×
Ad

ಪಶ್ಚಿಮ ಬಂಗಾಳ: ದುಷ್ಕರ್ಮಿಗಳಿಂದ ಗುಂಡೇಟು; ಟಿಎಂಸಿ ಮುಖಂಡನಿಗೆ ಗಾಯ

Update: 2024-05-17 21:03 IST

ಸಾಂದರ್ಭಿಕ ಚಿತ್ರ | PC : ANI 

ಕೂಚ್ ಬೆಹಾರ್: ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯಲ್ಲಿ ಸ್ಥಳೀಯ ಟಿಎಂಸಿ ಮುಖಂಡರೊಬ್ಬರು ದುಷ್ಕರ್ಮಿಗಳ ಗುಂಡೇಟಿನಿಂದ ಗಾಯಗೊಂಡಿದ್ದಾರೆ.

ಸೀತಾಕುಚಿಯ ಲಾಲ್ಬಝಾರ್ ಪಂಚಾಯತ್ ಪ್ರಧಾನರಾದ ಅನಿಮೇಶ್ ರಾಯ್ ಗುರುವಾರ ರಾತ್ರಿ ತನ್ನ ಸಹಾಯಕನೊಂದಿಗೆ ಮನೆಗೆ ಮರಳುತ್ತಿದ್ದಾಗ ಅವರ ಮೇಲೆ ದಾಳಿ ನಡೆದಿದೆೆ.

ಅನಿಮೇಶ್ ಅವರಿಗೆ ಗುಂಡಿಕ್ಕಿದ ಶಸ್ತ್ರಾಸ್ತ್ರಧಾರಿಗಳ ಗುರುತು ಇನ್ನೂ ಪತ್ತೆಯಾಗಿಲ್ಲ. ರಾಯ್ ಅವರ ಬಲತೊಡೆಗೆ ಗುಂಡೇಟಿನಿಂದ ಗಾಯವಾಗಿದೆ. ರಾಯ್ ಅವರ ಸಹಾಯಕನೂ ಗುಂಡೇಟಿನಿಂದ ಗಾಯಗೊಂಡಿದ್ದಾನೆಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ದಾಳಿಯ ಹಿಂದೆ ಇರುವವರನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದವರು ಹೇಳಿದ್ದಾರೆ. ಗಾಯಾಳು ಅನಿಮೇಶ್ ಅವರ ಕುಟುಂಬಿಕರ ಜೊತೆಗೂ ಮಾತನಾಡಿದ್ದು, ಅವರು ಹೆಚ್ಚಿನ ವಿವರಗಳನ್ನು ನೀಡಿಲ್ಲವೆಂದು ತಿಳಿಸಿದ್ದಾರೆ.

ಅನಿಮೇಶ್ ರಾಯ್ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News