×
Ad

ತ್ರಿಪುರ | ಬಿಜೆಪಿ ಬೆಂಬಲಿತ ಗೂಂಡಾಗಳು ಪಕ್ಷದ ಕಚೇರಿಗೆ ಹಾನಿ ಮಾಡಿದ್ದಾರೆ : ಪ್ರತಿಪಕ್ಷ ಸಿಪಿಎಂ ಆರೋಪ

Update: 2025-09-20 21:39 IST

PC : @cpimspeak

ಅಗರ್ತಲಾ,ಸೆ.20: ಪಶ್ಚಿಮ ತ್ರಿಪುರಾದ ಪ್ರತಾಪಗಢ ಪ್ರದೇಶದಲ್ಲಿ ಬಿಜೆಪಿ ಬೆಂಬಲಿತ ಗೂಂಡಾಗಳು ತನ್ನ ಪಕ್ಷದ ಕಚೇರಿಗೆ ಬುಲ್‌ಡೋಝರ್‌ನಿಂದ ಹಾನಿ ಮಾಡಿದ್ದಾರೆಂದು ಪ್ರತಿಪಕ್ಷ ಸಿಪಿಎಂ ಶನಿವಾರ ಆಪಾದಿಸಿದೆ.

ಸಿಪಿಎಂ ಸ್ಥಳೀಯ ಸಮಿತಿಯ ಕಚೇರಿಗೆ , ಶುಕ್ರವಾರ ನಸುಕಿನಲ್ಲಿ 1.30ರ ವೇಳೆಗೆ ಬುಲ್‌ಡೋಝರ್‌ನೊಂದಿಗೆ ಆಗಮಿಸಿದ ಗೂಂಡಾಗಳು ಕಟ್ಟಡಕ್ಕೆ ಹಾನಿ ಮಾಡಿದ್ದಾರೆಂದು ತ್ರಿಪುರಾ ವಿಧಾನಸಭೆಯ ಪ್ರತಿಪಕ್ಷ ನಾಯಕ ಜಿತೇಂದ್ರ ಚೌಧರಿ ಆಪಾದಿಸಿದ್ದಾರೆ.

ಪ್ರಜಾತಾಂತ್ರಿಕ ಮೌಲ್ಯಗಳ ಬಗ್ಗೆ ಬಿಜೆಪಿ ಹಾಗೂ ಆರೆಸ್ಸೆಸ್‌ಗೆ ಇರುವ ‘ಗೌರವ’ವನ್ನು ಈ ವಿಧ್ವಂಸ ಕೃತ್ಯ ತೋರಿಸಿಕೊಡುತ್ತದೆ ಎಂದು ಚೌಧುರಿ ಹೇಳಿದ್ದಾರೆ.

‘‘ಹುಸಿ ಭರವಸೆಗಳೊಂದಿಗೆ ಅಧಿಕಾರಕ್ಕೇರಿದ ಬಿಜೆಪಿಯು, ಸಾರ್ವಜನಿಕ ನಿಧಿಗಳನ್ನು ದೋಚುತ್ತಿದೆ ಹಾಗೂ ರಾಜ್ಯದ ಪ್ರಜಾತಾಂತ್ರಿಕ ಮೌಲ್ಯಗಳನ್ನು ನಾಶಪಡಿಸುತ್ತಿದೆ ’’ ಎಂದವರು ಆಪಾದಿಸಿದರು.

ಕಗ್ಗತ್ತಲೆಯ ಮರೆಯಲ್ಲಿ ಈ ಹೇಡಿತನದ ಕೃತ್ಯವನ್ನು ನಡೆಸಲಾಗಿದೆ. ಈ ಬಗ್ಗೆ ಪೊಲೀಸರು ದೂರು ನೀಡಿದ್ದರೂ ಅವರು ಕಾರ್ಯಪ್ರವೃತ್ತರಾಗಿಲ್ಲ ಮತ್ತು ಯಾರನ್ನೂ ಬಂಧಿಸಿಲ್ಲವೆಂದು ಚೌಧುರಿ ಆಪಾದಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಸಿಪಿಎಂ ಪಕ್ಷದ ಕಚೇರಿಯ ಮೇಲೆ ದಾಳಿ ನಡೆದಿರುವುದು ಇದು ಏಳನೇ ಸಲವಾಗಿದೆ ಎಂದವರು ಆಪಾದಿಸಿದ್ದಾರೆ.

ಈ ಮಧ್ಯೆ ಪೊಲೀಸರು ಹೇಳಿಕೆಯೊಂದನ್ನು ನೀಡಿದ್ದು, ದಾಳಿಗೆ ಬಳಸಲಾದ ಜೆಸಿಬಿಯನ್ನು ಮುಟ್ಟುಗೋಲು ಹಾಕಲಾಗಿದೆ ಹಾಗೂ ತನಿಖೆ ನಡೆಯುತ್ತಿದೆ ಎಂದು ಪೂರ್ವ ಅಗರ್ತಲಾ ಪೊಲೀಸ್ ಠಾಣಾ ಉಸ್ತುವಾರಿ ಸುಬ್ರತ ದೇಬನಾಥ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News