×
Ad

ಬಾಜಿರಾವ್‌ ಮಸ್ತಾನಿಗೆ ಪಾಕ್‌ನಲ್ಲಿ ಸೆನ್ಸಾರ್‌ ಮಂಡಳಿ ರೆಡ್‌ ಸಿಗ್ನಲ್

Update: 2015-12-17 12:56 IST

ಬಾಲಿವುಡ್‌ ತಾರೆ ದಿಪೀಕಾ ಪಡುಕೊಣೆ ಮತ್ತು ರಣವೀರ್‌ ಸಿಂಗ್‌ ಅಭಿನಯದ ಚಿತ್ರ ಬಾಜಿರಾವ್ ಮಸ್ತಾನಿಗೆ ಪಾಕಿಸ್ತಾನದ ಸೆನ್ಸಾರ್‌ ಮಂಡಳಿ ನಿಷೇಧ ಹೇರಿದೆ.
ಇಸ್ಲಾಂ ವಿರೋಧಿ ಅಂಶಗಳು ಈ ಚಿತ್ರದಲ್ಲಿರುವ ಹಿನ್ನೆಲೆಯಲ್ಲಿ ಪಾಕ್‌ನ ಸೆನ್ಸಾರ‍್ ಮಂಡಳಿಯು ನಿಷೇಧ ವಿಧಿಸಿದೆ ಎಂದು ತಿಳಿದು ಬಂದಿದೆ.
ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸುತ್ತಿರುವ ಬಾಜಿರಾವ್ ಮಸ್ತಾನಿ ಚಿತ್ರ ಮರಾಠ ಪೇಶ್ವೆ ಬಾಜಿ ರಾವ್ ಜೀವನದ ಕಥೆಯಾಧಾರಿತವಾಗಿದ್ದು, ಇದರಲ್ಲಿ ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ ಅಭಿನಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News