×
Ad

ಮೂತ್ರ ವಿಸರ್ಜನೆ ಪ್ರಕರಣ: 'ಪತಿ ಇನ್ನೂ ಮನೆಗೆ ಬಂದಿಲ್ಲ' ಎಂದ ಸಂತ್ರಸ್ತನ ಪತ್ನಿ !

ಇತ್ತೀಚೆಗಷ್ಟೇ ಮಧ್ಯಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತ ಎನ್ನಲಾದ ಪ್ರವೇಶ್ ಶುಕ್ಲಾ ಎಂಬಾತ ಬುಡಕಟ್ಟು ಸಮುದಾಯಕ್ಕೆ ಸೇರಿದ ದಶ್ ಮತ್ ರಾವತ್ ಎಂಬವರ ವಿರುದ್ಧ ಮೂತ್ರ ವಿಸರ್ಜನೆ ಮಾಡಿದ್ದ. ಘಟನೆಯ ವಿಡಿಯೊ ವೈರಲ್ ಆಗಿ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು

Update: 2023-07-07 22:00 IST

Photo: Twitter

ಮಧ್ಯಪ್ರದೇಶ: ಬಿಜೆಪಿ ಕಾರ್ಯಕರ್ತ ಎನ್ನಲಾದ ದುಷ್ಕರ್ಮಿ ಬುಡಕಟ್ಟು ವ್ಯಕ್ತಿಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇದೀಗ ತನ್ನ ಪತಿ ಇನ್ನೂ ಮನೆಗೆ ಬಂದಿಲ್ಲ ಎಂದು ಸಂತ್ರಸ್ತ ದಶ್ ಮತ್ ರಾವತ್ ಅವರ ಪತ್ನಿ ಆರೋಪಿಸಿದ್ದಾರೆ.

ಇತ್ತೀಚೆಗಷ್ಟೇ ಮಧ್ಯಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತ ಎನ್ನಲಾದ ಪ್ರವೇಶ್ ಶುಕ್ಲಾ ಎಂಬಾತ ಬುಡಕಟ್ಟು ಸಮುದಾಯಕ್ಕೆ ಸೇರಿದ ದಶ್ ಮತ್ ರಾವತ್ ಎಂಬವರ ವಿರುದ್ಧ ಮೂತ್ರ ವಿಸರ್ಜನೆ ಮಾಡಿದ್ದ. ಘಟನೆಯ ವಿಡಿಯೊ ವೈರಲ್ ಆಗಿ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಆನಂತರದ ಬೆಳವಣಿಗೆಯಲ್ಲಿ ತನ್ನ ಪತಿ ನಾಪತ್ತೆಯಾಗಿದ್ದು, ಅವರು ಎಲ್ಲಿದ್ದಾರೆ ಎನ್ನುವ ಯಾವುದೇ ಮಾಹಿತಿ ಇಲ್ಲ ಎಂದು ದಶ್ ಮತ್ ರಾವತ್ ಪತ್ನಿ ಆರೋಪಿಸಿದ್ದಾರೆ ಎಂದು ದ ವೈರ್ ಡಾಟ್ ಇನ್ ವರದಿ ಮಾಡಿದೆ.




ಮೂತ್ರ ವಿಸರ್ಜನೆ ಪ್ರಕರಣ ಚುನಾವಣೆಯ ಹೊಸ್ತಿಲಲ್ಲಿರುವ ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಭಾರೀ ಹಿನ್ನಡೆಯಾಗಿದ್ದು, ಸ್ವತಃ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಬುಡಕಟ್ಟು ವ್ಯಕ್ತಿಯ ಪಾದ ತೊಳೆದಿದ್ದರು. ಘಟನೆಯ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಆರೋಪಿಯ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಸೇರಿ ಹಲವು ಪ್ರಕರಣಗಳು ದಾಖಲಾಗಿತ್ತು. ಇದಾಗಿ ಆರೋಪಿಯ ಮನೆ ದ್ವಂಸಗೊಳಿಸಲಾಗಿತ್ತು.

ಘಟನೆಯ ಬಳಿಕ ಸಂತ್ತಸ್ತ ವ್ಯಕ್ತಿಯ ಪತ್ನಿ ಮತ್ತು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮಾತನಾಡಿದ್ದು ಎನ್ನಲಾದ ಆಡಿಯೊ ಒಂದು ವೈರಲ್ ಆಗಿದೆ. ತನ್ನ ಪತಿಯನ್ನು ವಾಪಸ್ ಕಳಿಸಿ, ತನಗೆ ಹಣದ ಮೇಲೆ ಯಾವುದೇ ದುರಾಸೆ ಇಲ್ಲ ಎಂದು ಸಂತ್ರಸ್ತ ವ್ಯಕ್ತಿಯ ಪತ್ನಿಯದ್ದು ಎನ್ನಲಾದ ಧ್ವನಿ ಹೇಳುತ್ತದೆ. ಇದಕ್ಕೆ ಪ್ರತಿ‌ಕ್ರಿಯಿಸುವ ಶಿವರಾಜ್ ಸಿಂಗ್ ಚೌಹಾಣ್ ಅವರದ್ದು ಎನ್ನಲಾದ ಧ್ವನಿ, ನಿಮ್ಮ ಕುಟುಂಬಕ್ಕೆ ಮನೆ ನೀಡುತ್ತೇವೆ, ಹಣಕಾಸಿನ ನೆರವನ್ನೂ ನೀಡುತ್ತೇವೆ ಎನ್ನುತ್ತದೆ.




 ಬುಧವಾರದಿಂದ ಈ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಆಡಿಯೊವನ್ನ ದೃಢೀಕರಿಸಲು ಸಾಧ್ಯವಾಗಿಲ್ಲ ಎಂದು ದ ವೈರ್ ವರದಿ ತಿಳಿಸಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News