×
Ad

ಜೀವ ಬಲಿ ಪಡೆದ ಇನ್ಸ್ಟಾಗ್ರಾಂ ರೀಲ್ ಹುಚ್ಚು

Update: 2024-04-19 21:03 IST

ಲಕ್ನೋ : ವೈರಲ್ ಇನ್ಸ್ಟಾಗ್ರಾಂ ರೀಲ್ ಸೃಷ್ಟಿಸುವ ಹುಚ್ಚು ಯುವಕನೋರ್ವನ ಜೀವವನ್ನು ಬಲಿ ಪಡೆದ ಘಟನೆ ಉತ್ತರ ಪ್ರದೇಶದ ಬಂಡಾ ಜಿಲ್ಲೆಯ ಖೈರಡಾ ಗ್ರಾಮದಲ್ಲಿ ಸಂಭವಿಸಿದೆ. 21ರ ಹರೆಯದ ಶಿವಂ ಶಾಲೆಯ ಛಾವಣಿಯ ಮೇಲಿನ ಧ್ವಜಸ್ತಂಭದಿಂದ ತಲೆ ಕೆಳಗಾಗಿ ನೇತಾಡುತ್ತಿದ್ದು, ಆತನ ಸ್ನೇಹಿತರು ಈ ಸಾಹಸವನ್ನು ಚಿತ್ರೀಕರಿಸುತ್ತಿದ್ದರು. ಅದೇ ಸ್ಥಿತಿಯಲ್ಲಿ ಸ್ತಂಭದಲ್ಲಿ ಧ್ವಜವನ್ನು ಹಾರಿಸಲು ಶಿವಂ ಬಯಸಿದ್ದ. ಆದರೆ ಸಿಮೆಂಟಿನ ಸ್ತಂಭ ಭಾರವನ್ನು ತಾಳಲಾದರೆ ಮುರಿದು ಬಿದ್ದಿದ್ದು, ಅದರಡಿ ಸಿಲುಕಿ ಸ್ಥಳದಲಿಯೇ ಮೃತಪಟ್ಟಿದ್ದಾನೆ.

ಗುರುವಾರ ಸಂಜೆ ಈ ಘಟನೆ ನಡೆದಿದೆ. ತನ್ನ ತಂದೆಯನ್ನು ರೈಲು ನಿಲ್ದಾಣದಿಂದ ಮನೆಗೆ ಬಿಟ್ಟಿದ್ದ ಶಿವಂ ಬಳಿಕ ಗ್ರಾಮದಲ್ಲಿಯ ಜ್ಯೂನಿಯರ್ ಹೈಸ್ಕೂಲ್ ಗೆ ತೆರಳಿದ್ದ. ಆತನ ಸ್ನೇಹಿತರಾದ ಅನು ಮತ್ತು ಅಂಕಿತ್ ಅದಾಗಲೇ ಅಲ್ಲಿ ಕಾಯುತ್ತಿದ್ದರು. ಮೂವರೂ ಶಾಲೆಯ ಛಾವಣಿಯನ್ನು ಹತ್ತಿದ್ದು, ಇದು ಶಿವಂ ಮಾಡುವ ಕೊನೆಯ ಇನ್ಸ್ಟಾಗ್ರಾಂ ಸ್ಟಂಟ್ ಆಗಲಿದೆ ಎನ್ನುವುದು ಅವರಿಗೆ ಗೊತ್ತಿರಲಿಲ್ಲ. ಅವರು ಚಿತ್ರೀಕರಣ ಆರಂಭಿಸಿದ ಬೆನ್ನಲ್ಲೇ ಧ್ವಜಸ್ತಂಭ ಮುರಿದು ಬಿದ್ದಿತ್ತು.

ಶಿವಮ್ ನ ಇನ್ಸ್ಟಾಗ್ರಾಂ ಫೀಡ್ ಆತ ಮರಗಳು ಮತ್ತು ಸೀಲಿಂಗ್ ಗಳಿಂದ ತಲೆ ಕೆಳಗಾಗಿ ಜೋತು ಬಿದ್ದು ವ್ಯಾಯಾಮ ಮಾಡುವ ವೀಡಿಯೊಗಳಿಂದ ತುಂಬಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News