×
Ad

ಚಹಾದಿಂದ ಸಕ್ಕರೆ ಕಡಿಮೆ ಮಾಡುವ ಪರಿಣಾಮಕಾರಿ ವಿಧಾನ ಯಾವುದು?

Update: 2026-03-04 19:00 IST

AI generated image

ಚಹಾದಲ್ಲಿ ಸಕ್ಕರೆ ಅಭ್ಯಾಸವನ್ನು ತೊರೆಯಲು ಕ್ರಮೇಣವಾಗಿ ಸಕ್ಕರೆ ಪ್ರಮಾಣ ಕಡಿಮೆ ಮಾಡುವುದು, ಮಸಾಲೆಗಳನ್ನು ಬೆರೆಸಿ ರುಚಿ ಮಾರ್ಪಡಿಸುವುದು ಮತ್ತು ಜಾಗರೂಕತೆಯಿಂದ ಸೇವಿಸುವುದು ಅಗತ್ಯ.

ಆರೋಗ್ಯವು ದೈನಂದಿನ ಆಯ್ಕೆಯಾಗಿದೆ ಮತ್ತು ಸರಳ ಬದಲಾವಣೆಗಳು ಭಾರೀ ಪರಿಣಾಮ ಬೀರುತ್ತವೆ. ಚಹಾವನ್ನು ಸಕ್ಕರೆಯ ಜೊತೆಗೆ ಸೇವಿಸುವ ಅಭ್ಯಾಸವಿದ್ದರೆ ನಿಮ್ಮ ಕರುಳು ಮತ್ತು ಚರ್ಮದ ಆರೋಗ್ಯದ ಮೇಲೆ ಸಕ್ಕರೆಯ ಹಾನಿಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಇತ್ತೀಚೆಗೆ ತಜ್ಞರು ಸಕ್ಕರೆಯಿಂದಾಗುವ ಸಮಸ್ಯೆಗಳ ಬಗ್ಗೆ ಜನರನ್ನು ಎಚ್ಚರಿಸುತ್ತಲೇ ಇದ್ದಾರೆ. ಮನೋಸ್ಥಿತಿಯ ಮೇಲೆ ಪರಿಣಾಮ ಕಡಿಮೆಯಾಗಲು, ಉತ್ತಮ ನಿದ್ರೆಗೆ ಮತ್ತು ಉತ್ತಮ ಜೀರ್ಣಕ್ರಿಯೆಗೆ ಸಕ್ಕರೆಯನ್ನು ತೊರೆಯಬೇಕು ಎಂದು ವೈದ್ಯರು ಸಲಹೆ ನೀಡುತ್ತಲೇ ಬಂದಿದ್ದಾರೆ. ನಿಮ್ಮ ಬೆಳಗಿನ ಚಹಾಗೆ ಹೋಗುವ ಸಣ್ಣ ಪ್ರಮಾಣದ ಸಕ್ಕರೆಯಿಂದ ಏನು ಪರಿಣಾಮವಾಗಲಿದೆ?

ಸೆಲೆಬ್ರಿಟಿ ಮೈಕ್ರೋಬಯೋಟಿಕ್ ತರಬೇತುದಾರರಾದ ಡಾ ಶಿಲ್ಪಾ ಅರೋರ ಸಕ್ಕರೆ ಸೇವನೆಯನ್ನು ತ್ವರಿತವಾಗಿ ಕಡಿಮೆಗೊಳಿಸಲು ಸಾಮಾಜಿಕ ಜಾಲತಾಣದಲ್ಲಿ ಸಲಹೆ ನೀಡಿದ್ದಾರೆ. ಅವರ ಪ್ರಕಾರ ಸಕ್ಕರೆಯನ್ನು ಬಿಡಲು ಬಯಸುವವರು ಚಹಾ ಅಥವಾ ಕಾಫಿಗೆ ಒಂದು ಸಣ್ಣ ತುಂಡು ಚಾಕಲೇಟು ಹಾಕಿಕೊಳ್ಳಬೇಕು! ಈ ಬಗ್ಗೆ ವೈದ್ಯರು ಏನು ಹೇಳುತ್ತಾರೆ?

ಚಾಕಲೇಟು ಬೆರೆಸುವುದು ಅಲ್ಪಾವಧಿ ವಿಧಾನ

ಚೆನ್ನೈನ ಶ್ರೀ ಬಾಲಾಜಿ ಮೆಡಿಕಲ್ ಸೆಂಟರ್ನಲ್ಲಿ ನೋಂದಾಯಿತ ಆಹಾರತಜ್ಞೆಯಾಗಿರುವ ದೀಪಲಕ್ಷ್ಮಿ ಪ್ರಕಾರ, ಚಹಾಗೆ ಸಕ್ಕರೆಯ ಬದಲಾಗಿ ಚಾಕಲೇಟು ಬಳಸುವುದರಿಂದ ಸಕ್ಕರೆ ಸೇವನೆ ಪ್ರಮಾಣ ಕಡಿಮೆಯಾಗಲಿದೆ. ಆದರೆ, ಇದು ಪರಿಣಾಮಕಾರಿಯಾಗಿ ಅಥವಾ ಸುಸ್ಥಿರ ರೀತಿಯಲ್ಲಿ ಸಕ್ಕರೆಯನ್ನು ತೊರೆಯುವ ಹಾದಿಯಲ್ಲ. ಅಲ್ಪಾವಧಿಗೆ ಕೆಲವರಿಗೆ ಇದರಿಂದ ನೆರವಾಗಬಹುದು. ಇದನ್ನು ದೀರ್ಘಕಾಲೀನ ಪರಿಹಾರ ಎನ್ನುವುದಕ್ಕಿಂತ ತಾತ್ಕಾಲಿಕ ಪರಿಹಾರ ಎನ್ನಬಹುದು.

“ಬಹಳಷ್ಟು ಮಂದಿಗೆ ಚಹಾದಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಮಾಡಿದರೂ ಸಿಹಿ ಬೇಕೆನಿದಿಸಿದಾಗ ಸಣ್ಣ ಡಾರ್ಕ್ ಚಾಕಲೇಟಿನ ತುಂಡನ್ನು ಇಡುವುದು ನೆರವಾಗಬಹುದು. ಡಾರ್ಕ್ ಚಾಕಲೇಟಿನಲ್ಲಿರುವ ಸಣ್ಣ ಪ್ರಮಾಣದ ಕಹಿಯು ಚಹಾದ ಜೊತೆಗೆ ಬೆರೆತಾಗ ಸಿಹಿಯ ಅವಶ್ಯಕತೆ ಪೂರೈಸಬಹುದು. ಪಾನೀಯಕ್ಕೆ ನೇರವಾಗಿ ಸಕ್ಕರೆ ಹಾಕುವ ಅಗತ್ಯವನ್ನು ನಿವಾರಿಸಬಹುದು. ಆರಂಭದಲ್ಲಿ ಸಿಹಿ ಇಲ್ಲದೆ ಇರುವ ಚಹಾ ಸೇವನೆ ಇಷ್ಟವಾಗದವರಿಗೆ ಇದು ಸೂಕ್ತವೆನಿಸುತ್ತದೆ. ನಿಧಾನವಾಗಿ ಸಿಹಿ ಕಡಿಮೆ ಮಾಡಲು ಬಯಸುವವರಿಗೆ ಕೂಡ ಇದು ಸೂಕ್ತ” ಎಂದು ಅವರು ಹೇಳಿದ್ದಾರೆ.

“ಆದರೆ ಚಾಕಲೇಟಿನಲ್ಲೂ ಸಕ್ಕರೆ ಇರುತ್ತದೆ. ಮುಖ್ಯವಾಗಿ ಹಾಲು ಅಥವಾ ಬೆರೆಸಿದ ರುಚಿ ಇರುತ್ತದೆ. ಡಾರ್ಕ್ ಚಾಕಲೇಟ್ನಲ್ಲೂ ಸಕ್ಕರೆ ಬೆರೆಸಿರಲಾಗುತ್ತದೆ. ನಿತ್ಯವೂ ಸಕ್ಕರೆ ಬದಲಾಗಿ ಡಾರ್ಕ್ ಚಾಕಲೇಟು ಬಳಸುವುದರಿಂದ ಸಕ್ಕರೆ ಪ್ರಮಾಣ ಕಡಿಮೆಯಾಗುವುದಿಲ್ಲ ಬದಲಾಗಿ ಸಕ್ಕರೆಯ ಮೂಲ ಮಾತ್ರ ಕಡಿಮೆಯಾಗುತ್ತದೆ. ಕಾಲಾನುಸಾರ ಕಡಿಮೆ ಸಿಹಿಯನ್ನು ಸೇವಿಸುವುದು ಆಗುತ್ತದೆಯೇ ವಿನಾ ಸಕ್ಕರೆಯನ್ನು ತೊರೆಯಲು ನೆರವಾಗದು” ಎಂದು ದೀಪಲಕ್ಷ್ಮಿ ಹೇಳಿದ್ದಾರೆ.

ಸಕ್ಕರೆ ತೊರೆಯಲು ಅತ್ಯುತ್ತಮ ಹಾದಿ ಯಾವುದು?

ಪೌಷ್ಠಿಕಾಂಶದ ದೃಷ್ಟಿಕೋನದಲ್ಲಿ ಗಮನಿಸಿದರೆ, ಸಕ್ಕರೆಯನ್ನು ನಿಧಾನವಾಗಿ ಕಡಿಮೆ ಮಾಡುತ್ತಾ ಬರುವುದು ಸುಸ್ಥಿರ ರೀತಿಯಲ್ಲಿ ಸಕ್ಕರೆ ತೊರೆಯುವ ವಿಧಾನವಾಗಲಿದೆ. “ಉದಾಹರಣೆಗೆ ಎರಡು ಚಮಚ ಸಕ್ಕರೆಯಿಂದ ಒಂದು ಚಮಚಕ್ಕೆ ಮತ್ತು ನಂತರ ಅರ್ಧ ಚಮಚ ಮತ್ತು ಕ್ರಮೇಣ ಸಕ್ಕರೆಯನ್ನೇ ಸೇವಿಸದೆ ಇರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ನಿಧಾನವಾಗಿ ಕಡಿಮೆ ಮಾಡುತ್ತಾ ಸಾಗುವುದು ಸಹಜವಾಗಿ ಸಕ್ಕರೆ ತೊರೆಯುವುದಕ್ಕೆ ದೇಹ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ. ಚಹಾಗೆ ಶುಂಠಿ, ದಾಲ್ಚಿನ್ನಿ ಅಥವಾ ಏಲಕ್ಕಿ ಬೆರೆಸುವುದರಿಂದ ಸಕ್ಕರೆ ಬದಲಿಗೆ ಬೇಕಾದ ರುಚಿಯನ್ನು ಸಾಧಿಸಬಹುದು.”

ಅಂತಿಮವಾಗಿ ಹೇಳುವುದಾದರೆ ಸಣ್ಣ ತುಂಡು ಡಾರ್ಕ್ ಚಾಕಲೇಟ್ ಅನ್ನು ಚಹಾಗೆ ಬೆರೆಸುವುದು ಅಲ್ಪಾವಧಿ ವಿಧಾನವಾಗಿದೆ. ದೀರ್ಘಾವಧಿಯಲ್ಲಿ ಆರೋಗ್ಯಕರವಾಗಿರಲು ಸಂಪೂರ್ಣ ಸಕ್ಕರೆ ತೊರೆಯಬೇಕಾಗುತ್ತದೆ.

ಕೃಪೆ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News