×
Ad

ತಿರುವನಂತಪುರ: ರೈಲು ಹಳಿಯಲ್ಲಿ ಐಬಿ ಅಧಿಕಾರಿಯ ಮೃತದೇಹ ಪತ್ತೆ

Update: 2025-03-24 22:46 IST

ಮೇಘಾ ಮಧುಸೂಧನನ್ | PC  : keralakaumudi.com

ತಿರುವನಂತಪುರ: ಇಲ್ಲಿನ ಚಾಕಾ ಸಮೀಪದ ರೈಲು ಹಳಿಯಲ್ಲಿ ಮಹಿಳೆಯೋರ್ವರ ಮೃತದೇಹ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ.

ಮೃತ ಮಹಿಳೆಯನ್ನು ಪತ್ತನಂತಿಟ್ಟದ ಅತಿರುಂಕಳ್‌ನ ನಿವಾಸಿ ಮೇಘಾ ಮಧುಸೂಧನನ್ (25) ಎಂದು ಗುರುತಿಸಲಾಗಿದೆ.

ವಿಧಿ ವಿಜ್ಞಾನದ ಪದವೀಧರೆಯಾಗಿರುವ ಮೇಘಾ ಅವರು ತಿರುವನಂತಪುರದ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ವಿಭಾಗದ ಬೇಹುಗಾರಿಕೆ ಬ್ಯೂರೊ ಅಧಿಕಾರಿಯಾಗಿ ಹುದ್ದೆ ಪಡೆದ ಬಳಿಕ ತಿರುವನಂತಪುರಕ್ಕೆ ಸ್ಥಳಾಂತರಗೊಂಡಿದ್ದರು.

‘‘ಪ್ರಾಥಮಿಕ ತನಿಖೆ ಇದು ಆತ್ಮಹತ್ಯೆ ಪ್ರಕರಣ ಎಂದು ಹೇಳಿದೆ. ಆದರೆ, ನಮಗೆ ಸುಸೈಡ್ ನೋಟ್ ಸಿಕ್ಕಿಲ್ಲ. ಮುಂದಿನ ತನಿಖೆ ನಡೆಯುತ್ತಿದೆ’’ ಎಂದು ಪೆಟ್ಟಾಹ್ ಸಿಐ ಪ್ರೇಮ್ ಕುಮಾರ್ ತಿಳಿಸಿದ್ದಾರೆ.

ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಈ ಕುರಿತು ಸೋಮವಾರ ಬೆಳಗ್ಗೆ 8.30 ರಿಂದ 9.00 ಗಂಟೆಗಳ ನಡುವೆ ಪೊಲೀಸರಿಗೆ ಮಾಹಿತಿ ನೀಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News