×
Ad

ನೀತಿ ಸಂಹಿತೆ ಉಲ್ಲಂಘನೆ: ಅಣ್ಣಾಮಲೈ ವಿರುದ್ಧ 2 ಮೊಕದ್ದಮೆ

Update: 2024-04-15 21:09 IST

ಅಣ್ಣಾಮಲೈ | PC : NDTV 

ಚೆನ್ನೈ: ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದಕ್ಕಾಗಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಹಾಗೂ ಕೊಯಂಬತೋರ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೆ. ಅಣ್ಣಾಮಲೈ ವಿರುದ್ಧ ಎರಡು ಮೊಕದ್ದಮೆಗಳು ದಾಖಲಾಗಿವೆ.

ಮೊಕದ್ದಮೆಗಳು ಸೂಳೂರು ಮತ್ತು ಸಿಂಗನಲ್ಲೂರು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ.

ಕಳೆದ ವಾರ ಅಣ್ಣಾಮಲೈ ಮತ್ತು ಅವರ ಪಕ್ಷದ ಕೆಲವು ಸದಸ್ಯರ ವಿರುದ್ಧ ಇನ್ನೊಂದು ಮೊಕದ್ದಮೆ ದಾಖಲಾಗಿತ್ತು. ಚುನಾವಣಾ ಆಯೋಗ ವಿಧಿಸಿರುವ ಸಮಯವನ್ನೂ ಮೀರಿ ಬಿಜೆಪಿ ಪ್ರಚಾರ ನಡೆಸಿರುವುದಕ್ಕಾಗಿ ಮೊಕದ್ದಮೆ ದಾಖಲಾಗಿತ್ತು. ಬಿಜೆಪಿಯ ಈ ಕೃತ್ಯವನ್ನು ಡಿಎಂಕೆ ಮತ್ತು ಅದರ ಎಡಪಂಥೀಯ ಮಿತ್ರಪಕ್ಷಗಳು ವಿರೋಧಿಸಿದಾಗ ಜಗಳ ಸಂಭವಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News