×
Ad

ಉ.ಪ್ರ:ಬಾಲಕಿಯನ್ನು ಅಪಹರಿಸಿ ಮೂರು ತಿಂಗಳು ಅತ್ಯಾಚಾರ

Update: 2023-09-24 22:36 IST

ಸಾಂದರ್ಭಿಕ ಚಿತ್ರ.


ಲಕ್ನೋ : ಬಲಿಯಾ ನಿವಾಸಿ 15ರ ಹರೆಯದ ಬಾಲಕಿಯನ್ನು ಅಪಹರಿಸಿ ಮೂರು ತಿಂಗಳ ಕಾಲ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ ವ್ಯಕ್ತಿಯನ್ನು ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯ ತಂದೆಯ ದೂರಿನ ಮೇರೆಗೆ ಪೋಲಿಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು.

ಆರೋಪಿಯು ಬಾಲಕಿಯನ್ನು ಬಲಿಯಾಕ್ಕೆ ವಾಪಸ್ ಕರೆತಂದಿದ್ದು,ಮಾಹಿತಿ ತಿಳಿದ ಪೋಲಿಸರು ಆ.28ರಂದು ಆಕೆಯನ್ನು ರಕ್ಷಿಸಿದ್ದರು.

ಮೇ 28ರಂದು ತನ್ನನ್ನು ಅಪಹರಿಸಿದ್ದ ಆರೋಪಿ ಪವನ್ ಬಿಂದ್ ಗುಜರಾತಿಗೆ ಕರೆದೊಯ್ದು ಅಲ್ಲಿ ತನ್ನನ್ನು ಕಾನೂನುಬಾಹಿರವಾಗಿ ಮದುವೆಯಾಗಿದ್ದ ಮತ್ತು ಮೂರು ತಿಂಗಳು ತನ್ನ ಮೇಲೆ ಅತ್ಯಾಚಾರವೆಸಗಿದ್ದ ಎಂದು ಸಂತ್ರಸ್ತ ಬಾಲಕಿ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾಳೆ.

ತಲೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಶನಿವಾರ ಪೋಲಿಸರ ಬಲೆಗೆ ಬಿದ್ದಿದ್ದಾನೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News