×
Ad

ಉ.ಪ್ರ.: ಮಹಿಳೆಯ ಥಳಿಸಿ ಹತ್ಯೆಗೈದ ಪತಿ, ಮಾವ

Update: 2023-10-14 21:46 IST

ಸಾಂದರ್ಭಿಕ ಚಿತ್ರ

ಅಝಂಗಢ : ಮಹಿಳೆಯೋರ್ವರನ್ನು ಆಕೆಯ ಪತಿ ಹಾಗೂ ಮಾವ ಥಳಿಸಿ ಹತ್ಯೆಗೈದ ಹಾಗೂ ಆಕೆಯ ಮೃತದೇಹವನ್ನು ಮನೆಯ ನೆಲದ ಅಡಿಯಲ್ಲಿ ಹೂತು ಹಾಕಿದ ಘಟನೆ ಉತ್ತರಪ್ರದೇಶದ ಅಝಂಗಢದಲ್ಲಿ ನಡೆದಿದೆ.

ಹತ್ಯೆಯಾದ ಮಹಿಳೆಯನ್ನು ಅನಿತಾ (22) ಎಂದು ಗುರುತಿಸಲಾಗಿದೆ. ಈಕೆ ವರ್ಷದ ಹಿಂದೆ ಸೂರಜ್ ಎಂಬಾತನನ್ನು ವಿವಾಹವಾಗಿದ್ದರು. ಆದರೆ, ಆಕೆಯ ಮಾವ ತವರು ಮನೆಯಿಂದ ವರದಕ್ಷಿಣೆ ಹಾಗೂ ಮೋಟಾರು ಸೈಕಲ್ ಗೆ ಹಣ ತರುವಂತೆ ಪೀಡಿಸುತ್ತಿದ್ದ ಎಂದು ಅನಿತಾಳ ಸಹೋದರ ಹರೇಂದ್ರ ಪೊಲೀಸರಿಗೆ ತಿಳಿಸಿದ್ದಾರೆ.

ಪ್ರಸಕ್ತ ಅನಿತಾಳ ಪತಿ, ಮಾವ ಸೇರಿದಂತೆ ಕುಟುಂಬದ ಎಲ್ಲ ಸದಸ್ಯರು ಪರಾರಿಯಾಗಿದ್ದಾರೆ. ಅನಿತಾಳ ಮೃತದೇಹ ಅಝಂಗಢದ ಜಾಜ್ಮಾನ್ಪುರ ಗ್ರಾಮದಲ್ಲಿರುವ ಮನೆಯ ನೆಲದ ಅಡಿಯಲ್ಲಿ ಪತ್ತೆಯಾಯಿತು ಎಂದು ಪೊಲೀಸ್ ಅಧೀಕ್ಷಕ ಸಂಜಯ್ ಕುಮಾರ್ ತಿಳಿಸಿದ್ದಾರೆ.

ಮಹಿಳೆಯ ಪತಿ, ಮಾವ ಹಾಗೂ ಕುಟುಂಬದ ಇತರ ಸದಸ್ಯರ ವಿರುದ್ಧ ಪೊಲೀಸರು ವರದಕ್ಷಿಣೆ ಕಿರುಕುಳ, ಹತ್ಯೆ ಹಾಗೂ ದೌರ್ಜನ್ಯದ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News