×
Ad

ರವಿವಾರ ಉಪವಾಸ ಮಾಡುವ ಮೂಲಕ ಬೆಂಬಲ ನೀಡಲು ಜನರಿಗೆ ಆಹ್ವಾನ ನೀಡಿದ ಸೋನಮ್ ವಾಂಗ್‌ಚುಕ್

Update: 2024-10-10 10:31 IST

Photo: PTI 

ಹೊಸದಿಲ್ಲಿ : ದಿಲ್ಲಿಯ ಲಡಾಖ್ ಭವನದಲ್ಲಿ ತಾನು ನಡೆಸುತ್ತಿರುವ ಉಪವಾಸ ಸತ್ಯಾಗ್ರಹವನ್ನು ಬೆಂಬಲಿಸಲು ಬಯಸುವವರು ಅಕ್ಟೋಬರ್ 13 ರಂದು ಒಂದು ದಿನದ ಉಪವಾಸ ಮಾಡುವ ಮೂಲಕ ಪಾಲ್ಗೊಳ್ಳಬಹುದು ಎಂದು ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಬುಧವಾರ ಸಂಜೆ ಹೇಳಿದ್ದಾರೆ.

Instagram ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ, ವಾಂಗ್‌ಚುಕ್ ಅನೇಕ ಜನರು ತಮ್ಮನ್ನು ಭೇಟಿಯಾಗಲು ಬಂದಿದ್ದಾರೆ. ಲಡಾಖ್‌ನ ಬೇಡಿಕೆಗಳಿಗೆ ಹೇಗೆ ಬೆಂಬಲ ನೀಡಬಹುದು ಎಂದು ಹಲವರು ಕೇಳಿದ್ದಾರೆ ಎಂದು ಹೇಳಿದರು.

"ಲಡಾಖ್ ಅನ್ನು ಬೆಂಬಲಿಸಲು ನಾವು ಏನು ಮಾಡಬಹುದು ಎಂದು ನನ್ನಲ್ಲಿ ಹಲವರು ಕೇಳಿದ್ದಾರೆ. ನಮ್ಮನ್ನು ಬೆಂಬಲಿಸಲು ಬಯಸುವವರು ರವಿವಾರ ಒಂದು ದಿನ ಉಪವಾಸ ಮಾಡಬಹುದು..." ಎಂದು ವಾಂಗ್ಚುಕ್ ಹೇಳಿದರು.

"ನಿಮಗೆ ಬೇಕಾದರೆ ರವಿವಾರ ನಿಮ್ಮ ನಗರದಲ್ಲಿ ಪಾದಯಾತ್ರೆ ಕೈಗೊಳ್ಳಬಹುದು. ದಿಲ್ಲಿಯಲ್ಲಿರುವವರು ರವಿವಾರ ಲಡಾಖ್ ಭವನದ ಹೊರಗೆ ಸೇರಬಹುದು. ಆದರೆ ಬರುವವರು ಮೌನವನ್ನು ಪಾಲಿಸಬೇಕು. ಯಾವುದೇ ಘೋಷಣೆ ಕೂಗಬಾರದು" ಎಂದು ಅವರು ಹೇಳಿದರು.

ರವಿವಾರ ಮಧ್ಯಾಹ್ನ ಆರಂಭವಾದ ಲಡಾಖ್‌ನ ವಾಂಗ್‌ಚುಕ್ ಮತ್ತು ಇತರರು ನಡೆಸುತ್ತಿರುವ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಬುಧವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News