×
Ad

2024ರಲ್ಲಿ ಚಲಾವಣೆಯಲ್ಲಿದ್ದ ನೋಟುಗಳ ಮೌಲ್ಯ 34.8 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿತ್ತು: ಆರ್‌ಬಿಐ

Update: 2025-05-23 17:07 IST

RBI | PC : PTI 

ಹೊಸದಿಲ್ಲಿ: 1990ರ ದಶಕದಿಂದ ಭಾರತದಲ್ಲಿ ನಗದು ಹಣದ ಬಳಕೆ ಕಡಿಮೆಯಾಗಿದ್ದರೂ ಇತ್ತೀಚಿನ ವರ್ಷಗಳಲ್ಲಿ ಚಲಾವಣೆಯಲ್ಲಿರುವ ನೋಟುಗಳ (ಎನ್‌ಐಸಿ) ಪ್ರಮಾಣ ಹೆಚ್ಚಾಗಿದೆ. ಕೋವಿಡ್ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನಗದು ಇಟ್ಟುಕೊಳ್ಳುವ ಪ್ರವೃತ್ತಿ ಈ ಬೆಳವಣಿಗೆಗೆ ಭಾಗಶಃ ಕಾರಣವಾಗಿದೆ ಎಂದು ವರದಿಯಾಗಿದೆ.

ಆರ್‌ಬಿಐನ ಮಾಸಿಕ ಬುಲೆಟಿನ್ ಪ್ರಕಾರ 2001ರಲ್ಲಿ ಸುಮಾರು 2.1 ಲಕ್ಷ ಕೋಟಿ ಇದ್ದ ಎನ್‌ಐಸಿ 2024ರಲ್ಲಿ 34.8 ಲಕ್ಷ ಕೋಟಿಗೆ ಏರಿಕೆಯಾಗಿತ್ತು.

ಕಳೆದ ಎರಡು ದಶಕಗಳಲ್ಲಿ ಭೌತಿಕ ನಗದು ಹಣದ ಬೇಡಿಕೆ ಗಮನಾರ್ಹವಾಗಿ ಹೆಚ್ಚಾಗಿದೆ. ಬ್ಯಾಂಕ್ ಶಾಖೆಗಳು ಮತ್ತು ಎಟಿಎಂ ನೆಟ್‌ವರ್ಕ್‌ಗಳ ತ್ವರಿತ ವಿಸ್ತರಣೆ,ಇಂಟರ್ನೆಟ್ ಸೌಲಭ್ಯವುಳ್ಳ ಫೋನಗಳ ಹೆಚ್ಚಿನ ಬಳಕೆ ಮತ್ತು ಪಾವತಿ ವ್ಯವಸ್ಥೆಗಳಲ್ಲಿ ಗಮನಾರ್ಹ ಪ್ರಗತಿಯಂತಹ ಅಂಶಗಳು ಕಳೆದ ದಶಕದಲ್ಲಿ ಎನ್‌ಐಸಿಯಲ್ಲಿ ಕಡಿಮೆ ಸಂಯೋಜಿತ ವಾರ್ಷಿಕ ಬೆಳವಣಿಗೆ ದರ(ಸಿಎಜಿಆರ್)ಕ್ಕೆ ಕಾರಣವಾಗಿವೆ. 2014 ಮತ್ತು 2024ರ ನಡುವೆ ಪ್ರತಿ ದಶಕದ ಅವಧಿಯಲ್ಲಿ ಎನ್‌ಐಸಿಯ ಸಿಎಜಿಆರ್ ಪ್ರಮಾಣಕ್ಕಿಂತ ಮೌಲ್ಯದಲ್ಲಿ ಹೆಚ್ಚಾಗಿದ್ದು,ಇದು ಹೆಚ್ಚಿನ ಮುಖಬೆಲೆಗಳ ನೋಟುಗಳ ಕಡೆಗೆ ಬದಲಾವಣೆಯನ್ನು ಸೂಚಿಸುತ್ತದೆ.

1994 ಮತ್ತು 2004ರ ನಡುವೆ ಎನ್‌ಐಸಿ ಬೆಳವಣಿಗೆಯು ಜಿಡಿಪಿ ಬೆಳವಣಿಗೆಯನ್ನು ಮೀರಿಸಿದ್ದರೂ ನಂತರದ ಎರಡು ದಶಕಗಳಲ್ಲಿ ಅವುಗಳ ನಡುವಿನ ಅಂತರವು ಗಣನೀಯವಾಗಿ ಕಡಿಮೆಯಾಗಿದೆ.

2005 ಮತ್ತು 2014ರ ನಡುವೆ ಪ್ರತಿ ಲಕ್ಷ ವಯಸ್ಕರಿಗೆ ಎಟಿಎಂಗಳ ಸಂಖ್ಯೆಯಲ್ಲಿ ಏರಿಕೆಯಾಗಿದ್ದು,ಸಿಎಜಿಆರ್ ಶೇ.25ಕ್ಕಿಂತ ಕೊಂಚ ಹೆಚ್ಚಾಗಿತ್ತು. ಸಾಮಾನ್ಯ ಅವಧಿಗಳಲ್ಲಿ(ಕೋವಿಡ್‌ನಂತಹ ಸಾಂಕ್ರಾಮಿಕಗಳು ಇಲ್ಲದಿದ್ದಾಗ) ಎಟಿಎಂಗಳ ಸುಲಭ ಲಭ್ಯತೆಯಿಂದಾಗಿ ಜನರು ಮನೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಹಣವನ್ನು ಇರಿಸಿಕೊಳ್ಳುವ ಅಗತ್ಯವಿರುವುದಿಲ್ಲ ಎನ್ನುವುದನ್ನು ಪುರಾವೆಗಳು ತೋರಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News