ಕ್ಯಾಲಿಫೋರ್ನಿಯಾದಲ್ಲಿ ಸರಣಿ ಬಾಂಬ್ ಸ್ಫೋಟದ ಸಂಚು ವಿಫಲಗೊಳಿಸಿದ ಫೆಡರಲ್ ಅಧಿಕಾರಿಗಳು; ಬಂಡವಾಳಶಾಹಿ ವಿರೋಧಿ ಗುಂಪಿನ ಸದಸ್ಯರ ಬಂಧನ
ಸ್ಯಾನ್ಫ್ರಾನ್ಸಿಸ್ಕೊ,ಡಿ.16: ಹೊಸ ವರ್ಷಾಚರಣೆ ಸಂದರ್ಭ ದಕ್ಷಿಣ ಕ್ಯಾಲಿಪೋರ್ನಿಯಾದಲ್ಲಿರುವ ಎರಡು ಅಮೆರಿಕನ್ ಕಂಪೆನಿಗಳಿಗೆ ಸೇರಿದ ಸ್ಥಳಗಳಲ್ಲಿ ಸರಣಿ ಬಾಂಬ್ ಸ್ಫೋಟಗಳನ್ನು ನಡೆಸುವ, ಬಂಡವಾಳಶಾಹಿ ಹಾಗೂ ಸರಕಾರಿ ವಿರೋಧಿ ತೀವ್ರವಾದಿ ಗುಂಪೊಂದರ ಸದಸ್ಯರನ್ನು ಸಂಚನ್ನು ಫೆಡರಲ್ ತನಿಖಾಧಿಕಾರಿಗಳು ವಿಫಲಗೊಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಿದ್ದಾರೆ.
ಲಾಸ್ ಏಂಜಲೀಸ್ ಸಮೀಪದ ಮೊಜಾವೆ ಮರುಭೂಮಿ ಪ್ರದೇಶದಲ್ಲಿ ಆರೋಪಿಗಳು ತಮ್ಮ ಸಂಚಿನ ರಿಹರ್ಸಲ್ ನಡೆಸುತ್ತಿದ್ದಾಗ ಅವರನ್ನು ಬಂಧಿಸಲಾಯಿತೆಂದು, ಅಮೆರಿಕದ ಪ್ರಧಾನ ಸಹಾಯಕ ಅಟಾರ್ನಿ ಬಿಲ್ ಎಸ್ಸಾಯಿಲ್ ತಿಳಿಸಿದ್ದಾರೆ.
ಶಂಕಿತ ಆರೋಪಿಗಳು ದೊಡ್ಡ ಗಾತ್ರದ ಕಪ್ಪುಬಣ್ಣದ ವಸ್ತುವೊಂದನ್ನು ಕೊಂಡೊಯ್ಯುತ್ತಿರುವ ವೀಡಿಯೊ ದೃಶ್ಯಾವಳಿಯನ್ನು ವೈಮಾನಿಕ ಕಣ್ಗಾವಲು ಕ್ಯಾಮರಾ ಸೆರೆಹಿಡಿದಿರುವುದನ್ನು ಅಧಿಕಾರಿಗಳು ಸುದ್ದಿಗಾರರಿಗೆ ತೋರಿಸಿದ್ದಾರೆ.
ಶಂಕಿತ ಆರೋಪಿಗಳು ವಿಧ್ವಂಸ ಕೃತ್ಯಕ್ಕಾಗಿ ಸ್ಫೋಟಕ ಸಾಮಾಗ್ರಿಯನ್ನು ಜೋಡಿಸುವ ಮುನ್ನ ಅವರನ್ನು ಬಂಧಿಸಲಾಗಿದೆಯೆಂದು ಎಸ್ಸಾಯಿಲ್ ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಆಡ್ರೆ ಇಲ್ಲೀನ್ ಕರೋಲ್ (30), ಝಕಾರಿ ಆರೋನಂ ಪೇಜ್ (32), ದಾಂತೆ ಗ್ಯಾಫೀಲ್ಡ್ (24) ಹಾಗೂ ಟೀನಾ ಲಾಯಿ (41) ಎಂದು ಗುರುತಿಸಲಾಗಿದೆ. ಅವರೆಲ್ಲರೂ ಲಾಸ್ಏಂಜಲೀಸ್ ಪ್ರದೇಶದವರೆಂದು ಎಸ್ಸಾಯಿಲ್ ತಿಳಿಸಿದ್ದಾರೆ.
ಟರ್ಟಲ್ ಐಲ್ಯಾಂಡ್ ವಿಮೋಚನಾ ರಂಗದ ಅಂಗಘಟಕದ ಸದಸ್ಯರೆಂದು ಆರೋಪಿಗಳು ವಿಚಾಣೆಯ ವೇಳೆ ಬಹಿರಂಗಪಡಿಸಿದ್ದಾರೆ. ವಸಾಹತುಶಾಹಿಯಿಂದ ವಿಮೋಚನೆ, ಬುಡಕಟ್ಟು ಜನರ ಸಾರ್ವಭೌಮತ್ವ ಹಾಗೂ ಬಂಡವಾಳಶಾಹಿ ವಾದದ ವಿರುದ್ಧ ಹೋರಾಟ ನಡೆಸಲು ಶ್ರಮಿಕ ವರ್ಗವನ್ನು ಒಗ್ಗೂಡಿಸುವುದು ಈ ಸಂಘಟನೆಯ ಗುರಿಯಾಗಿದೆ.