×
Ad

ಬಿಹಾರ | ಎನ್‌ಡಿಎ ಮೈತ್ರಿಕೂಟದೊಂದಿಗಿನ ಮಾತುಕತೆ ಮುರಿದು ಬಿದ್ದರೆ, ಏಕಾಂಗಿ ಸ್ಪರ್ಧೆ: SBSP ಮುಖ್ಯಸ್ಥ

Update: 2025-08-02 14:00 IST

ಓಂ ಪ್ರಕಾಶ್ ರಾಜ್ ಭರ್ (Photo: PTI)

ಬಲ್ಲಿಯಾ: ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದೊಂದಿಗಿನ ಸೀಟು ಹಂಚಿಕೆ ಮಾತುಕತೆಯೇನಾದರೂ ಮುರಿದು ಬಿದ್ದರೆ, ನಮ್ಮ ಪಕ್ಷ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಸುಹೇಲ್ ದೇವ್ ಭಾರತೀಯ ಸಮಾಜ್ ಪಕ್ಷದ (SBSP) ಮುಖ್ಯಸ್ಥ ಓಂ ಪ್ರಕಾಶ್ ರಾಜ್ ಭರ್ ಘೋಷಿಸಿದ್ದಾರೆ.

ಬಲ್ಲಿಯ ಜಿಲ್ಲೆಯ ರಾಸ್ರಾದಲ್ಲಿರುವ ತಮ್ಮ ಪಕ್ಷದ ಮುಖ್ಯ ಕಚೇರಿಯಲ್ಲಿ ಶುಕ್ರವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಉತ್ತರ ಪ್ರದೇಶ ಪಂಚಾಯತ್ ರಾಜ್ ಸಚಿವರೂ ಆದ ರಾಜ್ ಭರ್, “ಎನ್ಡಿಎ ಮೈತ್ರಿಕೂಟದೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸುವುದು ನಮ್ಮ ಪ್ರಥಮ ಆದ್ಯತೆಯಾಗಿದೆ. ಈ ಕುರಿತು ಶೇ. 70ರಷ್ಟು ಮಾತುಕತೆ ಮುಕ್ತಾಯಗೊಂಡಿದ್ದು, ಶೇ. 30ರಷ್ಟು ಮಾತುಕತೆಯಷ್ಟೇ ಬಾಕಿಯುಳಿದಿದೆ” ಎಂದು ತಿಳಿಸಿದ್ದಾರೆ.

“ಹೀಗಿದ್ದರೂ, ನಾವು ಎರಡನೆ ಆಯ್ಕೆಯಾಗಿಯೂ ಸಿದ್ಧತೆ ನಡೆಸುತ್ತಿದ್ದೇವೆ. ಬಿಹಾರದ ಕೆಲವು ನಾಯಕರ ಒತ್ತಡದ ಕಾರಣಕ್ಕೇನಾದರೂ ಮೈತ್ರಿ ಒಪ್ಪಂದ ಸಾಧ್ಯವಾಗದಿದ್ದರೆ, ನಾವು ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಂಪೂರ್ಣ ಸನ್ನದ್ಧರಾಗಿದ್ದೇವೆ” ಎಂದು ಅವರು ಘೋಷಿಸಿದ್ದಾರೆ.

ಇದೇ ವೇಳೆ, ನಮ್ಮ ಪಕ್ಷ ಇಂಡಿಯಾ ಮೈತ್ರಿಕೂಟಕ್ಕೆ ಸೇರ್ಪಡೆಯಾಗುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಬಿಹಾರದಲ್ಲಿ ಪರಾಭವಗೊಳ್ಳುವ ಸುಳಿವು ಈಗಾಗಲೇ ರಾಹುಲ್ ಗಾಂಧಿಗೆ ದೊರೆತಿದೆ. ಹೀಗಾಗಿಯೇ ಅವರು ಆಧಾರರಹಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News