ನೀವು ಸಾಕಷ್ಟು ನಿದ್ರೆ ಮಾಡುತ್ತೀರಾ? REM ನಿದ್ರೆ ಏಕೆ ಅಗತ್ಯ?
ಸಾಂದರ್ಭಿಕ ಚಿತ್ರ | Photo Credit : freepik.com
ನಿದ್ರೆಯ REM ಹಂತದಲ್ಲಿ ಹೆಚ್ಚಿನ ಕನಸುಗಳು ಬೀಳುತ್ತವೆ. ಮೆದುಳಿನ ಚಟುವಟಿಕೆ ಹೆಚ್ಚಾಗುತ್ತದೆ ಮತ್ತು ದೇಹವು ತಾತ್ಕಾಲಿಕವಾಗಿ ಗಾಢ ನಿದ್ರಾವಸ್ಥೆಗೆ ತಲುಪುತ್ತದೆ.
ನಿದ್ರೆಯು ನಿಮ್ಮ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶ. ಸ್ಲೀಪ್ ಫೌಂಡೇಶನ್ ಹೇಳುವ ಪ್ರಕಾರ, 18 ವರ್ಷದಿಂದ ಮೇಲ್ಪಟ್ಟ ಜನರಿಗೆ ಕನಿಷ್ಠ 7 ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡಬೇಕಾಗುತ್ತದೆ. ನೀವು ನಿದ್ರೆ ಮಾಡುವಾಗ ನಿಮ್ಮ ದೇಹದ ಬಳಲಿಕೆ ಕಡಿಮೆಯಾಗುತ್ತದೆ. ಜೀವಕೋಶಗಳನ್ನು ಸರಿಪಡಿಸುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ ಮತ್ತು ಹಾರ್ಮೋನ್‌ಗಳನ್ನು ಸಮತೋಲನಗೊಳಿಸುತ್ತದೆ.
ಮೆದುಳು ನೆನಪುಗಳನ್ನು ಪ್ರಕ್ರಿಯೆಗೊಳಿಸುತ್ತದೆ ಮತ್ತು ನಿದ್ರಿಸಿದಾಗ ವಿಷಕಾರಿ ತ್ಯಾಜ್ಯವನ್ನು ತೆರವುಗೊಳಿಸುತ್ತದೆ. ಅಲ್ಲದೆ, ಹೃದಯ ಬಡಿತ ಮತ್ತು ರಕ್ತದೊತ್ತಡ ಕಡಿಮೆಯಾಗುತ್ತದೆ. ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಮತ್ತು ದೇಹಕ್ಕೆ ನವಚೈತನ್ಯ ಬರಲು ಅನುವು ಮಾಡಿಕೊಡುತ್ತದೆ. ನಿದ್ರೆಯಲ್ಲಿ ವಿಭಿನ್ನ ಹಂತಗಳಿವೆ ಮತ್ತು ಪ್ರತಿಯೊಂದು ಹಂತಗಳು ಪ್ರಮುಖ ಕಾರ್ಯಗಳನ್ನು ಹೊಂದಿವೆ.
ನಿದ್ರೆಯ ವಿಭಿನ್ನ ಹಂತಗಳನ್ನು ಅರ್ಥಮಾಡಿಕೊಳ್ಳುವುದು
ನಿದ್ರೆಯಲ್ಲಿ ನಾಲ್ಕು ಹಂತಗಳಿರುತ್ತವೆ. ಅದರಲ್ಲಿ ಮೊದಲ ಮೂರು ಹಂತಗಳು ಇರುತ್ತವೆ, ಮತ್ತೊಂದು ತ್ವರಿತ ಕಣ್ಣಿನ ಚಲನೆಯ (REM) ಸ್ಥಿತಿ.
ಹಂತ 1 (ಎನ್1): ಇದು ನಿದ್ರೆಯ ಬಹಳ ಹಗುರವಾದ ಹಂತ ಮತ್ತು ವ್ಯಕ್ತಿ ನಿದ್ರೆಗೆ ಜಾರುವ ಮೊದಲ ಹಂತ.
ಹಂತ 2 (ಎನ್ 2): ಈ ಹಂತದಲ್ಲಿ ದೇಹವು ನಿಧಾನವಾಗಿ ಆರಾಮವಾಗಲು ಪ್ರಾರಂಭವಾಗುತ್ತದೆ. ದೇಹದ ಉಷ್ಣತೆ ಕುಸಿಯುತ್ತದೆ, ಸ್ನಾಯುಗಳು ಆರಾಮಗೊಳ್ಳುತ್ತವೆ ಮತ್ತು ಹೃದಯ ಮತ್ತು ಉಸಿರಾಟ ನಿಧಾನಗೊಳ್ಳುತ್ತದೆ.
ಹಂತ 3 (ಎನ್3 ಅಥವಾ ಆಳವಾದ ನಿದ್ರೆ): ಇದು ಬಹಳ ಆಳವಾದ ನಿದ್ರೆಯ ಸಮಯ. ದೇಹ ಮತ್ತು ಮೆದುಳಿಗೆ ಹೆಚ್ಚು ಆರಾಮ ಕೊಡುವ ನಿದ್ರೆಯಾಗಿರುತ್ತದೆ.
ಹಂತ 4 (REM ನಿದ್ರೆ): ಈ ಹಂತದಲ್ಲಿ ಹೆಚ್ಚಿನ ಕನಸುಗಳು ಬೀಳುತ್ತವೆ. ಮೆದುಳಿನ ಚಟುವಟಿಕೆ ಹೆಚ್ಚಾಗುತ್ತದೆ ಮತ್ತು ದೇಹವು ತಾತ್ಕಾಲಿಕವಾಗಿ ಗಾಢ ನಿದ್ರಾವಸ್ಥೆಗೆ ತಲುಪುತ್ತದೆ.
REM ನಿದ್ರೆ ಎಂದರೇನು?
REM ನಿದ್ರೆ ಎಂದರೆ ತ್ವರಿತ ಕಣ್ಣಿನ ಚಲನೆಯಾಗಿರುತ್ತದೆ ಮತ್ತು ಆಗ ಮೆದುಳಿನ ಚಟುವಟಿಕೆ ಹೆಚ್ಚಾಗುತ್ತದೆ. ಎಚ್ಚರವಾಗಿದ್ದಾಗ ಇದ್ದಂತಹ ಸ್ಥಿತಿಯಲ್ಲಿಯೇ ಇರುತ್ತದೆ. ಹೀಗೆ ಮೆದುಳಿನ ಚಟುವಟಿಕೆ ಅತ್ಯಧಿಕವಾಗಿದ್ದಾಗ ದೇಹವು ತಾತ್ಕಾಲಿಕವಾಗಿ ಸ್ನಾಯುಗಳು ಬಲ ಕಳೆದುಕೊಂಡ ಸ್ಥಿತಿಗೆ ತಲುಪುತ್ತದೆ. ಈ ಸ್ಥಿತಿಯಲ್ಲಿ ಕಣ್ಣುಗಳು ಮತ್ತು ಸ್ನಾಯುಗಳು ಉಸಿರಾಟವನ್ನು ನಿಯಂತ್ರಿಸುತ್ತವೆ. ಸ್ಲೀಪ್ ಫೌಂಡೇಶನ್ ಪ್ರಕಾರ, “ಕಣ್ಣುಗಳು ಮುಚ್ಚಿದ್ದರೂ ತ್ವರಿತವಾಗಿ ಚಲಿಸುತ್ತವೆ. ಅದೇ ಕಾರಣಕ್ಕೆ ತ್ವರಿತ ಕಣ್ಣಿನ ಚಲನೆ ಎನ್ನುವ ಹೆಸರು ಬಂದಿದೆ. ಸ್ಮರಣೆ, ಕಲಿಕೆ ಮತ್ತು ಸೃಜನಶೀಲತೆಗೆ REM ಬಹಳ ಮುಖ್ಯವಾಗುತ್ತದೆ.
REM ನಿದ್ರೆ ಯಾವಾಗ ಬರುತ್ತದೆ?
ಬಹಳಷ್ಟು ಸಂದರ್ಭದಲ್ಲಿ ನೀವು 90 ನಿಮಿಷಗಳ ನಿದ್ರಾವಸ್ಥೆಗೆ ಜಾರಿದ ನಂತರ REM ನಿದ್ರೆಗೆ ಹೋಗುತ್ತೀರಿ. ನಿದ್ರೆ ಪ್ರಗತಿ ಹೊಂದುತ್ತಿದ್ದಂತೆ, REM ಹಂತಗಳು ದೀರ್ಘಗೊಳ್ಳುತ್ತವೆ. ಮೊದಲ REM ಹಂತ ಕೆಲ ನಿಮಿಷಗಳಷ್ಟೇ ಇರಬಹುದು. ಆದರೆ ನಂತರದ ಹಂತದಲ್ಲಿ ಗಂಟೆಯವರೆಗೂ ಸಾಗಬಹುದು. ಒಟ್ಟಿನಲ್ಲಿ ವಯಸ್ಕರಲ್ಲಿ REM ಯು ಒಟ್ಟು ನಿದ್ರೆಯ ಶೇ. 25ರಷ್ಟು ಪ್ರಮಾಣದಲ್ಲಿರುತ್ತದೆ.
REM ನಿದ್ರೆಯ ಲಾಭವೇನು?
* ಚಿಂತನೆ ಮತ್ತು ಅರಿವಿನ ಕಾರ್ಯವನ್ನು ಸುಧಾರಿಸುತ್ತದೆ.
* ಈ ಹಂತದಲ್ಲಿ ಕನಸು ಬೆಳೆಯುತ್ತದೆ.
* ಭಾವನೆಗಳನ್ನು ಕಡಿಮೆ ಮಾಡಿ ಮನೋಸ್ಥಿತಿಯನ್ನು ಸ್ಥಿರಗೊಳಿಸುತ್ತದೆ.
* ನೆನಪಿನ ಶಕ್ತಿಯನ್ನು ಬಲಪಡಿಸುತ್ತದೆ. ಅನಗತ್ಯ ನೆನಪುಗಳನ್ನು ಮರೆಸುತ್ತದೆ.
* ಮರುದಿನಕ್ಕೆ ದೇಹ ಮತ್ತು ಮೆದುಳಿನ ಚಟುವಟಿಕೆಗೆ ಸಿದ್ಧಪಡಿಸುತ್ತದೆ.
REM ನಿದ್ರೆ ಏರಿಸುವುದು ಹೇಗೆ?
1. ಪ್ರತಿದಿನ ಒಂದೇ ಸಮಯಕ್ಕೆ ನಿದ್ರೆ ಮಾಡಿ ಎಚ್ಚರವಾಗಿ. ಇದರಿಂದ ದೇಹದ ಗಡಿಯಾರ REM ಸೈಕಲ್ ಜೊತೆಗೆ ಹೊಂದಿಕೊಳ್ಳುತ್ತದೆ.
2. ನಿದ್ರೆಗೆ 30-60 ನಿಮಿಷ ಮೊದಲು ಓದುವುದು ಅಥವಾ ಯೋಗದಂತಹ ಚಟುವಟಿಕೆಯನ್ನು ಮಾಡಿ.
3. ಮೊಬೈಲ್ ಅಥವಾ ಟಿವಿಯ ನೀಲಿ ಬೆಳಕು ನಿದ್ರೆಗೆ ಜಾರುವ ಮೊದಲು ದೇಹಕ್ಕೆ ಅಡ್ಡಿಪಡಿಸಬಾರದು.
4. ನಿದ್ರೆಯ ಪರಿಸರ ತಂಪಾಗಿ ಮತ್ತು ಕತ್ತಲೆ ಮತ್ತು ಮೌನ ತುಂಬಿರಲಿ.
5. ನಿದ್ರೆಗೆ ಜಾರುವ ಮೊದಲು ಮೆಲಟೊನಿನ್ ಮತ್ತು ಮೆಗ್ನೇಶಿಯಂ ಸಮೃದ್ಧವಾಗಿರುವ ಚೆರ್ರಿಗಳು, ಬಾಳೆಹಣ್ಣು ಅಥವಾ ಬಾದಾಮಿ ಸೇವಿಸುವುದು ನೆರವಾಗುತ್ತದೆ.