×
Ad

ಈ ತಿಂಗಳು ಅಮೆರಿಕದಿಂದ ಮೂರು ಅಪಾಚೆ ಹೆಲಿಕಾಪ್ಟರ್‌ಗಳು ಭಾರತೀಯ ಸೇನೆಗೆ ಸೇರ್ಪಡೆ

Update: 2025-07-04 08:13 IST

PC: x.com/RyszardJonski

ಹೊಸದಿಲ್ಲಿ: ಅಮೆರಿಕದಿಂದ 5691 ಕೋಟಿ ರೂಪಾಯಿ ವೆಚ್ಚದಲ್ಲಿ ಖರೀದಿಸಲು 2020ರ ಫೆಬ್ರವರಿಯಲ್ಲಿ ಮಾಡಿಕೊಂಡ ಒಪ್ಪಂದದ ಅನ್ವಯ "ವಾಯುಪ್ರದೇಶದ ಯುದ್ಧಟ್ಯಾಂಕರ್" ಎಂದೇ ಬಣ್ಣಿಸಲಾದ ಆರು ಅತ್ಯಾಧುನಿಕ ಅಪಾಚೆ ಹೆಲಿಕಾಪ್ಟರ್‌ಗಳ ಮೊದಲ ಕಂತಿನಲ್ಲಿ ಮೂರು ಹೆಲಿಕಾಪ್ಟರ್‌ಗಳು ಈ ತಿಂಗಳು ಭಾರತೀಯ ಸೇನೆಗೆ ಸೇರ್ಪಡೆಯಾಗಲಿವೆ.

ಬೋಯಿಂಗ್ ಕಂಪನಿ ಉತ್ಪಾದಿಸಿದ ಮೊದಲ ಮೂರು ಅಪಾಚೆ ಹೆಲಿಕಾಪ್ಟರ್‌ಗಳನ್ನು ಜುಲೈ 15ರಂದು ವಿತರಿಸಲಾಗುತ್ತಿದೆ. ಉಳಿದ ಮೂರು ನವೆಂಬರ್ ವೇಳೆಗೆ ಲಭ್ಯವಾಗಲಿವೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜತೆ ನಡೆಸಿದ ದೂರವಾಣಿ ಮಾತುಕತೆ ವೇಳೆ ಹೇಳಿದ್ದಾರೆ. ಆರು ಹೆಲಿಡ್ಯೂಟಿ ಹೆಲಿಕಾಪ್ಟರ್‌ಗಳು ಈ ವರ್ಷದ ಒಳಗಾಗಿ ಸೇನೆ ತಲುಪಲಿವೆ ಎಂದು ಅವರು ಭರವಸೆ ನೀಡಿದ್ದಾರೆ.

ಹೊಸ ಆರು ಹೆಲಿಕಾಪ್ಟರ್‌ಗಳೊಂದಿಗೆ ಭಾರತೀಯ ಸೇನೆಯಲ್ಲಿ 22 ಇಂಥ ಹೆಲಿಕಾಪ್ಟರ್‌ಗಳು ಇರುವಂತಾಗಲಿದೆ. 2015ರ ಸೆಪ್ಟೆಂಬರ್ ನಲ್ಲಿ ಅಮೆರಿಕ ಜತೆ ಮಾಡಿಕೊಂಡ 13,952 ಕೋಟಿ ರೂಪಾಯಿಯ ಒಪ್ಪಂದದ ಅಡಿಯಲ್ಲಿ ಈ ಹೆಲಿಕಾಪ್ಟರ್‌ಗಳನ್ನು ಖರೀದಿಸಲಾಗಿದೆ. ಈ ಪೈಕಿ ಕಳೆದ ವರ್ಷದ ಏಪ್ರಿಲ್ 4ರಂದು ಲಡಾಖ್ ನ ಖರ್ದುಂಗ್ ಲಾ ಬಳಿ ಲ್ಯಾಂಡಿಂಗ್ ವೇಳೆ ತೀವ್ರ ಹಾನಿಗೆ ಒಳಗಾಗಿತ್ತು.

ಭಾರತೀಯ ಸೇನೆ ಕಳೆದ ವರ್ಷದ ಮಾರ್ಚ್ ನಲ್ಲಿ ಪಶ್ಚಿಮ ಗಡಿಯ ಜೋಧ್‌ಪುರ ಬಳಿ ಅಪಾಚೆ ಸ್ಕ್ವಾಡರ್ನ್ ಅಭಿವೃದ್ಧಿಪಡಿಸಿದ್ದರೂ, ಪೂರೈಕೆ ಸರಣಿ ಸಮಸ್ಯೆಯಿಂದಾಗಿ ಹೆಲಿಕಾಪ್ಟರ್ ಗಳ ವಿತರಣೆ ವಿಳಂಬವಾಗಿತ್ತು. ಇದು ಏರ್-ಟೂ-ಏರ್ ಕ್ಷಿಪಣಿಗಳು, ವಾಯುಪ್ರದೇಶದಿಂದ ಭೂಮಿಯ ಮೇಲೆ ದಾಳಿ ಮಾಡುವ ಕ್ಷಿಪಣಿಗಳು, ಬಂದೂಕು ಮತ್ತು ರಾಕೆಟ್ ಗಳಿಂದ ಸಜ್ಜಿತವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News