×
Ad

ಉತ್ತರ ಪ್ರದೇಶ | ಮೇಕೆಗಳ ಮಾರಾಟಕ್ಕೆ ಸಂಬಂಧಿಸಿದಂತೆ ನಡೆದ ಜಗಳದಲ್ಲಿ ತನ್ನ ತಾಯಿಗೇ ಬೆಂಕಿ ಹಚ್ಚಿದ ಪುತ್ರ

Update: 2024-08-17 20:11 IST

Photo : Meta AI

ಸೋನ್ ಭದ್ರ (ಉತ್ತರ ಪ್ರದೇಶ): ಮೇಕೆ ಮಾರಾಟಕ್ಕೆ ಸಂಬಂಧಿಸಿದಂತೆ ನಡೆದ ಜಗಳದಲ್ಲಿ ತನ್ನ 50 ವರ್ಷದ ತಾಯಿಗೇ ಪುತ್ರನೊಬ್ಬ ಬೆಂಕಿ ಹಚ್ಚಿರುವ ಘಟನೆ ಬಚ್ರಾ ಗ್ರಾಮದಲ್ಲಿ ನಡೆದಿದೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.

ಶನಿವಾರ ರಾತ್ರಿ ಮೃತ ಕಮಲೇಶ್ ದೇವಿಯ ತಲೆಗೆ ಆತನ ಪುತ್ರ ಮೊಂಡಾದ ಸಾಧನವೊಂದರಿಂದ ಹಲ್ಲೆ ನಡೆಸಿದ್ದ ಎಂದು ಅವರು ಹೇಳಿದ್ದಾರೆ.

ನಂತರ, ಆಕೆಯ ದೇಹವನ್ನು ಬಟ್ಟೆಯೊಂದರಲ್ಲಿ ಹುದುಗಿಸಿಟ್ಟಿರುವ ಕಿಶನ್ ಬಿಹಾರಿ ಯಾದವ್ ಎಂಬ ಆಕೆಯ ಪುತ್ರನು, ಅದರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತ್ರಿಭುವನ್ ನಾಥ್ ತ್ರಿಪಾಠಿ ತಿಳಿಸಿದ್ದಾರೆ.

ಕೂಡಲೇ ಆತನ ಮನೆಗೆ ಧಾವಿಸಿರುವ ನೆರೆಹೊರೆಯವರು ಬೆಂಕಿಯನ್ನು ನಂದಿಸಿದ್ದಾರೆ. ಆದರೆ, ಆ ವೇಳೆಗಾಗಲೇ ಆ ಮಹಿಳೆಯು ಮೃತಪಟ್ಟಿದ್ದಳು ಎಂದು ಅವರು ಹೇಳಿದ್ದಾರೆ.

ಈ ಹತ್ಯೆಗೆ ಸಂಬಂಧಿಸಿದಂತೆ ಆರೋಪಿ ಕಿಶನ್ ಬಿಹಾರಿ ಯಾದವ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಕಮಲೇಶ್ ದೇವಿ ತನ್ನ ಪುತ್ರ ಹಾಗೂ ಸೊಸೆಯೊಂದಿಗೆ ವಾಸಿಸುತ್ತಿದ್ದರು ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News