ಸಂಸತ್ತಿನ ಆವರಣ ಗೋಡೆ ಏರಲು ಯತ್ನಿಸಿ ಬಂಧನಕ್ಕೊಳಗಾಗಿದ್ದ ವ್ಯಕ್ತಿಯ ಬಿಡುಗಡೆ
PC : PTI
ಹೊಸದಿಲ್ಲಿ: ಸಂಸತ್ ಭವನ ಸಂಕೀರ್ಣದ ಆವರಣ ಗೋಡೆ ಏರಲು ಯತ್ನಿಸಿ ಭದ್ರತಾ ಪಡೆಗಳಿಂದ ಬಂಧನಕ್ಕೊಳಗಾಗಿದ್ದ ಉತ್ತರ ಪ್ರದೇಶದ ಭದೋಹಿ ನಿವಾಸಿ ರಾಮ್ ಶಂಕರ್ ಬಿಂದ್ ಎಂಬಾತನನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ.
ಶುಕ್ರವಾರ ಬೆಳಿಗ್ಗೆ ರಾಮ್ ಶಂಕರ್ ಬಿಂದ್ ಸಂಸತ್ ಭವನದ ಆವರಣ ಗೋಡೆಯನ್ನೇರಲು ಪ್ರಯತ್ನಿಸಿದ್ದನು. ಆದರೆ, ಆ ಪ್ರಯತ್ನವನ್ನು ವಿಫಲಗೊಳಿಸಿದ್ದ ಭದ್ರತಾ ಸಿಬ್ಬಂದಿಗಳು, ಆತನನ್ನು ಸೆರೆ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದರು.
ಸಂಸತ್ ಭವನ ಸಂಕೀರ್ಣಕ್ಕೆ ಹೊಂದಿಕೊಂಡಂತಿದ್ದ ಮರವನ್ನೇರಿ ರಾಮ್ ಶಂಕರ್ ಬಿಂದ್ ಸಂಸತ್ ಭವನವನ್ನು ಪ್ರವೇಶಿಸಲು ಯತ್ನಿಸಿದ್ದ. ಬಳಿಕ ಆತನನ್ನು ಸೆರೆ ಹಿಡಿದು ಭದ್ರತಾ ಸಿಬ್ಬಂದಿಗಳು ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ಈ ಬಗ್ಗೆ ಕೇಂದ್ರ ಗುಪ್ತಚರ ದಳ ಸೇರಿದಂತೆ ಅನೇಕ ಕೇಂದ್ರೀಯ ತನಿಖಾ ಸಂಸ್ಥೆಗಳು ಆತನನ್ನು ವಿಚಾರಣೆಗೊಳಪಡಿಸಿದ್ದವು. ವಿಚಾರಣೆಯ ವೇಳೆ ಯಾವುದೇ ಆಕ್ಷೇಪಾರ್ಹ ಅಥವಾ ಸಂಶಯಾಸ್ಪದ ಪುರಾವೆಗಳು ದೊರೆಯದೆ ಕಾರಣ ಆತನನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ.
ವಿಚಾರಣೆಯ ವೇಳೆ ರಾಮ್ ಶಂಕರ್ ಬಿಂದ್ ಮಾನಸಿಕ ಅಸ್ವಸ್ಥರಂತೆ ಕಂಡು ಬಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.