ಹಾನಗಲ್ ಪ್ರಕರಣ ದುಡ್ಡು ಕೊಟ್ಟು ಮುಚ್ಚಿಹಾಕಲು ಯತ್ನ: ಬಸವರಾಜ ಬೊಮ್ಮಾಯಿ
Update: 2024-01-14 15:10 IST
Photo: facebook/Basavarajbommai
ಹುಬ್ಬಳ್ಳಿ: ಸಂತ್ರಸ್ಥರಿಗೆ ಹಣ ಕೊಟ್ಟು ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ನಡೆದ ನೈತಿಕ ಪೊಲಿಸ್ ಗಿರಿ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಾನಗಲ್ ಪ್ರಕರಣವನ್ನು ಅಲ್ಲಿನ ಪೊಲೀಸರು ಸಂತ್ರಸ್ತರಿಗೆ ದುಡ್ಡಿನ ಆಮಿಷವೊಡ್ಡಿ ಮುಚ್ಚಿ ಹಾಕಲು ಯತ್ನಿಸಿದ್ದರು. ಸಿಎಂ ಸಿದ್ದರಾಮಯ್ಯ ನಾಳೆ ಹಾವೇರಿಗೆ ಭೇಟಿ ನೀಡುತ್ತಿರದ್ದು, ಈ ಸಂದರ್ಭದಲ್ಲಿಯಾದರೂ ಎಸ್ಐಟಿ ತನಿಖೆಗೆ ಘೋಷಿಸುತ್ತಾರೆ ಅಂತ ನಿರೀಕ್ಷೆ ಮಾಡುತ್ತೇನೆ ಎಂದರು.
ತನಿಖೆ ನೆಪದಲ್ಲಿ ಸಂತ್ರಸ್ಥೆಯನ್ನು ಶಿರಸಿಗೆ ಕರೆದೊಯ್ಯಲಾಗುತ್ತಿದೆ. ಬಿಜೆಪಿ ಮಹಿಳಾ ನಿಯೋಗ ಅಲ್ಲಿಗೆ ಭೇಟಿ ಕೊಡುತ್ತಿದೆ ಅಂತ ಈ ರೀತಿ ಮಾಡುತ್ತಿದ್ದಾರೆ. ಈ ಎಲ್ಲಾ ರಾಜಕಾರಣವನ್ನು ಕಾಂಗ್ರೆಸ್ ನವರು ಮಾಡುತ್ತಾರೆ. ಅವರಿಂದ ನಾವೇನು ಜಾಸ್ತಿ ನಿರೀಕ್ಷೆ ಮಾಡಲು ಆಗುವುದಿಲ್ಲ ಎಂದರು.