ಮಹಾರಾಷ್ಟ್ರ | ಜಂಟಿ ರ‍್ಯಾಲಿಯಲ್ಲಿ ಒಗ್ಗಟ್ಟು ಪ್ರದರ್ಶಿಸಿದ ಉದ್ಧವ್, ರಾಜ್ ಠಾಕ್ರೆ
Update: 2025-07-05 13:29 IST
Photo credit: PTI
ಮುಂಬೈ : 20 ವರ್ಷಗಳ ರಾಜಕೀಯ ವೈಮನಸ್ಸಿನ ನಂತರ ತಮ್ಮ ಸೋದರಸಂಬಂಧಿ ಉದ್ಧವ್ ಠಾಕ್ರೆ ಅವರೊಂದಿಗೆ ವೇದಿಕೆ ಹಂಚಿಕೊಂಡ ರಾಜ್ ಠಾಕ್ರೆ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಾಳ್ ಠಾಕ್ರೆಗೆ ಸಾಧ್ಯವಾಗದ್ದನ್ನು ಅವರು ಮಾಡುವಲ್ಲಿ ಯಶಸ್ವಿಯಾದರು ಎಂದು ಹೇಳಿದರು.
ಮುಂಬೈನ ವರ್ಲಿಯಲ್ಲಿ ಉದ್ಧವ್ ಠಾಕ್ರೆ ಅವರೊಂದಿಗೆ ಜಂಟಿ ರ‍್ಯಾಲಿಯಲ್ಲಿ ಮಾತನಾಡಿದ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ, ಯಾವುದೇ ರಾಜಕೀಯ ಅಥವಾ ಹೋರಾಟಕ್ಕಿಂತ ಮಹಾರಾಷ್ಟ್ರ ದೊಡ್ಡದು. ಇಂದು 20 ವರ್ಷಗಳ ನಂತರ ಉದ್ಧವ್ ಮತ್ತು ನಾನು ಒಂದಾಗಿದ್ದೇವೆ. ನಮ್ಮಿಬ್ಬರನ್ನೂ ಒಟ್ಟಿಗೆ ತರುವ ಕೆಲಸವನ್ನು ಬಾಳಾಸಾಹೇಬ್‌ಗೆ ಮಾಡಲು ಸಾಧ್ಯವಾಗಿಲ್ಲ, ಅದನ್ನು ದೇವೇಂದ್ರ ಫಡ್ನವೀಸ್ ಮಾಡಿದರು" ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾವಿರಾರು ಮರಾಠಿ ಕಾರ್ಯಕರ್ತರು ಮತ್ತು ಎರಡೂ ಪಕ್ಷಗಳ ಬೆಂಬಲಿಗರು ಭಾಗವಹಿಸಿದ್ದಾರೆ.