ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆ | 20 ವರ್ಷಗಳ ಬಳಿಕ ಒಂದಾದ ಸೋದರ ಸಂಬಂಧಿಗಳಾದ ಉದ್ಧವ್ - ರಾಜ್ ಠಾಕ್ರೆ
Update: 2025-12-24 13:25 IST
Photo credit: indiatoday.in
ಮುಂಬೈ: ಮಹತ್ವದ ಬೆಳವಣಿಗೆಯೊಂದರಲ್ಲಿ ಮುಂಬರುವ ಬೃಹನ್ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸುವುದಾಗಿ ಶಿವಸೇನೆ (ಉದ್ಧವ್ ಬಣ)ದ ಮುಖ್ಯಸ್ಥ ಉದ್ಧವ್ ಠಾಕ್ರೆ ಹಾಗೂ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಪ್ರಕಟಿಸಿದ್ದಾರೆ.
ಉದ್ಧವ್ ಠಾಕ್ರೆ ಹಾಗೂ ರಾಜ್ ಠಾಕ್ರೆ ಒಂದಾಗಿರುವುದನ್ನು ಐತಿಹಾಸಿಕ ಸಂಗತಿ ಎಂದು ಬುಧವಾರ ಬಣ್ಣಿಸಿರುವ ಶಿವಸೇನೆ ನಾಯಕ ಸಂಜಯ್ ರಾವತ್, ಈ ಗಳಿಗೆಗಾಗಿ ಜನರು ಎದುರು ನೋಡುತ್ತಿದ್ದರು ಎಂದು ಹೇಳಿದ್ದಾರೆ.
"ಇಂದು ಇಲ್ಲಿ ಹಾಜರಿರುವ ಜನರ ಉತ್ಸಾಹ ಮತ್ತು ಉಪಸ್ಥಿತಿಯನ್ನು ನೋಡಿದರೆ ಇಂದು ಐತಿಹಾಸಿಕ ದಿನ ಎಂದು ತಿಳಿಯುತ್ತಿದೆ" ಎಂದು ಅವರು ಸಭೆಯನ್ನುದ್ದೇಶಿಸಿ ಹೇಳಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಉದ್ಧವ್ ಠಾಕ್ರೆ, ಮಹಾರಾಷ್ಟ್ರದ ನಾಯಕತ್ವ ಠಾಕ್ರೆ ಕುಟುಂಬಕ್ಕೆ ಸೇರಿದ್ದು. ಠಾಕ್ರೆಗಳು ಮಾತ್ರ ಮಹಾರಾಷ್ಟ್ರವನ್ನು ಮುನ್ನಡೆಸಲು ಸಾಧ್ಯ ಎಂದು ಘೋಷಿಸಿದರು.