×
Ad

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಪೊಲೀಸ್, ಬಾಲಕ ಸಹಿತ ನಾಲ್ವರು ಮೃತ್ಯು

Update: 2023-07-08 12:19 IST

ಇಂಫಾಲ್: ಕಳೆದ 24 ಗಂಟೆಗಳಲ್ಲಿ ಮಣಿಪುರದ ಬಿಷ್ಣುಪುರ್ ಹಾಗೂ ಚುರಾಚಂದ್ಪುರ ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಹದಿಹರೆಯದ ಬಾಲಕ ಸೇರಿದಂತೆ ಕನಿಷ್ಠ ನಾಲ್ವರು ಗುಂಡು ತಗಲಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು NDTVಗೆ ತಿಳಿಸಿವೆ.

ನಿನ್ನೆ ಸಂಜೆ ಶಂಕಿತ ಬಂಡುಕೋರನೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಪೊಲೀಸ್ ಹುತಾತ್ಮರಾಗಿದ್ದರೆ, ಬೆಳಗಿನ ಜಾವ ಮೂವರು ಬಲಿಯಾದ ಘಟನೆ ವರದಿಯಾಗಿದೆ.

ಕಳೆದ ಎರಡು ತಿಂಗಳಿನಿಂದ  ಈ ಎರಡು ಜಿಲ್ಲೆಗಳ ನಡುವಿನ ಗಡಿ ಪ್ರದೇಶಗಳಲ್ಲಿ ಕೊಲೆಗಳು, ಹಿಂಸಾಚಾರಗಳು ಮತ್ತು ಬೆಂಕಿ ಹಚ್ಚುವ ಘಟನೆಗಳ ಉಲ್ಬಣವಾಗಿರುವ ಕುರಿತು ವರದಿಯಾಗಿದೆ.

ಸೇನಾ ಮೂಲಗಳ ಪ್ರಕಾರ, ಬಿಷ್ಣುಪುರ್ ಜಿಲ್ಲೆಯ ಕಂಗ್ವೈ ಪ್ರದೇಶವು ಮಣಿಪುರದಲ್ಲಿ ಪ್ರಸ್ತುತ ಬಿಕ್ಕಟ್ಟಿನ ಆರಂಭದಿಂದಲೂ ಸೂಕ್ಷ್ಮ ಪ್ರದೇಶವಾಗಿದೆ.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News