×
Ad

ಮುಂಬೈ ಸಭೆಯಲ್ಲಿ ಇನ್ನಷ್ಟು ಪಕ್ಷಗಳು ‘ಇಂಡಿಯಾ’ ಮೈತ್ರಿಕೂಟ ಸೇರಲಿದೆಯೇ?: ನಿತೀಶ್ ಕುಮಾರ್ ಹೇಳಿದ್ದು ಹೀಗೆ…

Update: 2023-08-27 22:25 IST

ನಿತೀಶ್ ಕುಮಾರ್ | Photo: PTI 

ಪಾಟ್ನಾ: ಸದ್ಯೋಭವಿಷ್ಯದಲ್ಲಿ ಇನ್ನಷ್ಟು ಪಕ್ಷಗಳು ‘ಇಂಡಿಯಾ’ ಮೈತ್ರಿಕೂಟವನ್ನು ಸೇರುವ ಸಾಧ್ಯತೆಯಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರವಿವಾರ ಇಲ್ಲಿ ಹೇಳಿದರು. ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾದ ನಾಯಕರು ಆ.31 ಮತ್ತು ಸೆ.1ರಂದು ಮುಂಬೈನಲ್ಲಿ ಸಭೆ ಸೇರಲಿದ್ದಾರೆ.

ಈಶಾನ್ಯ ಭಾರತ,ಪೂರ್ವ ರಾಜ್ಯಗಳು,ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದ ಪಕ್ಷಗಳು ಪ್ರತಿಪಕ್ಷ ಮೈತ್ರಿಕೂಟವನ್ನು ಸೇರಲು ಆಸಕ್ತವಾಗಿವೆ ಎಂದು ಅವರು ಹೇಳಿದರು. ನಿರ್ದಿಷ್ಟ ಪಕ್ಷಗಳನ್ನು ಅವರು ಹೆಸರಿಸಲಿಲ್ಲವಾದರೂ,ಇವೆಲ್ಲವೂ ಪ್ರಾದೇಶಿಕ ಪಕ್ಷಗಳಾಗಿವೆ ಮತ್ತು ಕೇಂದ್ರದ ಬಿಜೆಪಿ ಸರಕಾರದ ವಿರೋಧಿಗಳಾಗಿವೆ ಎಂದು ತಿಳಿಸಿದರು.

‘ಇಂಡಿಯಾ’ದ ಸಂಚಾಲಕರ ಹೆಸರು ನಿರ್ಧಾರ ಮತ್ತು 2024ರ ಲೋಕಸಭಾ ಚುನಾವಣೆಗಳಲ್ಲಿ ಸ್ಥಾನಹಂಚಿಕೆ ಕಾರ್ಯತಂತ್ರ ಸೇರಿದಂತೆ ಮಹತ್ವದ ವಿಷಯಗಳು ಚರ್ಚೆಯಾಗಲಿರುವುದರಿಂದ ಮುಂಬೈ ಸಭೆಯು ಪ್ರಾಮುಖ್ಯವನ್ನು ಪಡೆದುಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News