×
Ad

ದಿಲ್ಲಿ ರಸ್ತೆಗಳಿಗೆ ನುಗ್ಗಿದ ಯಮುನಾ ನದಿ ನೀರು: ಟ್ರಾಫಿಕ್‌ ಅಸ್ತವ್ಯಸ್ತ

Update: 2023-07-12 21:53 IST

Photo: PTI 

ಹೊಸದಿಲ್ಲಿ: ಉತ್ತರ ಭಾರತದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಯಮುನಾ ನದಿ ಉಕ್ಕಿ ಹರಿಯತ್ತಿದ್ದು, 45 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿದೆ.

ಯಮುನಾ ನದಿಯ ನೀರು ಬುಧವಾರ ಸಂಜೆ ಉತ್ತರ ದಿಲ್ಲಿಯ ರಿಂಗ್ ರೋಡ್‌ಗೆ ನುಗ್ಗಿದ್ದು, ರಸ್ತೆ ಜಲಾವೃತಗೊಂಡು ಟ್ರಾಫಿಕ್ ಜಾಮ್ ಉಂಟಾಗಿದೆ.

"ಯಮುನಾ ನದಿ ನೀರು ಉಕ್ಕಿ ಹರಿಯುತ್ತಿರುವುದರಿಂದ ಮೊನೆಸ್ಟರಿ ಮತ್ತು ಐಎಸ್‌ಬಿಟಿ, ಕಾಶ್ಮೆರೆ ಗೇಟ್ ನಡುವಿನ ರಿಂಗ್ ರಸ್ತೆಯಲ್ಲಿ ಸಂಚಾರಕ್ಕೆ ತೊಂದರೆಯಾಗಿದೆ" ಎಂದು ದಿಲ್ಲಿ ಟ್ರಾಫಿಕ್ ಪೊಲೀಸರು ಎಚ್ಚರಿಕೆಯನ್ನು ಟ್ವೀಟ್‌ ಮಾಡಿದ್ದಾರೆ.

ದಿಲ್ಲಿ ಔಟರ್‌ ರಿಂಗ್‌ ರೋಡ್‌ ನಗರವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ.

ಯಮುನಾ ಇಂದು 207.71 ಮೀಟರ್‌ಗೆ ಏರಿದ್ದು, ಇದಕ್ಕೂ ಮುನ್ನ 1978 ರಲ್ಲಿ 207.49 ಮೀಟರ್‌ಗಳವರೆಗೆ ಏರಿತ್ತು.

ಇದಕ್ಕೂ ಮುನ್ನ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ನದಿಯ ಸಮೀಪದ ತಗ್ಗು ಪ್ರದೇಶಗಳ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದ್ದರು. ನಾವು ಜೀವಗಳು ಮತ್ತು ಆಸ್ತಿಗಳನ್ನು ರಕ್ಷಿಸಬೇಕಾಗಿದೆ. ಯಮುನಾ ನದಿಯ ಸಮೀಪವಿರುವ ತಗ್ಗು ಪ್ರದೇಶಗಳಲ್ಲಿರುವ ಜನರನ್ನು ಸ್ಥಳಾಂತರಿಸಬೇಕಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದರು.

ಸಿಎಂ ಕೇಜ್ರಿವಾಲ್ ತುರ್ತು ಸಭೆ ನಡೆಸಿದ್ದು, ಹರಿಯಾಣದ ಹತ್ನಿಕುಂಡ್ ಬ್ಯಾರೇಜ್‌ನಿಂದ ಸದ್ಯಕ್ಕೆ ನೀರು ಬಿಡದಂತೆ ಕೇಂದ್ರಕ್ಕೆ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News