×
Ad

ತರಬೇತು ಕೇಂದ್ರಗಳು ಸಾವಿನ ಕೊಠಡಿಗಳಾಗಿ ಮಾರ್ಪಟ್ಟಿವೆ | ಐಎಎಸ್ ಆಕಾಂಕ್ಷಿಗಳ ಸಾವಿನ ಕುರಿತು ಸುಪ್ರೀಂ ಕೋರ್ಟ್

Update: 2024-08-05 21:48 IST

ಸುಪ್ರೀಂ ಕೋರ್ಟ್ |  PC : PTI  

ಹೊಸದಿಲ್ಲಿ : ದಿಲ್ಲಿಯ ತರಬೇತು ಕೇಂದ್ರದ ತಳ ಅಂತಸ್ತಿನಲ್ಲಿ ಇತ್ತೀಚೆಗೆ ಮೂವರು ನಾಗಾರಿಕ ಸೇವಾ ಪರೀಕ್ಷೆಯ ಆಕಾಂಕ್ಷಿಗಳು ಮೃತಪಟ್ಟಿರುವುದನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್ ತರಬೇತು ಕೇಂದ್ರಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ಈ ಕುರಿತು ತೆಗೆದುಕೊಂಡ ಸರಿಪಡಿಸುವ ಕ್ರಮಗಳ ಕುರಿತು ಕೇಂದ್ರ ಸರಕಾರ ಹಾಗೂ ದಿಲ್ಲಿ ಸರಕಾರಗಳಿಗೆ ಸುಪ್ರೀಂ ಕೋರ್ಟ್ ನೋಟಿಸು ನೀಡಿದೆ.

ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿರುವ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಉಜ್ಜಲ್ ಭುಯಾನ್ ಅವರ ಪೀಠ, ಇತ್ತೀಚೆಗೆ ನಡೆದ ಘಟನೆ ಎಲ್ಲರ ಕಣ್ಣು ತೆರೆಸುವಂತಿತ್ತು ಎಂದು ಅಭಿಪ್ರಾಯಿಸಿದೆ. ಸರಕಾರದ ಎಲ್ಲಾ ನಿಯಮಗಳನ್ನು ಅನುಸರಿಸಿದರೆ ಮಾತ್ರ ತರಬೇತು ಕೇಂದ್ರಗಳಿಗೆ ಕಾರ್ಯ ನಿರ್ವಹಿಸಲು ಅವಕಾಶ ನೀಡಬೇಕು ಎಂದು ಪೀಠ ನಿರ್ದೇಶಿಸಿತು.

‘‘ಈ ಸ್ಥಳ (ತರಬೇತು ಕೇಂದ್ರಗಳು)ಗಳು ಸಾವಿನ ಕೊಠಡಿಗಳಾಗಿವೆ. ಸುರಕ್ಷತಾ ನಿಯಮಗಳು ಹಾಗೂ ಗೌರವಯುತ ಬದುಕಿಗೆ ಮೂಲಭೂತ ನಿಬಂಧನೆಗಳನ್ನು ಸಂಪೂರ್ಣವಾಗಿ ಅನುಸರಿಸದೇ ಇದ್ದರೆ, ತರಬೇತು ಸಂಸ್ಥೆಗಳು ಆನ್‌ಲೈನ್ ಮೂಲಕ ಕಾರ್ಯ ನಿರ್ವಹಿಸಬಹುದು. ತರಬೇತು ಕೇಂದ್ರಗಳು ದೇಶದ ವಿವಿಧ ಭಾಗಗಳಿಂದ ಬರುವ ಆಕಾಂಕ್ಷಿಗಳ ಜೀವದೊಂದಿಗೆ ಆಟವಾಡುತ್ತಿದೆ’’ ಎಂದು ಪೀಠ ಹೇಳಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News