×
Ad

ಪಶ್ಚಿಮಬಂಗಾಳ: ಅತ್ತಿಗೆಯ ಹತ್ಯೆಗೈದು, ರುಂಡ ಹಿಡಿದುಕೊಂಡು ತಿರುಗಾಡುತ್ತಿದ್ದ ವ್ಯಕ್ತಿಯ ಬಂಧನ

Update: 2025-05-31 22:51 IST

ಸಾಂದರ್ಭಿಕ ಚಿತ್ರ | PC : freepik.com

ಕೋಲ್ಕತಾ: ಅತ್ತಿಗೆಯ ಹತ್ಯೆಗೈದು, ರುಂಡವನ್ನು ಕತ್ತರಿಸಿ ಹಿಡಿದುಕೊಂಡು ಬೀದಿಯಲ್ಲಿ ಸುತ್ತಾಡುತ್ತಿದ್ದ ವ್ಯಕ್ತಿಯನ್ನು ಪಶ್ಚಿಮಬಂಗಾಳದ ದಕ್ಷಿಣ 24 ಪರಗಣದಿಂದ ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ಬಿಮಲ್ ಮಂಡಲ್ ಎಂದು ಗುರುತಿಸಲಾಗಿದೆ. ತನ್ನ ಅತ್ತಿಗೆಯನ್ನು ಹತ್ಯೆಗೈದ ಶಂಕೆಯಲ್ಲಿ ಈತನನ್ನು ಜಿಲ್ಲೆಯ ಬಸಂತಿ ಪ್ರದೇಶದ ಭರತ್‌ ಗಢದಿಂದ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಈತ ತನ್ನ ಅತ್ತಿಗೆಯ ಕತ್ತರಿಸಿದ ರುಂಡವನ್ನು ಹಿಡಿದುಕೊಂಡು ಬೀದಿಯಲ್ಲಿ ತಿರುಗಾಡುತ್ತಿದ್ದ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು ಎಂದು ಅವರು ಹೇಳಿದ್ದಾರೆ.

ಆರೋಪಿ ವ್ಯಕ್ತಿ ಹಾಗೂ ಆತನ ಅತ್ತಿಗೆ ನಡುವೆಗೆ ಜಗಳವಾಗಿದೆ. ಈ ಸಂದರ್ಭ ಆತ ಕುಡುಗೋಲಿನಂತಹ ಆಯುಧದಿಂದ ಆಕೆಯ ಹತ್ಯೆಗೈದಿದ್ದಾನೆ. ತಲೆಯನ್ನು ಕತ್ತರಿಸಿದ್ದಾನೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಆರೋಪಿ ಅನಂತರ ತನ್ನ ಅತ್ತಿಗೆಯ ರುಂಡವನ್ನು ಹಿಡಿದುಕೊಂಡು ಬೀದಿಯಲ್ಲಿ ಸುತ್ತಾಡುತ್ತಿದ್ದ. ಇದನ್ನು ಸ್ಥಳೀಯರು ಗಮನಿಸಿದರು. ಕೆಲವರು ವೀಡಿಯೊ ಕೂಡ ಮಾಡಿದರು ಎಂದು ಅವರು ಹೇಳಿದ್ದಾರೆ.

ನಾವು ಸ್ಥಳೀಯರಿಂದ ಕರೆ ಸ್ವೀಕರಿಸಿದೆವು. ಆದರೆ, ಆರೋಪಿ ಮಹಿಳೆಯ ರುಂಡ ಹಾಗೂ ಆಕೆಯನ್ನು ಹತ್ಯೆಗೈಯಲು ಬಳಸಿದ ಆಯುಧವನ್ನು ಹಿಡಿದುಕೊಂಡು ಪೊಲೀಸ್ ಠಾಣೆಗೆ ಬಂದ ಎಂದು ಅವರು ತಿಳಿಸಿದ್ದಾರೆ.

ಆರೋಪಿ ಹಾಗೂ ಹತ್ಯೆಗೀಡಾದ ಮಹಿಳೆ ಆಸ್ತಿಯ ವಿಷಯದಲ್ಲಿ ಶನಿವಾರ ಬೆಳಗ್ಗಿನಿಂದ ಜಗಳವಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News