×
Ad

ಅತೀ ಕಡಿಮೆ ಸಮಯದಲ್ಲಿ ವಿಶ್ವದ 14 ಸೂಪರ್ ಪರ್ವತಗಳನ್ನು ಏರಿ ವಿಶ್ವದಾಖಲೆ ಬರೆದ ಮಹಿಳೆ

Update: 2023-07-27 23:23 IST

Photo: twitter/kristin_harila

ಇಸ್ಲಮಾಬಾದ್: ಅತೀ ಕಡಿಮೆ ಸಮಯದಲ್ಲಿ ವಿಶ್ವದ 14 ಸೂಪರ್ ಪರ್ವತಗಳನ್ನು ಏರುವ ಮೂಲಕ ನಾರ್ವೆಯ ಮಹಿಳೆ ಕ್ರಿಸ್ತಿನ್ ಹರಿಲಾ ಮತ್ತು ನೇಪಾಳದ ತೆನ್‍ಜಿನ್ ಶೆರ್ಪಾ ವಿಶ್ವದಾಖಲೆ ಸ್ಥಾಪಿಸಿದ್ದಾರೆ ಎಂದು ವರದಿಯಾಗಿದೆ.

8000 ಮೀಟರ್‍ಗೂ ಎತ್ತರವಿರುವ ವಿಶ್ವದ 14 ಸೂಪರ್ ಪರ್ವತಗಳನ್ನು ಇವರಿಬ್ಬರು 3 ತಿಂಗಳು ಮತ್ತು 1 ದಿನದ ಅವಧಿಯೊಳಗೆ ಏರಿದ್ದು ಇದು ನೂತನ ವಿಶ್ವದಾಖಲೆಯಾಗಿದೆ. ಈ ಹಿಂದೆ 2019ರಲ್ಲಿ ನೇಪಾಳ ಮೂಲದ ಬ್ರಿಟನ್‍ನ ಪರ್ವತಾರೋಹಿ ನಿರ್ಮಲ್ ಪುರ್ಜಾ 6 ತಿಂಗಳು 6 ದಿನದಲ್ಲಿ 14 ಸೂಪರ್ ಶಿಖರಗಳನ್ನು ಏರಿದ್ದು ಇದುವರೆಗಿನ ದಾಖಲೆಯಾಗಿತ್ತು.

ಇದುವರೆಗೆ 40ಕ್ಕೂ ಅಧಿಕ ಪರ್ವತಾರೋಹಿಗಳು ವಿಶ್ವದ ಉನ್ನತ 14 ಶಿಖರಗಳನ್ನು ಯಶಸ್ವಿಯಾಗಿ ಏರಿದ್ದು ಇದರಲ್ಲಿ ಮಹಿಳೆಯರ ಸಂಖ್ಯೆ ಕೇವಲ 14.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News