×
Ad

ವಝೀರ್ ನಲ್ಲಿ ಫರ್ಹಾನ್ ಆ್ಯಕ್ಷನ್ ಧಮಾಕಾ

Update: 2015-12-20 16:20 IST

ಬಾಲಿವುಡ್‌ನ ಪ್ರತಿಭಾವಂತ ನಿರ್ದೇಶಕ, ನಟ ಎರಡೂ ಆಗಿರುವ ಫರ್ಹಾನ್ ಅಖ್ತರ್, ಈಗ ಪೊಲೀಸ್ ಯೂನಿಫಾರಂ ಧರಿಸುತ್ತಿದ್ದಾರೆ. ಹೌದು. ಮುಂದಿನ ತಿಂಗಳು ತೆರೆಕಾಣಲಿರುವ ‘ವಝೀರ್’ ಚಿತ್ರದಲ್ಲಿ ಅವರು ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ದ ಅಫೀಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಪಕ್ಕಾ ಆ್ಯಕ್ಷನ್ ಥ್ರಿಲ್ಲರ್ ಕಥಾವಸ್ತುವನ್ನು ಹೊಂದಿರುವ ವಝೀರ್‌ನಲ್ಲಿ , ಅಮಿತಾಭ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ.

ಚಿತ್ರದಲ್ಲಿ ಅವರದು ಗಾಲಿಕುರ್ಚಿಯಲ್ಲಿ ಓಡಾಡುವ ಚೆಸ್ ಆಟಗಾರನ ಪಾತ್ರ. ಆದಿತಿ ರಾವ್ ಹೈದರಿ, ವಝೀರ್‌ಗೆ ನಾಯಕಿ.ನೀಲ್ ನಿತಿನ್ ಮುಖೇಶ್ ವಿಲನ್ ಆಗಿ ನಟಿಸುತ್ತಿದ್ದಾರೆ, ಜಾನ್ ಅಬ್ರಹಾಂ ಅತಿಥಿ ಪಾತ್ರವೊಂದನ್ನು ನಿರ್ವಹಿಸಿದ್ದಾರೆ.

    ಆ್ಯಕ್ಷನ್ ಚಿತ್ರವೊಂದರಲ್ಲಿ ನಾಯಕನಾಗಿ ನಟಿಸುವ ಅವಕಾಶ ದೊರೆತಿರುವುದು ತನಗೆ ತುಂಬಾ ಖುಷಿ ತಂದಿದೆಯೆಂದು ಫರ್ಹಾನ್ ಅಂಬೋಣ. ತಾನು ನಿರ್ದೇಶಿಸಿದ್ದ ಲಕ್ಷ ಹಾಗೂ ಡಾನ್, ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಯಶಸ್ಸು ಕಂಡಿದ್ದವು. ಆದರೆ ಆ್ಯಕ್ಷನ್ ಚಿತ್ರದಲ್ಲಿ ನಟಿಸುತ್ತಿರುವುದು ತನಗೆ ಭಿನ್ನವಾದ ಅನುಭವವನ್ನು ನೀಡಿದೆಯೆಂದು ಅವರು ಹೇಳುತ್ತಾರೆ.

ಗಾಲಿಕುರ್ಚಿಯಲ್ಲಿ ಓಡಾಡುವ ಚೆಸ್ ಆಟಗಾರ (ಅಮಿತಾಭ್ ಬಚ್ಚನ್) ಹಾಗೂ ದಿಟ್ಟ ಎಟಿಎಸ್ ಅಧಿಕಾರಿ (ಫರ್ಹಾನ್ ಅಖ್ತರ್) ಹೀಗೆ ಇಬ್ಬರು ಸ್ನೇಹಿತರು ವಿಧಿಯ ವೈಪರೀತ್ಯದಿಂದಾಗಿ ಅಪಾಯಕಾರಿ ಸನ್ನಿವೇಶವೊಂದರಲ್ಲಿ ಸಿಲುಕಿಕೊಂಡಾಗ, ಅದನ್ನು ದಿಟ್ಟತನದಿಂದ ಎದುರಿಸುವ ರೋಚಕ ಕಥಾವಸ್ತುವನ್ನು ಹೊಂದಿದೆ. ಬಿಜಯ್‌ನಂಬಿಯಾರ್ ನಿರ್ದೇಶಿಸುತ್ತಿರುವ ವಝೀರ್‌ಗೆ ವಿಧು ವಿನೋದ್ ಚೋಪ್ರಾ ಹಣಹಾಕಿದ್ದಾರೆ. ಫರ್ಹಾನ್ ಅಖ್ತರ್ ಈ ಚಿತ್ರಕ್ಕಾಗಿ ಸ್ವತಃ ಹಾಡೊಂದನ್ನು ಕೂಡಾ ಹಾಡಿದ್ದಾರೆ. ವಝೀರ್‌ನ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು, ಚಿತ್ರಪ್ರೇಮಿಗಳಿಂದ ಒಳ್ಳೆಯ ಪ್ರತಿಕ್ರಿಯೆ ದೊರೆತಿದೆ.

...

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News