×
Ad

ಬಾಳೆಹಣ್ಣು ಸೇವಿಸುವ ಬಗ್ಗೆ ವೈದ್ಯರ ಸಲಹೆ ಏನು?

Update: 2026-02-08 19:51 IST

ಬಾಳೆಹಣ್ಣುಗಳು ಆಂಟಿ ಆಕ್ಸಿಡಂಟ್‌ನಲ್ಲಿ ಸಮೃದ್ಧವಾಗಿವೆ. ಅವು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆಗೊಳಿಸುತ್ತವೆ. ಹೀಗಾಗಿ ಆಹಾರದ ನಡುವೆ ಸೂಕ್ತ ತಿನಿಸನ್ನು ಆರಿಸಿಕೊಳ್ಳಬೇಕೆಂದರೆ ಹುರಿದ ಅಥವಾ ಕರಿದ ವಸ್ತುಗಳ ಬದಲಾಗಿ ಬಾಳೆಹಣ್ಣು ಉತ್ತಮ ಆಯ್ಕೆಯಾಗಿರುತ್ತದೆ.

ಒಂದು ಸೇಬು ತಿಂದರೆ ವೈದ್ಯರನ್ನು ದೂರ ಇಡಬಹುದು ಎನ್ನುವ ವಾಕ್ಯ ಬಹಳ ಜನಜನಿತ. ಆದರೆ ದೆಹಲಿಯ ವಸಂತ್ ಕುಂಜ್‌ನಲ್ಲಿರುವ ಫೋರ್ಟಿಸ್ ಆಸ್ಪತ್ರೆಯ ಜಠರಕರುಳಿನ ತಜ್ಞ ಮತ್ತು ಯಕೃತ್ತು ತಜ್ಞರಾದ ಡಾ ಶುಭಂ ವತ್ಸ್ಯ ಅವರ ಪ್ರಕಾರ ಸೇಬಿನ ಬದಲು ಬಾಳೆಹಣ್ಣು ತಿನ್ನುವುದರಿಂದ ವೈದ್ಯರನ್ನು ದೂರ ಇಡಬಹುದು.

ಬಾಳೆಗಿಡದ ಹಣ್ಣು ಬಾಳೆ. ವಾಸ್ತವದಲ್ಲಿ ಒಂದು ದೈತ್ಯ ಗಿಡಮೂಲಿಕೆ. ಉಷ್ಣವಲಯದ ಹವಾಮಾನದಲ್ಲಿ ನೈಸರ್ಗಿಕವಾಗಿ ಕಂಡುಬರುತ್ತದೆ ಮತ್ತು ಸೇವಿಸುವುದು ಸರಳ. ಮಾಗಿದ ಬಾಳೆಹಣ್ಣುಗಳು ದಪ್ಪನಾದ ಮತ್ತು ಸರಳವಾಗಿ ಸುಲಿಯಬಹುದಾದ ಸಿಪ್ಪೆಯನ್ನು ಹೊಂದಿರುತ್ತವೆ. ಹೀಗಾಗಿ ಹೆಚ್ಚು ಶ್ರಮವಿಲ್ಲದೆ ಸಿಪ್ಪೆ ಸುಲಿದು ತಿನ್ನಬಹುದಾಗಿದೆ.

118 ಗ್ರಾಮ್‌ಗಳಷ್ಟು ತೂಕವಿರುತ್ತವೆ ಮತ್ತು ಈ ಕೆಳಗಿನ ಪೋಷಕಾಂಶಗಳನ್ನು ಹೊಂದಿರುತ್ತವೆ:

105 ಕ್ಯಾಲೋರಿಗಳು

88.4 ಗ್ರಾಂ ನೀರು

1.29 ಗ್ರಾಂ ಪ್ರೋಟೀನ್

26.9 ಗ್ರಾಂ ಕಾರ್ಬೋಹೈಡ್ರೇಟ್‌ಗಳು

14.4 ಗ್ರಾಂ ಸಕ್ಕರೆ

3.07 ಗ್ರಾಂ ಫೈಬರ್

0.39 ಗ್ರಾಂ ಕೊಬ್ಬು

ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ, ವಿಟಮಿನ್ ಬಿ6 ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ.

ಡಾ ಶುಭಂ ವತ್ಸ್ಯ ಅವರ ಪ್ರಕಾರ ನಿತ್ಯವೂ ಸೇವಿಸಿದರೆ ಬಾಳೆಹಣ್ಣು ಜಠರದ ಆರೋಗ್ಯಕ್ಕೆ ಮತ್ತು ಒಟ್ಟು ದೇಹದ ಆರೋಗ್ಯಕ್ಕೆ ಉತ್ತಮ.

ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಡಾ ಶುಭಂ ವತ್ಸ್ಯ ಪ್ರಕಾರ, “ಬಾಳೆಹಣ್ಣು ಸರಳವಾಗಿ ತಿನ್ನುವ ಮತ್ತು ಜಠರಸ್ನೇಹಿ ಸ್ನ್ಯಾಕ್.” ಅವರು ಹೇಳುವ ಪ್ರಕಾರ, “ಹಣ್ಣಿನಲ್ಲಿ ರೆಸಿಸ್ಟಂಟ್ ಪಿಷ್ಠ ಮತ್ತು ಪ್ರಿಬಯಾಟಿಕ್ ಫೈಬರ್‌ಗಳಿವೆ. ಇವು ಆರೋಗ್ಯಕರ ಜಠರದ ಬ್ಯಾಕ್ಟೀರಿಯಕ್ಕೆ ಆಹಾರ ಒದಗಿಸಲು ನೆರವಾಗುತ್ತವೆ. ಇದು ಆರೋಗ್ಯಕರ ಕರುಳಿನ ಬ್ಯಾಕ್ಟೀರಿಯವನ್ನು ಪೋಷಿಸಲು ಸಹಾಯ ಮಾಡುತ್ತದೆ.”

ಈ ಬ್ಯಾಕ್ಟೀರಿಯಗಳು ಬ್ಯುಟೈರೇಟ್‌ನಂತಹ ಶಾರ್ಟ್‌-ಚೈನ್ ಕೊಬ್ಬಿನಾಮ್ಲಗಳನ್ನು ರೂಪಿಸಲು ಫೈಬರ್‌ಗಳನ್ನು ಹುದುಗಿಸುತ್ತವೆ. ಅವು ಈ ಕೆಳಗಿನ ಲಾಭಗಳನ್ನು ಒದಗಿಸುತ್ತವೆ:

• ಕರುಳನ್ನು ರಿಪೇರಿ ಮಾಡುವುದು

• ಉರಿಯೂತ ಕಡಿಮೆ ಮಾಡುವುದು

• ದೀರ್ಘಕಾಲೀನ ಕರುಳಿನ ಆರೋಗ್ಯ ಸುಧಾರಿಸುವುದು

ಅಧ್ಯಯನಗಳು ಹೇಳಿರುವ ಪ್ರಕಾರ, ಹಸಿ ಬಾಳೆಕಾಯಿ ಬಲವಾದ ಅಲ್ಸರ್ ವಿರೋಧಿ ಗುಣಗಳನ್ನು ಹೊಂದಿವೆ. ಪರಿಣಾಮವಾಗಿ ಬಾಳೆ ಕಾಯಿ ಹೊಟ್ಟೆಯ ಒಳಪದರಕ್ಕೆ ಉತ್ತಮ ನೈಸರ್ಗಿಕ ರಕ್ಷಣೆ ಒದಗಿಸಬಹುದು ಎಂದು ಡಾ ಶುಭಂ ವತ್ಸ್ಯ ಅಭಿಪ್ರಾಯಪಟ್ಟಿದ್ದಾರೆ.

ರಕ್ತದೊತ್ತಡದ ನಿಯಂತ್ರಣ

ನಿತ್ಯವೂ ಬಾಳೆಹಣ್ಣಿನ ಸೇವನೆಯಿಂದ ಕರುಳಿನ ಆರೋಗ್ಯ ಸುಧಾರಿಸುವುದು ಮಾತ್ರವಲ್ಲ, ಬಾಳೆಹಣ್ಣು ಪೊಟ್ಯಾಶಿಯಂನಲ್ಲಿ ಸಮೃದ್ಧವಾಗಿರುವ ಕಾರಣ ರಕ್ತದೊತ್ತಡವನ್ನು ನಿಯಂತ್ರಿಸುವ ಅತ್ಯಗತ್ಯ ಖನಿಜವನ್ನು ಹೊಂದಿದೆ.

ಬಾಳೆಹಣ್ಣುಗಳು ಆಂಟಿ ಆಕ್ಸಿಡಂಟ್‌ನಲ್ಲಿ ಸಮೃದ್ಧವಾಗಿವೆ. ಅವು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆಗೊಳಿಸುತ್ತವೆ. ಹೀಗಾಗಿ ಆಹಾರದ ನಡುವೆ ಸೂಕ್ತ ತಿನಿಸನ್ನು ಆರಿಸಿಕೊಳ್ಳಬೇಕೆಂದರೆ ಹುರಿದ ಅಥವಾ ಕರಿದ ವಸ್ತುಗಳ ಬದಲಾಗಿ ಬಾಳೆಹಣ್ಣು ಉತ್ತಮ ಆಯ್ಕೆಯಾಗಿರುತ್ತದೆ.

ಕೃಪೆ: hindustantimes.com

---

ಮೇಲಿನ ಲೇಖನದಲ್ಲಿರುವ ವಿವರಗಳು ಸಾಮಾಜಿಕ ಮಾಧ್ಯಮಗಳಲ್ಲಿ ತಜ್ಞರು ಹೇಳಿರುವ ಸಲಹೆಗಳಾಗಿವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಸ್ವತಃ ವೈದ್ಯರನ್ನು ಸಂಪರ್ಕಿಸಿ ತೆಗೆದುಕೊಳ್ಳಬೇಕು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News