×
Ad

ಹೊಸ ಪಕ್ಷ ಘೋಷಿಸಿದ ಟಿಎಮ್‌ಸಿ ಮಾಜಿ ಶಾಸಕ ಹುಮಾಯೂನ್ ಕಬೀರ್

Update: 2025-12-22 23:05 IST

ಹುಮಾಯೂನ್ ಕಬೀರ್ | Photo Credit ; ANI 

ಕೋಲ್ಕತಾ, ಡಿ. 22: ತೃಣಮೂಲ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಹುಮಾಯೂನ್ ಕಬೀರ್ ಸೋಮವಾರ ಜನತಾ ಉನ್ನಯನ್ ಪಾರ್ಟಿ ಎಂಬ ಹೊಸ ಪಕ್ಷವನ್ನು ಘೋಷಿಸಿದ್ದಾರೆ.

ಸಾಮಾನ್ಯ ಜನರಿಗಾಗಿ ಕೆಲಸ ಮಾಡುವುದಕ್ಕಾಗಿ ಪಕ್ಷವನ್ನು ಸ್ಥಾಪಿಸಲಾಗುವುದು ಎಂದು ಅವರು ಈ ಮೊದಲು ಹೇಳಿದ್ದರು.

ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ನಲ್ಲಿ ಡಿಸೆಂಬರ್ 6ರಂದು ತಾನು ಬಾಬರಿ ಮಸೀದಿಯನ್ನು ಉದ್ಘಾಟಿಸುವುದಾಗಿ ಹೇಳಿದ ಬಳಿಕ ಅವರನ್ನು ಟಿಎಮ್‌ಸಿ ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ಬಳಿಕ ಅವರು ಬಾಬರಿ ಮಸೀದಿಯನ್ನು ಹೋಲುವ ಮಸೀದಿಯೊಂದಕ್ಕೆ ಅಡಿಪಾಯವನ್ನೂ ಹಾಕಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News