×
Ad

ಟ್ರಂಪ್‌ಗೆ ಸಾಧ್ಯವಾದರೆ, ಮೋದಿಗೂ ಸಾಧ್ಯ: ಮಡುರೊ ಅವರಂತೆ ಮಸೂದ್ ಅಝರ್‌ನನ್ನು ಸೆರೆಹಿಡಿಯಲು ಉವೈಸಿ ಆಗ್ರಹ

Update: 2026-01-04 16:26 IST

ಅಸದುದ್ದೀನ್ ಉವೈಸಿ |  Photo Credit : PTI 

ಹೊಸದಿಲ್ಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಸೆರೆಹಿಡಿಯಲು ಸಾಧ್ಯವಾದರೆ, ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್‌ಗಳನ್ನು ಪಾಕಿಸ್ತಾನದಿಂದ ಯಾಕೆ ಸೆರೆ ಹಿಡಿದು ತಂದಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ, ಪ್ರಧಾನಿ ಮೋದಿಗೆ ಪ್ರಶ್ನಿಸಿದ್ದಾರೆ.

ವೆನೆಜುವೆಲಾದಲ್ಲಿನ ಅಮೆರಿಕದ ಮಿಲಿಟರಿ ಕಾರ್ಯಾಚರಣೆಯನ್ನು ಉಲ್ಲೇಖಿಸಿದ ಉವೈಸಿ, ಟ್ರಂಪ್ ಅವರು ಮಡುರೊ ಅವರನ್ನು ಸೆರೆಹಿಡಿದು ಅಮೆರಿಕಕ್ಕೆ ಕರೆದೊಯ್ದರು. ಮುಂಬೈ ಭಯೋತ್ಪಾದಕ ದಾಳಿಯ ಸಂಚು ರೂಪಿಸಿದ ಆರೋಪ ಹೊತ್ತಿರುವವರ ವಿರುದ್ಧ ಭಾರತ ಏಕೆ ಕ್ರಮ ಕೈಗೊಳ್ಳಲು ವಿಫಲವಾಗಿದೆ ಎಂದು ಪ್ರಶ್ನಿಸಿದರು.

"ಇಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪಡೆಗಳು ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಸೆರೆಹಿಡಿದು ಅವರ ದೇಶದಿಂದ ಅಮೆರಿಕಕ್ಕೆ ಕರೆದೊಯ್ದಿದ್ದಾರೆ ಎಂದು ಕೇಳಿದ್ದೇವೆ. ಅವರ ಸ್ವಂತ ದೇಶದಿಂದಲೇ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಪಹರಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಸಾಧ್ಯವಾದರೆ, ನೀವು (ಪ್ರಧಾನಿ ಮೋದಿ) ಪಾಕಿಸ್ತಾನಕ್ಕೂ ಹೋಗಿ 26/11ರ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಅನ್ನು ಭಾರತಕ್ಕೆ ಕರೆತರಬಹುದು ಎಂದು ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉವೈಸಿ ಹೇಳಿದ್ದಾರೆ.

ಬಳಿಕ ತನ್ನ ಭಾಷಣವನ್ನು ಮುಂದುವರಿಸಿದ ಉವೈಸಿ, ಪ್ರಧಾನಿಯವರಿಗೆ ಪಾಕಿಸ್ತಾನಕ್ಕೆ ಸೈನ್ಯವನ್ನು ಕಳುಹಿಸುವಂತೆ ಮತ್ತು ಮಸೂದ್ ಅಝರ್ ಮತ್ತು ಲಷ್ಕರೆ ತೈಬಾದ ಭಯೋತ್ಪಾದಕರನ್ನು ಮರಳಿ ಕರೆತರುವಂತೆ ಆಗ್ರಹಿಸಿದ್ದಾರೆ.

"ಮೋದೀಜಿ, ನಾವು ನಿಮಗೆ ಹೇಳುತ್ತಿದ್ದೇವೆ, ನೀವು ಪಾಕಿಸ್ತಾನಕ್ಕೆ ಸೈನ್ಯವನ್ನು ಕಳುಹಿಸಿ 26/11 ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ನ್ನು ಭಾರತಕ್ಕೆ ಕರೆತರಲು ಏಕೆ ಸಾಧ್ಯವಿಲ್ಲ, ಅದು ಮಸೂದ್ ಅಝರ್ ಆಗಿರಲಿ ಅಥವಾ ಲಷ್ಕರೆ ತೈಬಾದ ಕ್ರೂರ ರಾಕ್ಷಸನಾಗಿರಲಿ. ಟ್ರಂಪ್‌ಗೆ ಸಾಧ್ಯವಾದರೆ ಮೋದಿ ಜಿ, ನೀವು ಕಡಿಮೆ ಇಲ್ಲ. ಟ್ರಂಪ್‌ಗೆ ಸಾಧ್ಯವಾದರೆ, ನೀವು ಕೂಡ ಅದನ್ನು ಮಾಡಬೇಕಾಗುತ್ತದೆ" ಎಂದು ಉವೈಸಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News