×
Ad

ರಾಜಕೀಯ ಸ್ವಾರ್ಥಕ್ಕಾಗಿ ಕರಾಳವಾದ ಪೊಲೀಸ್ ಅಧಿಕಾರದ ಬಳಕೆ: ಭಾರತೀಯ ನ್ಯಾಯಸಂಹಿತೆಗೆ ಕಪಿಲ್ ಸಿಬಲ್ ವಿರೋಧ

Update: 2023-08-12 21:53 IST

ಕಪಿಲ್ ಸಿಬಲ್ | Photo : PTI 

ಹೊಸದಿಲ್ಲಿ: ವಸಾಹತುಶಾಹಿ ಯುಗದ ಭಾರತೀಯ ದಂಡಸಂಹಿತೆ (IPC)ಯ ಬದಲಿಗೆ ಕೇಂದ್ರ ಸರಕಾರವು ಜಾರಿಗೊಳಿಸಲು ಹೊರಟಿರುವ ಭಾರತೀಯ ನ್ಯಾಯಸಂಹಿತೆ ವಿಧೇಯಕವು (BNS), ರಾಜಕೀಯ ಹಿತಸಾಧನೆಗಾಗಿ ಕರಾಳ ಪೊಲೀಸ್ ಅಧಿಕಾರವನ್ನು ಬಳಸಲು ಆಸ್ಪದ ಮಾಡಿಕೊಡಲಿದೆ ಎಂದು ಮಾಜಿ ಕಾನೂನು ಸಚಿವ ಕಪಿಲ್ ಸಿಬಲ್ ಶನಿವಾರ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಅವರು ಎಕ್ಸ್ (ಹಿಂದಿನ ಟ್ವಿಟರ್)ನಲ್ಲಿ ಹೇಳಿಕೆಯೊಂದನ್ನು ಪ್ರಸಾರ ಮಾಡಿದ್ದು, ಭಾರತೀಯ ನ್ಯಾಯ ಸಂಹಿತೆ (2023) ವಿಧೇಯಕವು ರಾಜಕೀಯ ಸ್ವಾರ್ಥಕ್ಕಾಗಿ ಕರಾಳವಾದ ಪೊಲೀಸ್ ಅಧಿಕಾರವನ್ನು ಬಳಸಲು ಅವಕಾಶ ಮಾಡಿಕೊಡುತ್ತದೆ. ಆರೋಪಿಯನ್ನು 15ರಿಂದ 60 ದಿನ ಅಥವಾ 90 ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳುವುದಕ್ಕೆ ಭಾರತೀಯ ನ್ಯಾಯ ಸಂಹಿತೆ ಅನುಮತಿ ನೀಡುತ್ತದೆ. ದೇಶದ ಭದ್ರತೆಗೆ ಬೆದರಿಕೆ ಹಾಕಿದ ಆರೋ (ಮರುವ್ಯಾಖ್ಯಾನಿಸಲ್ಪಟ್ಟ) ದಲ್ಲಿ ಕಾನೂನುಕ್ರಮಕ್ಕೆ ಒಳಗಾಗುವ ವ್ಯಕ್ತಿಗಳ ವಿರುದ್ಧ ಹೊಸ ಅಪರಾಧಗಳನ್ನು ಹೊರಿಸಲು ಬಿಎನ್ಎಸ್ಗೆ ಅವಕಾಶ ಮಾಡಿಕೊಡುತ್ತದೆ ವಿರೋಧಿಗಳನ್ನು ಮೌನವಾಗಿಸುವುದೇ ಇದರ ಕಾರ್ಯಸೂಚಿಯಾಗಿದೆ ಎಂದು ತಿಳಿಸಿದ್ದಾರೆ.

ಭಾರತೀಯ ಕ್ರಿಮಿನಲ್ ದಂಡ ಸಂಹಿತೆಯನ್ನು ತೆರವುಗೊಳಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಲೋಕಸಭೆಯಲ್ಲಿ ಭಾರತೀಯ ನ್ಯಾಯ ಸಂಹಿತಾ (BNS) ವಿಧೇಯಕ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS) ವಿಧೇಯಕ 2023ಯನ್ನು ಮಂಡಿಸಿದ್ದರು.

ಬಿಎನ್ಎಸ್ ವಿಧೇಯಕವು ಆತ್ಮಹತ್ಯೆಗೆ ಯತ್ನ, ಮಾನಹಾನಿ ಸೇರಿದಂತೆ ಪ್ರಸಕ್ತ ಚಾಲ್ತಿಯಲ್ಲಿರುವ ಕಾನೂನುಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲು ಹೊರಟಿ ತ್ವರಿತ ನ್ಯಾಯದಾನಕ್ಕಾಗಿ ಹಾಲಿ ಕಾನೂನುಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ ಎಂದವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News