್-ಲಾಂಚ್ಡ್ ಕ್ಷಿಪಣಿ ವ್ಯವಸ್ಥೆಯಾಗಿದ್ದು ವಿವಿಧ ರೀತಿಗಳ ಶತ್ರು ಆಸ್ತಿಗಳನ್ನು ನಾಶಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ.

ವಿವಿಧ ಡಿಆರ್‌ಡಿಒ ಲ್ಯಾಬ್‌ಗಳು ಸ್ಥಳೀಯವಾಗಿ ಅಭಿವೃದ್ಧಿಗೊಳಿಸಿರುವ ಹಲವಾರು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಕ್ಷಿಪಣಿ ವ್ಯವಸ್ಥೆಯಲ್ಲಿ ಅಳವಡಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News