×
Ad

ಉತ್ತರ ಪ್ರದೇಶ | ಕೋಳಿ ಅಂಕಕ್ಕೆ ಪೊಲೀಸ್ ದಾಳಿ ; 55 ಮಂದಿ ವಶಕ್ಕೆ

Update: 2024-11-10 20:44 IST

ಸಾಂದರ್ಭಿಕ ಚಿತ್ರ | PTI 

ಸಂಭಾಲ್ : ಕೋಳಿ ಅಂಕದ ಮೇಲೆ ಬಾಜಿ ಕಟ್ಟಿ ಜೂಜಾಟವಾಡುತ್ತಿದ್ದ 55 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಬಹ್ಜೋಜಿ ಪ್ರದೇಶದ ಪರ್ತಾರ್ ಪುರ್ ಗ್ರಾಮದಲ್ಲಿ ನಡೆದಿದೆ ಎಂದು ರವಿವಾರ ಪೊಲೀಸರು ತಿಳಿಸಿದ್ದಾರೆ.

ಜೂಜುಕೋರರಿಂದ 35 ಹುಂಜಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಪೈಕಿ 33 ಹುಂಜಗಳ ಕಾಲನ್ನು ಕಟ್ಟಲಾಗಿತ್ತು ಎಂದು ಅವರು ಹೇಳಿದ್ದಾರೆ.

ಕೋಳಿ ಅಂಕದ ಮೇಲೆ ಬಾಜಿ ಕಟ್ಟಲು ಬುದೌನ್, ಅಮ್ರೋಹಾ ಹಾಗೂ ಇನ್ನಿತರ ಸ್ಥಳಗಳಿಂದ ಜನರು ಇಲ್ಲಿಗೆ ಬರುತ್ತಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣ ಕುಮಾರ್ ಬಿಷ್ಣೋಯಿ ತಿಳಿಸಿದ್ದಾರೆ.

ಗ್ರಾಮದಲ್ಲಿ ದೊಡ್ಡ ಮಟ್ಟದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಸುಳಿವನ್ನು ಆಧರಿಸಿ, ಶನಿವಾರ ಅಲ್ಲಿಗೆ ತೆರಳಿದ್ದ ಪೊಲೀಸರು, 55 ಮಂದಿಯನ್ನು ಈ ಸಂಬಂಧ ವಶಕ್ಕೆ ಪಡೆದಿದ್ದಾರೆ ಎಂದು ಬಿಷ್ಣೋಯಿ ಹೇಳಿದ್ದಾರೆ.

ಪೊಲೀಸ್ ತಂಡವು 35 ಹುಂಜಗಳನ್ನೂ ವಶಪಡಿಸಿಕೊಂಡಿದ್ದು, ಈ ಪೈಕಿ ಎರಡು ಹುಂಜಗಳನ್ನು ಕಾದಾಟಕ್ಕಾಗಿ ಬಳಸಲಾಗಿತ್ತು. ಉಳಿದ 35 ಹುಂಜಗಳ ಕಾಲುಗಳನ್ನು ಕಟ್ಟಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ವಶಕ್ಕೆ ಪಡೆದಿರುವ ಆರೋಪಿಗಳ ವಿರುದ್ಧ ಸಾರ್ವಜನಿಕ ಜೂಜಾಟ ಕಾಯ್ದೆ ಮತ್ತು ಪ್ರಾಣಿ ಕ್ರೌರ್ಯ ಕಾಯ್ದೆಯನ್ವಯ ಪ್ರಕರಣ ದಾಖಲಿಸಿಕೊಳ್ಳಳಲಾಗಿದ್ದು, ಈ ಕುರಿತು ವಿಸ್ತೃತ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News