×
Ad

ಉಕ್ರೇನ್ ಡ್ರೋನ್ ದಾಳಿ; ಮಾಸ್ಕೋದ ಎರಡು ವಿಮಾನ ನಿಲ್ದಾಣ ಮುಚ್ಚಿದ ರಶ್ಯ

Update: 2025-06-08 23:40 IST

ಸಾಂದರ್ಭಿಕ ಚಿತ್ರ - AI

ಮಾಸ್ಕೋ: ಮಾಸ್ಕೋವನ್ನು ಗುರಿಯಾಗಿಸಿ ಉಕ್ರೇನ್ ನಡೆಸಿದ ಡ್ರೋನ್ ದಾಳಿಯ ಬಳಿಕ ಮಾಸ್ಕೋದ ಎರಡು ಪ್ರಮುಖ ವಿಮಾನ ನಿಲ್ದಾಣಗಳನ್ನು ಮುಚ್ಚಿರುವುದಾಗಿ ರಶ್ಯ ಅಧಿಕಾರಿಗಳು ರವಿವಾರ ಹೇಳಿದ್ದಾರೆ.

ರವಿವಾರ ಬೆಳಿಗ್ಗೆ 4 ಗಂಟೆಗೆ ಮಾಸ್ಕೋದತ್ತ ಧಾವಿಸುತ್ತಿದ್ದ ಉಕ್ರೇನ್‍ನ 9 ಡ್ರೋನ್‍ಗಳನ್ನು ರಶ್ಯದ ವಾಯು ರಕ್ಷಣಾ ಘಟಕ ಹೊಡೆದುರುಳಿಸಿದೆ. ಡ್ರೋನ್‍ನ ಅವಶೇಷ ಬಿದ್ದು ತುಲಾ ಪ್ರಾಂತದಲ್ಲಿನ ಅಝೋಟ್ ರಾಸಾಯನಿಕ ಸ್ಥಾವರದಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ತಕ್ಷಣ ನಿಯಂತ್ರಿಸಲಾಗಿದ್ದು ಇಬ್ಬರು ಗಾಯಗೊಂಡಿದ್ದಾರೆ. ಕಲುಗಾ ಪ್ರದೇಶದಲ್ಲಿ 7 ಡ್ರೋನ್‍ಗಳನ್ನು ಹೊಡೆದುರುಳಿಸಲಾಗಿದೆ. ಈ ಪ್ರದೇಶಗಳಿಗೆ ತುರ್ತು ಕಾರ್ಯಪಡೆಯನ್ನು ರವಾನಿಸಲಾಗಿದೆ ಎಂದು ಮಾಸ್ಕೋದ ಮೇಯರ್ ಸೆರ್ಗೆಯ್ ಸೊಬ್ಯಾನಿನ್ ಹೇಳಿದ್ದಾರೆ. ಮಾಸ್ಕೋದ ವುನುಕೊವೊ ಮತ್ತು ಡೊಮೊಡೆಡೊವೊ ವಿಮಾನ ನಿಲ್ದಾಣಗಳನ್ನು ಮುಚ್ಚಿರುವುದಾಗಿ ರಶ್ಯಾದ ನಾಗರಿಕ ವಿಮಾನಯಾನ ಪ್ರಾಧಿಕಾರ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News