×
Ad

ಕುವೈತ್ ಅಗ್ನಿ ದುರಂತ | ತುರ್ತಾಗಿ ಕುವೈತ್ ಗೆ ತೆರಳಲಿರುವ ಕೇಂದ್ರ ಸಚಿವ ಕೀರ್ತಿ ವರ್ಧನ್ ಸಿಂಗ್

Update: 2024-06-12 21:04 IST

ಕೀರ್ತಿ ವರ್ಧನ್ ಸಿಂಗ್ |  PC : PTI 

ಹೊಸದಿಲ್ಲಿ: ಕುವೈತ್ ನಲ್ಲಿ ಸಂಭವಿಸಿರುವ ಭೀಕರ ಅಗ್ನಿ ದುರಂತದಲ್ಲಿ ಗಾಯಗೊಂಡಿರುವ ಭಾರತೀಯರಿಗೆ ನೆರವು ಒದಗಿಸುವ ಪರಿಹಾರ ಕಾರ್ಯಾಚರಣೆಯ ಮೇಲುಸ್ತುವಾರಿ ವಹಿಸಲು ಹಾಗೂ ಈ ಅಗ್ನಿ ದುರಂತದಲ್ಲಿ ಮೃತಪಟ್ಟಿರುವ ಭಾರತೀಯರ ಮೃತದೇಹಗಳನ್ನು ಭಾರತಕ್ಕೆ ಶೀಘ್ರವಾಗಿ ರವಾನಿಸಲು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಕುವೈತ್ ಗೆ ತುರ್ತಾಗಿ ತೆರಳಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಸೂಚನೆಯ ಮೇರೆಗೆ ಕೀರ್ತಿ ವರ್ಧನ್ ಸಿಂಗ್ ಅವರು ಕುವೈತ್ ಗೆ ತೆರಳುತ್ತಿದ್ದಾರೆ.

ಈ ಭೀಕರ ಅಗ್ನಿ ದುರಂತದಲ್ಲಿ ನಲವತ್ತಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಬಹುತೇಕರು ಭಾರತೀಯರಾಗಿದ್ದಾರೆ. ಅವರೆಲ್ಲ ದಕ್ಷಿಣ ಕುವೈತ್ ನಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News