×
Ad

ವಿಮಾನ ನಿಲ್ದಾಣ ವ್ಯವಹಾರದಲ್ಲಿ ರೂ. 96 ಸಾವಿರ ಕೋಟಿ ಹೂಡಿಕೆ ಮಾಡಲಿರುವ ಅದಾನಿ ಸಮೂಹ

Update: 2025-07-21 07:59 IST

ಅಹ್ಮದಾಬಾದ್: ಮುಂಬೈ ಸಿಎಸ್ಎಂಐಎ, ಮುಂದಿನ ಅಕ್ಟೋಬರ್ ನಲ್ಲಿ ಸೇರ್ಪಡೆಯಾಗಲಿರುವ ನವ ಮುಂಬೈ ಸೇರಿದಂತೆ ದೇಶಾದ್ಯಂತ ಹಲವು ವಿಮಾನ ನಿಲ್ದಾಣಗಳನ್ನು ನಿರ್ವಹಿಸುತ್ತಿರುವ ಅದಾನಿ ಸಮೂಹ ಮುಂದಿನ ಐದು ವರ್ಷಗಳಲ್ಲಿ ವಿಮಾನ ನಿಲ್ದಾಣ ವ್ಯವಹಾರಗಳಲ್ಲಿ ಸುಮಾರು ಒಂದು ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲು ನಿರ್ಧರಿಸಿದೆ. ಇದಲ್ಲಿ ಮೂಲಸೌಕರ್ಯ ಮತ್ತು ರಿಯಲ್ ಎಸ್ಟೇಟ್ ಅಭಿವೃದ್ಧಿ ಸೇರಿದೆ.

ಈ ಬಗ್ಗೆ ಅದಾನಿ ಸಮೂಹದ ವಿಮಾನ ನಿಲ್ದಾಣಗಳ ವ್ಯವಹಾರದ ಮುಖ್ಯಸ್ಥ, ಗೌತಮ್ ಅದಾನಿಯವರ ಮಗ ಜೀತ್ ಅದಾನಿ (27) ಭಾರತದಲ್ಲಿ ಈ ಕ್ಷೇತ್ರದಲ್ಲಿ ವ್ಯಾಪಕ ಅವಕಾಶಗಳಿದ್ದು, ವಿದೇಶಗಳಲ್ಲಿ ವಿಸ್ತರಣೆಯ ಯಾವುದೇ ಯೋಜನೆ ಸದ್ಯಕ್ಕಿಲ್ಲ ಎಂದು ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.

ಮುಂದಿನ ಐದು ವರ್ಷ ಜಾರಿಯಾಗಲಿರುವ ಯೋಜನೆಗಳಲ್ಲಿ ವಿಮಾನ ನಿಲ್ದಾಣ ಪರಿಸರದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮತ್ತು ರಿಯಲ್ ಎಸ್ಟೇಟ್ ಅಭಿವೃದ್ಧಿಯಲ್ಲಿ 95 ಸಾವಿರದಿಂದ 96 ಸಾವಿರ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲು ಉದ್ದೇಶಿಸಲಾಗಿದೆ. ಈ ಪೈಕಿ ನವ ಮುಂಬೈ ವಿಮಾನ ನಿಲ್ದಾಣ, ಮುಂಬೈ ವಿಮಾನ ನಿಲ್ದಾಣ ಹಾಗೂ ಈ ಎರಡು ಕಡೆಗಳಲ್ಲಿ ರಿಯಲ್ ಎಸ್ಟೇಟ್ ಅಭಿವೃದ್ಧಿಗೆ ದೊಡ್ಡ ಪಾಲು ವಿನಿಯೋಗವಾಗಲಿದೆ ಎಂದು ಸ್ಪಷ್ಟಪಡಿಸಿದರು.

ಮುಂದಿನ ನಾಲ್ಕು ವರ್ಷಗಳಲ್ಲಿ ಅಹ್ಮದಾಬಾದ್, ಜೈಪುರ ಮತ್ತು ತಿರುವನಂತಪುರಗಳಲ್ಲಿ ಹೊಸ ಟರ್ಮಿನಲ್ ಗಳ ನಿರ್ಮಾಣ ಯೋಜನೆಗಳು ಪ್ರಮುಖವಾಗಿವೆ. ಲಕ್ನೋದಲ್ಲಿ ಹೊಸದಾಗಿ ನಿರ್ಮಿಸಿದ ಟರ್ಮಿನಲ್ ವಿಸ್ತರಿಸಲಾಗುತ್ತಿದೆ. ಗುವಾಹತಿಯಲ್ಲಿ ನಿರ್ಮಾಣವಾಗಿರುವ ಹೊಸ ಟರ್ಮಿನಲ್ ಈ ವರ್ಷದ ಅಕ್ಟೋಬರ್-ನವೆಂಬರ್ ವೇಳೆಗೆ ಕಾರ್ಯಾಚರಣೆ ಆರಂಭಿಸಲಿವೆ ಎಂದು ವಿವರಿಸಿದರು.

ದೇಶದ ಹೊರಗೆ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆ ಬಗ್ಗೆ ಕೇಳಿದಾಗ, ತಕ್ಷಣಕ್ಕೆ ಯಾವುದೇ ಯೋಚನೆ ಇಲ್ಲ; ಏಕೆಂದರೆ ಭಾರತದಲ್ಲೇ ವಿಪುಲ ಅವಕಾಶಗಳಿವೆ. ಆದ್ದರಿಂದ ಹೊರಗೆ ಗಮನ ಹರಿಸುವ ಇಚ್ಛೆ ಇಲ್ಲ ಎಂದು ಸ್ಪಷ್ಟಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News