×
Ad

ಎನ್‌ಸಿಇಆರ್‌ಟಿ | 6ನೇ ತರಗತಿಯ ಪಠ್ಯದಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕ ಕುರಿತ ಪದ್ಯ, ವೀರ್ ಅಬ್ದುಲ್ ಹಮೀದ್ ಕುರಿತ ಪಠ್ಯ ಸೇರ್ಪಡೆ

Update: 2024-09-21 23:14 IST

Veer Abdul Hameed | Photo: Wikimedia Commons

ಹೊಸದಿಲ್ಲಿ : ರಾಷ್ಟ್ರೀಯ ಶಿಕ್ಷಣ ನೀತಿ-2020 ಹಾಗೂ ಶಾಲಾ ಶಿಕ್ಷಣ ಚೌಕಟ್ಟು 2020ರ ಅಡಿ, ಎನ್‌ಸಿಇಆರ್‌ಟಿಯ ಆರನೆ ತರಗತಿ ಪಠ್ಯಕ್ರಮದಲ್ಲಿ ಈ ವರ್ಷದಿಂದ ರಾಷ್ಟ್ರೀಯ ಯುದ್ಧ ಸ್ಮಾರಕ ಕುರಿತ ಪದ್ಯ ಹಾಗೂ ವೀರ್ ಅಬ್ದುಲ್ ಹಮೀದ್ ಕುರಿತ ಪಠ್ಯವನ್ನು ಸೇರ್ಪಡೆ ಮಾಡಲಾಗಿದೆ ಎಂದು ಶುಕ್ರವಾರ ಕೇಂದ್ರ ಶಿಕ್ಷಣ ಸಚಿವಾಲಯವು ಪ್ರಕಟಿಸಿದೆ.

ರಕ್ಷಣಾ ಸಚಿವಾಲಯ ಹಾಗೂ ಶಿಕ್ಷಣ ಸಚಿವಾಲಯ ಜಂಟಿಯಾಗಿ ಈ ಉಪಕ್ರಮವನ್ನು ಕೈಗೊಂಡಿದ್ದು, ಶಾಲಾ ವಿದ್ಯಾರ್ಥಿಗಳಲ್ಲಿ ದೇಶಪ್ರೇಮವನ್ನು ಬಿತ್ತುವ, ಕರ್ತವ್ಯ ಪ್ರಜ್ಞೆ ಮತ್ತು ಧೈರ್ಯವನ್ನು ಬೆಳೆಸುವ ಹಾಗೂ ತ್ಯಾಗ ಮನೋಭಾವವನ್ನು ಬೆಳೆಸುವ ಗುರಿ ಹೊಂದಿದೆ. ಇದರೊಂದಿಗೆ ದೇಶ ನಿರ್ಮಾಣದಲ್ಲಿ ಯುವಕರನ್ನು ಸೆಳೆಯುವ ಉದ್ದೇವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಾಷ್ಟ್ರೀಯ ಯುದ್ಧ ಸ್ಮಾರಕದ ಹಿಂದಿರುವ ಸ್ಫೂರ್ತಿಯನ್ನು ನೆನೆಯಲು ಅದರ ಕುರಿತ ಪದ್ಯವನ್ನು ಸೇರ್ಪಡೆ ಮಾಡಲಾಗಿದೆ. 1965ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದಲ್ಲಿ ಹುತಾತ್ಮರಾದ ವೀರ್ ಅಬ್ದುಲ್ ಹಮೀದ್ ಅವರನ್ನು ಸ್ಮರಿಸಲು ಅವರ ಕುರಿತ ಪಠ್ಯವನ್ನು ಸೇರ್ಪಡೆ ಮಾಡಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಹೇಳಿದೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News