×
Ad

ಬಿಹಾರ ಚುನಾವಣೆ | “ನಮಕ್ ಹರಾಮ್‌ಗಳ ಮತಗಳು ನಮಗೆ ಬೇಡ” : ಮುಸ್ಲಿಮರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್

Update: 2025-10-19 15:27 IST

ಕೇಂದ್ರ ಸಚಿವ ಗಿರಿರಾಜ್ ಸಿಂಗ್ (Photo: PTI)

ಪಾಟ್ನಾ : ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದಾರೆ. ಅವರು “ನಮಕ್ ಹರಾಮ್‌ಗಳ” ಮತಗಳು ನಮಗೆ ಅಗತ್ಯವಿಲ್ಲ” ಎಂದು ಹೇಳಿದ್ದಾರೆ.

ಬಿಹಾರದ ಅರ್ವಲ್ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಗಿರಿರಾಜ್ ಸಿಂಗ್, ಒಮ್ಮೆ ನಾನು ನಿಮಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಇದೆಯಾ? ಎಂದು ಒಬ್ಬ ಮೌಲ್ವಿಗೆ ಕೇಳಿದೆ. ಅವರು ‘ಹೌದು’ ಇದೆ ಎಂದರು. ಈ ಕಾರ್ಡ್‌ಗಳನ್ನು ಹಿಂದೂ-ಮುಸ್ಲಿಂ ಆಧಾರದಲ್ಲಿ ಕೊಡಲಾಗುತ್ತದೆಯಾ? ಎಂದು ಕೇಳಿದೆ. ಅವರು ಇಲ್ಲ ಎಂದರು. ನೀವು ನನಗೆ ಮತ ಹಾಕಿದ್ದೀರಾ? ಎಂದು ನಾನು ಕೇಳಿದೆ. ಅವರು ಮೊದಲಿಗೆ ‘ಹೌದು’ ಎಂದರು. ದೇವರ ಮೇಲೆ ಪ್ರಮಾಣ ಮಾಡಿ ಹೇಳಿ ಎಂದು ನಾನು ಹೇಳಿದಾಗ ‘ಇಲ್ಲ’ ಎಂದರು. ಮುಸ್ಲಿಮರು ಕೇಂದ್ರ ಸರಕಾರಿ ಯೋಜನೆಗಳ ಸೌಲಭ್ಯ ಪಡೆಯುತ್ತಾರೆ. ಆದರೆ ನಮಗೆ ಮತ ಹಾಕುವುದಿಲ್ಲ. ಅಂತವರನ್ನು ‘ನಮಕ್ ಹರಾಮ್’ ಗಳು ಎನ್ನುತ್ತಾರೆ. ಇಂತಹ ‘ನಮಕ್ ಹರಾಮ್’ಗಳ ಮತ ನನಗೆ ಬೇಡ,” ಎಂದು ನಾನು ಆ ಮೌಲ್ವಿಗೆ ಹೇಳಿದೆ ಎಂದು ಗಿರಿರಾಜ್ ಸಿಂಗ್ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ನಿಮ್ಮನ್ನು ಎಂದಾದರೂ ನಿಂದಿಸಿದ್ದಾರೆಯೇ ಎಂದು ಮುಸ್ಲಿಂ ಧರ್ಮಗುರುವನ್ನು ನಾನು ಕೇಳಿದೆ. ಧರ್ಮಗುರು ಇಲ್ಲ ಎಂದು ಉತ್ತರಿಸಿದರು. ನಾನು ಅವರನ್ನು ಅವಮಾನಿಸಿದ್ದೇನೆಯೇ ಎಂದು ಕೇಳಿದೆ. ಅದಕ್ಕೆ ಅವರು ಇಲ್ಲ ಎಂದು ಹೇಳಿದರು. ಮತ್ತೆ ಯಾಕೆ ಮತ ಹಾಕಿಲ್ಲ ಎಂದು ನಾನು ಕೇಳಿದೆ. ದಯೆಯನ್ನು ಒಪ್ಪಿಕೊಳ್ಳದ ವ್ಯಕ್ತಿಯನ್ನು 'ನಮಕ್ ಹರಾಮ್' ಎಂದು ಗಿರಿರಾಜ್ ಸಿಂಗ್ ಹೇಳಿದರು.

ಬಿಹಾರದ ಒಟ್ಟಾರೆ ಅಭಿವೃದ್ಧಿಗಾಗಿ ಎನ್‌ಡಿಎ ವ್ಯಾಪಕವಾದ ಮೂಲಸೌಕರ್ಯ ವ್ಯವಸ್ಥೆ ಮಾಡಿದರೂ ಮುಸ್ಲಿಮರು ಬಿಜೆಪಿಗೆ ಮತ ಹಾಕುವುದಿಲ್ಲ. ಬಿಹಾರದಲ್ಲಿ ಎನ್‌ಡಿಎ ನಾಯಕರು ಮತ್ತು ಕಾರ್ಯಕರ್ತರಿಗೆ ಮಾತ್ರವಲ್ಲ ಎಲ್ಲಾ ಜನರಿಗೂ ರಸ್ತೆಗಳ ಪ್ರಯೋಜನವಾಗುತ್ತದೆ. ಬಿಹಾರ ಈಗ ಬದಲಾಗಿದೆ. ಎನ್‌ಡಿಎ ಸರಕಾರ ಸಮಾಜದ ಪ್ರತಿಯೊಂದು ವರ್ಗಕ್ಕೂ ಕೆಲಸ ಮಾಡುತ್ತದೆ. ಆದರೆ ಮುಸ್ಲಿಮರು ಬಿಜೆಪಿಗೆ ಮತ ಹಾಕುವುದಿಲ್ಲ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News