×
Ad

ಕೇರಳ | 'ಎರಡು ರೂಪಾಯಿ ವೈದ್ಯ' ಡಾ. ಎ.ಕೆ. ರೈರು ಗೋಪಾಲ್ ನಿಧನ

Update: 2025-08-03 15:35 IST

ಡಾ. ಎ.ಕೆ. ರೈರು ಗೋಪಾಲ್ (Photo credit: mathrubhumi.com)

ಕಣ್ಣೂರು: ಕೇರಳದ ಜನಪ್ರಿಯ ವೈದ್ಯ, ಕಡಿಮೆ ಶುಲ್ಕದಲ್ಲಿ ಜನರಿಗೆ ಆರೋಗ್ಯ ಸೇವೆಗಳನ್ನು ಒದಗಿಸುವ ಮೂಲಕ ಹೆಸರುವಾಸಿಯಾಗಿದ್ದ ಡಾ. ಎ.ಕೆ. ರೈರು ಗೋಪಾಲ್ ಅವರು ನಿಧನರಾಗಿದ್ದಾರೆ.

ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಕಳೆದ ಐದು ದಶಕಗಳಿಂದ ಕೇವಲ ಎರಡು ರೂಪಾಯಿಗೆ ಚಿಕಿತ್ಸೆ ನೀಡುವ ಮೂಲಕ ಡಾ. ಎ.ಕೆ. ರೈರು ಗೋಪಾಲ್ ಹೆಸರುವಾಸಿಯಾಗಿದ್ದರು. 50 ವರ್ಷಗಳಿಗೂ ಹೆಚ್ಚು ಕಾಲ ಡಾ. ಗೋಪಾಲ್ ಸಾಮಾನ್ಯ ಜನರಿಗೆ ಆಶಾಕಿರಣವಾಗಿದ್ದರು. ಅವರು ಸಮಾಲೋಚನೆಗೆ ಕೇವಲ 2ರೂ. ಶುಲ್ಕ ವಿಧಿಸುತ್ತಿದ್ದರು ಮತ್ತು ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಉಚಿತ ಔಷಧವನ್ನು ಒದಗಿಸುತ್ತಿದ್ದರು. ಅವರು ದಿನಕ್ಕೆ 300ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು.

ಡಾ. ಎ.ಕೆ. ರೈರು ಗೋಪಾಲ್ ಅವರು ಪತ್ನಿ, ಮಗ ಮತ್ತು ಮಗಳನ್ನು ಅಗಲಿದ್ದಾರೆ. 

ಡಾ. ರೈರು ಗೋಪಾಲ್ ನಿಧನಕ್ಕೆ ಕೇರಳ ಸಿಎಂ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದಾರೆ. ಜನರ ಡಾಕ್ಟರ್ ಆಗಿರುವ ರೈರು ತಾವು ನೀಡುವ ಚಿಕಿತ್ಸಗೆಗಾಗಿ ರೋಗಿಗಳಿಂದ ಎರಡು ರೂಪಾಯಿ ಶುಲ್ಕ ಪಡೆಯುತ್ತಿದ್ದರು. ಜನರಿಗೆ ಸೇವೆ ಸಲ್ಲಿಸುವ ಅವರ ಇಚ್ಛಾಶಕ್ತಿಯು ರೋಗಿಗಳಿಗೆ ನೆರವಾಗಿತ್ತು ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News