×
Ad

ಪೇರಳೆ ಹಣ್ಣನ್ನು ಸಿಪ್ಪೆ ಸಮೇತ ತಿನ್ನಬೇಕೆ ಅಥವಾ ಸಿಪ್ಪೆ ತೆಗೆಯಬೇಕೆ?

Update: 2026-01-09 18:15 IST

photo credit: gemini ai

ಪೇರಳೆ ಅಥವಾ ಸೀಬೆ ಕಾಯಿ ಎಂದು ಕರೆಯಲ್ಪಡುವ ಹಣ್ಣು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿದೆ. ನಮ್ಮ ಹಿತ್ತಲ ತೋಟದಲ್ಲಿ ಸಾಮಾನ್ಯವಾಗಿರುವ ಈ ಹಣ್ಣು ಸಮೃದ್ಧ ಆರೋಗ್ಯ ಗುಣಗಳನ್ನು ಹೊಂದಿದೆ ಎನ್ನುವುದು ನಿಮಗೆ ಗೊತ್ತೆ? ಸೀಬೆಕಾಯಿಯನ್ನು ಹಣ್ಣಿನ ರಸ, ಸ್ಮೂದಿ, ಜ್ಯಾಮ್ಗಳ ರೂಪದಲ್ಲಿ ಅಥವಾ ಕೇವಲ ಹಸಿ ಹಣ್ಣನ್ನೂ ಸೇವಿಸುವುದಿದೆ.

ಡಾ ಅಶ್ವಿನಿ ವಿಜಯ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿರುವ ಪ್ರಕಾರ “ಸೀಬೆ ಕಾಯಿ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ವಿಟಮಿನ್ ಸಿ ಇರುವ ಅತಿ ದೊಡ್ಡ ಮೂಲ. ಆಂಟಿ ಆಕ್ಸಿಡಂಟ್ ಮೂಲತತ್ವಗಳನ್ನು ಒಳಗೊಂಡಿದೆ. ಇದು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡುತ್ತದೆ ಮತ್ತು ಕೆಲವು ಅಧ್ಯಯನಗಳು ಕಂಡುಕೊಂಡಿರುವ ಪ್ರಕಾರ ಕ್ಯಾನ್ಸರ್ಕಾರಕವನ್ನು ಕಡಿತಗೊಳಿಸುತ್ತದೆ. ಪೂರ್ಣ ಗುಣಪಡಿಸುವುದಿಲ್ಲ. ಆದರೆ ಕ್ಯಾನ್ಸರ್ಗೆ ಸಂಬಂಧಿಸಿದಂತೆ ರಕ್ಷಣಾತ್ಮಕ ಗುಣಗಳು ಇದರಲ್ಲಿವೆ. ಏಕೆಂದರೆ ಇದರಲ್ಲಿರುವ ಲೈಕೋಪೀನ್ ಎನ್ನುವ ಕ್ಯಾರಟಿನಾಯ್ಡ್ ಸಂಯುಕ್ತವು ಕ್ಯಾನ್ಸರ್ ಹರಡುವುದನ್ನು ತಡೆಯುತ್ತದೆ. ಮೂರನೆಯದಾಗಿ ಇದರಲ್ಲಿ ಫೈಬರ್ ಸಮೃದ್ಧವಾಗಿದೆ. ನಿಮಗೆ ಜಿಐ (ಗ್ಲೈಸೆಮಿಕ್ ಇಂಡೆಕ್ಸ್) ಸಮಸ್ಯೆ, ಹೊಟ್ಟೆ ಸಮಸ್ಯೆ ಇದ್ದರೆ ಶಮನ ಮಾಡುತ್ತದೆ.”

Full View

ಆದರೆ ಜನರಲ್ಲಿರುವ ಮುಖ್ಯ ಪ್ರಶ್ನೆಯೆಂದರೆ ಪೇರಳೆ ಹಣ್ಣನ್ನು ಸಿಪ್ಪೆ ಸಮೇತ ತಿನ್ನಬೇಕೆ ಅಥವಾ ಬೇಡವೇ ಎನ್ನುವುದು. ಇತ್ತೀಚೆಗೆ ಪೌಷ್ಠಿಕ ತಜ್ಞೆ ಮತ್ತು ಕರುಳು ಆರೋಗ್ಯದಲ್ಲಿ ವಿಶೇಷಜ್ಞೆ, ರಾಷ್ಟ್ರೀಯ ಮಧುಮೇಹ ತಜ್ಞರಾಗಿರುವ ದೀಪ್ಸಿಖಾ ಜೈನ್ ತಮ್ಮ ಇನ್ಸ್ಟಾಗ್ರಾಂ ಪುಟದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.

ಅವರು ಹೇಳುವ ಪ್ರಕಾರ, “ಸಾಮನ್ಯವಾಗಿ ಪೇರಳೆ ಹಣ್ಣನ್ನು ಬಹಳ ಆರೋಗ್ಯಕರ ಎಂದೇ ಪರಿಗಣಿಸಲಾಗಿದೆ. ಆದರೆ ಸೀಬೆಕಾಯಿಯನ್ನು ಸಿಪ್ಪೆ ಸಮೇತ ತಿಂದರೆ ನಿಮಗೆ ಪೊಟ್ಯಾಶಿಯಂ, ಜಿಂಕ್ ಮತ್ತು ವಿಟಮಿನ್ ಸಿ ಸಿಗುತ್ತವೆ. ಇವು ನಿಮ್ಮ ಚರ್ಮದ ರಚನೆಯನ್ನು ರಕ್ಷಿಸಲು ನೆರವಾಗಬಹುದು. ಆದರೆ ನಿಮಗೆ ಕೊಲೆಸ್ಟರಾಲ್ ಅಥವಾ ಮಧುಮೇಹದ ಸಮಸ್ಯೆ ಇದ್ದರೆ ದಯವಿಟ್ಟು ಸಿಪ್ಪೆ ತೆಗೆದು ಸೇವಿಸಿ. ಅಧ್ಯಯನಗಳು ತೋರಿಸಿರುವಂತೆ ಪೇರಳೆ ಹಣ್ಣನ್ನು ಸಿಪ್ಪೆ ಸಮೇತ ತಿಂದಾಗ ಚರ್ಮ ಇನ್ನಷ್ಟು ಹದಗೆಟ್ಟಿದೆ ಮತ್ತು ಕೊಲೆಸ್ಟರಾಲ್ ಮತ್ತು ಮಧುಮೇಹದ ಅಪಾಯ ಹೆಚ್ಚಾಗಿದೆ. ಹೀಗಾಗಿ ನಿಮಗೆ ಲಿಪಿಡ್ ಪ್ರೊಫೈಲ್ (ಕೊಬ್ಬಿನಂಶ ಹೆಚ್ಚಿರುವುದು) ಇದ್ದರೆ ಮತ್ತು ರಕ್ತದಲ್ಲಿನ ಸಕ್ಕರೆ ಅಂಶ ಅಧಿಕ ಇದ್ದರೆ ಗುವಾವನ್ನು ಸಿಪ್ಪೆ ತೆಗೆದು ಸೇವಿಸಬೇಕು.”

Full View

ಸೀಬೆಕಾಯಿಯನ್ನು ಸೂಪರ್ ಫ್ರುಟ್ ಎನ್ನುವುದೇಕೆ?

ನಿರೋಧಕ ಶಕ್ತಿ ಏರಿಸುವ ವಿಟಮಿನ್ ಸಿ ಸೀಬೆ ಹಣ್ಣಿನಲ್ಲಿ ಸಮೃದ್ಧವಾಗಿದೆ. ಕಿತ್ತಳೆಗಳನ್ನೂ ಮೀರಿದ ವಿಟಮಿನ್ ಸಿ ಸೀಬೇಕಾಯಿಯಲ್ಲಿದೆ. ಈ ಶಕ್ತಿಯುತ ಆಂಟಿಆಕ್ಸಿಡಂಟ್ ನಿಮ್ಮ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಸೋಂಕುಗಳ ವಿರುದ್ಧ ಹೋರಾಡುತ್ತದೆ ಮತ್ತು ಶೀತ ಮೊದಲಾದ ಸಮಸ್ಯೆಗಳನ್ನು ಹೊರಗಿಡುತ್ತದೆ. ಒಂದು ಗುವಾದಲ್ಲಿ ನಿಮ್ಮ ನಿತ್ಯದ ವಿಟಮಿನ್ ಸಿಯ ಅಗತ್ಯಕ್ಕಿಂತ ಹೆಚ್ಚನ್ನು ನೀಡಲಿದೆ.

ಮಲಬದ್ಧತೆಯಿಂದ ರಕ್ಷಣೆ ಪಡೆಯಲು ಅತ್ಯುತ್ತಮ ಜೀರ್ಣಕ್ರಿಯೆಗೆ ಫೈಬರ್ ಅಂಶಗಳಿವೆ. ಈ ಫೈಬರ್ ಅಂಶಗಳು ರಕ್ತದಲ್ಲಿನ ಸಕ್ಕರೆ ಅಂಶಗಳನ್ನು ನಿಯಂತ್ರಿಸಲು ನೆರವಾಗುತ್ತವೆ. ಹೀಗಾಗಿ ಮಧುಮೇಹಿಗಳಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಮುಖ್ಯವಾಗಿ ಸಿಪ್ಪೆ ತೆಗೆದು ಸೇವಿಸಬೇಕು.

ಆಂಟಿ ಆಕ್ಸಿಡಂಟ್ಗಳು ಚರ್ಮದ ಆರೋಗ್ಯವನ್ನು ಚೆನ್ನಾಗಿಡುತ್ತವೆ. ಸ್ವತಂತ್ರ ಕಣಗಳ ವಿರುದ್ಧ ಹೋರಾಡಿ ಮುಪ್ಪನ್ನು ನಿಧಾನಗೊಳಿಸುತ್ತದೆ. ನಿಯಮಿತವಾಗಿ ಸೇವಿಸಿದರೆ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡಲಿದೆ.

ಹೃದಯದ ಆರೋಗ್ಯಕ್ಕೂ ನೆರವಾಗಲಿದೆ. ಆರೋಗ್ಯಕರವಾದ ಹೃದಯದ ರಕ್ತದೊತ್ತಡವನ್ನು ನಿಭಾಯಿಸಲು ಮತ್ತು ಹೃದಯದ ಕಾರ್ಯವನ್ನು ಸುಧಾರಿಸಲು ನೆರವಾಗಲಿದೆ. ಕ್ಲಿನಿಕಲ್ ನ್ಯೂಟ್ರಿಶನ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನವೊಂದರ ಪ್ರಕಾರ ನಿಯಮಿತವಾಗಿ ಸೀಬೇಕಾಯಿ ಸೇವನೆಯಿಂದ ರಕ್ತದೊಡ್ಡ ಕಡಿಮೆಯಾಗಿದೆ ಮತ್ತು ಲಿಪಿಡ್ ಪ್ರೊಫೈಲ್ ಅನ್ನು ಸುಧಾರಿಸಿದೆ. ಹೀಗಾಗಿ ಹೃದಯರಕ್ತನಾಳಗಳ ಆರೋಗ್ಯಕ್ಕೆ ಇದು ಅತ್ಯುತ್ತಮ ಆಯ್ಕೆಯಾಗಿದೆ.

ಕೃಪೆ: ndtv.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News