ಆಪರೇಷನ್ ಸಕ್ಸಸ್....ಪೇಶಂಟ್ ಡೆಡ್....!

Update: 2015-12-27 08:13 GMT

‘ಸರ್ವೋದಯ ಡಿಸ್ಪೆನ್ಸರಿ’ ಆಸ್ಪತ್ರೆ ತುಂಬಾ ಜನಜಂಗುಳಿಯಿಂದ ಕೂಡಿತ್ತು.

ಬಾಗಿಲ ಮೇಲೆ ಡಾ. ಮಹದೇವ್ ಎಂದು ಬರೆಯಲಾಗಿತ್ತು. ಯಾರು ಕೇಳಿದರೂ ‘‘ಡಾಕ್ಟರ್ ಆಪರೇಷನ್ ಥಿಯೇಟರ್‌ನಲ್ಲಿದ್ದಾರೆ...’’ ಎಂದೇ ಹೇಳಲಾಗುತ್ತಿತ್ತು. ಅಸಿಸ್ಟೆಂಟ್ ಡಾಕ್ಟರ್ ಅವರೇ ಮದ್ದು ನೀಡುತ್ತಿದ್ದರು.

‘‘ಸಾರ್...ಡಾ. ಮಹದೇವ್ ಅವರನ್ನು ನೋಡಬೇಕಾಗಿತ್ತು...’’ ನೋಡಿದರೆ ಕಪ್ಪಾಗಿ, ಕೃಶನಾಗಿದ್ದ.. ‘‘ಕಾಯಿಲೆ ಏನು...? ಡಾಕ್ಟರ್ ಬಿಸಿಯಾಗಿದ್ದಾರೆ. ಅವರು ಆಪರೇಷನ್ ಥಿಯೇಟರ್‌ನಲ್ಲಿದ್ದಾರೆ. ಸಮಸ್ಯೆ ನನ್ನತ್ರ ಹೇಳಿ...’’ ಅಸಿಸ್ಟೆಂಟ್ ಡಾಕ್ಟರ್ ಹೇಳಿದರು.

‘‘ಏನಿಲ್ಲ ಸಾರ್...ಕಳೆದ ಕೆಲ ದಿನಗಳಿಂದ ವಿಪರೀತ ಹಸಿವೆ...’’

‘‘ಏನೋ ತಿನ್ನಬಾರದ್ದನ್ನು ತಿಂದಿದ್ದೀಯ. ಅದರಿಂದಲೇ ಈ ರೋಗ ನಿನ್ನನ್ನು ಬಾಧಿಸಿದೆ....’’ ಅಸಿಸ್ಟೆಂಟ್ ಡಾಕ್ಟರ್ ಆಕ್ಷೇಪಿಸಿದರು. ‘‘ಇಲ್ಲ ಸಾರ್....ಕಳೆದೆರಡು ದಿನಗಳಲ್ಲಿ ಏನೂ ತಿನ್ನೋದಕ್ಕೆ ಸಿಕ್ಕಿರಲಿಲ್ಲ. ಬರಿದೇ ನೀರನ್ನಷ್ಟೇ ಕುಡಿದಿರುವುದು...ಆದರೂ ಸಿಕ್ಕಾಪಟ್ಟೆ ಹಸಿವೆ....’’ ರೋಗಿ ಹೇಳಿದ.

‘‘ಬೆಳಗ್ಗೆ ಅನ್ನ ಗಿನ್ನ ಏನಾದರೂ ತಿಂದಿದ್ದೀಯಾ?’’ ಅ. ಡಾ. ಕೇಳಿದರು.

‘‘ಅನ್ನ ಕಾಣದೆ ವರ್ಷವಾಯಿತು ಸಾರ್....ಕಳೆದ ವಾರ ಎರಡು ತುಂಡು ಬ್ರೆಡ್ ತಿಂದಿದ್ದೆ...’’

ಅ.ಡಾ. ಔಷಧಿ ಬರೆದು ಕೊಟ್ಟರು. ‘‘ನೋಡಿ...ಇಂದು ಗಾಂಧಿ ಕಂಪೆನಿಯ ಎರಡು ಮಾತ್ರೆ. ಬೆಳಗ್ಗೆ ಹಸಿವಿನಲ್ಲಿರುವಾಗ ತೆಗೆದುಕೊಳ್ಳಬೇಕು. ಬಳಿಕ ರಾತ್ರಿ ಊಟ ಮಾಡದೇ ಮಲಗುವಾಗ ಈ ಮಾತ್ರೆಯನ್ನು ತೆಗೆದುಕೊಳ್ಳಬೇಕು. ಈ ಕೆಂಪು ಮಾತ್ರ ಅಂಬೇಡ್ಕರ್ ಕಂಪೆನಿಯದು. ಮಧ್ಯಾಹ್ನ ತೆಗೆದುಕೊಳ್ಳಿ. ಮಲಗುವಾಗ ಹೊಟ್ಟೆಗೆ ಲೋಹಿಯಾ ಲೇಹ್ಯವನ್ನು ಹಚ್ಚಿಕೊಳ್ಳಿ....ಹಾಗೆಯೇ ಒಂದು ಲೋಟ ನೀರಿಗೆ ಒಂದು ಚಿಟಿಕೆ ಭಗವದ್ಗೀತೆಯನ್ನು ಹಾಕಿ ಚೆನ್ನಾಗಿ ಕಲಕಿ ಕುಡಿಯಿರಿ. ಎಲ್ಲ ಸರಿಯಾಗುತ್ತದೆ....’’ ರೋಗಿ ತಲೆಯಾಡಿಸುತ್ತಾ ಹೋದ.

‘‘ನೆಕ್ಸ್ಟ್....’’ ಅ.ಡಾ. ಕೂಗಿದರು

‘‘ಸಾರ್...ಡಾ. ಮಹದೇವ್ ಅವರು ಬೇಕಾಗಿತ್ತು....’’

‘‘ಅವರು ಆಪರೇಷನ್ ಥಿಯೇಟರ್‌ನಲ್ಲಿ ಇದ್ದಾರೆ....ನಿಮ್ಮ ಸಮಸ್ಯೆ ನನ್ನಲ್ಲೇ ಹೇಳಿ...’’ ಅ.ಡಾ. ಹೇಳಿದರು.

‘‘ಸಾರ್...ನಾನು ನೀರು ಮುಟ್ಟಿದರೆ ಅದು ಕಳಂಕವಾಗುತ್ತದೆ...ದೇವಸ್ಥಾನಕ್ಕೆ ಹೋದರೆ ಅದು ಮೈಲಿಗೆಯಾಗುತ್ತೆ....ನನ್ನ ಚರ್ಮದಲ್ಲೇ ಏನೋ ಸಮಸ್ಯೆಯಿದೆ ಎಂದು ಊರಿನ ಹಿರಿಯರು ಹೇಳಿದರು...’’ ಅ.ಡಾ. ತಲೆಯೆತ್ತಿ ನೋಡಿದರು. ಸುಮಾರು 70 ವರ್ಷ ಪ್ರಾಯದ ವೃದ್ಧರು ಅವರು. ‘‘ಎಷ್ಟು ಸಮಯದಿಂದ ಈ ಸಮಸ್ಯೆ...’’ ಅ. ಡಾ. ಕೇಳಿದರು.

‘‘ಹುಟ್ಟಿನಿಂದಲೇ ಈ ಸಮಸ್ಯೆಯಿದೆ ಸ್ವಾಮಿ...’’ ಅವನು ವಿನೀತನಾಗಿ ಹೇಳಿದ.

‘‘ಇದು ಚರ್ಮ ರೋಗ. ಸುಬ್ರಹ್ಮಣ್ಯದಲ್ಲಿ ಇದಕ್ಕೆ ವಿಶೇಷವಾದ ಔಷಧಿಗಳು ನೀಡಿದ್ದಾರಂತೆ...ಆದರೆ ಅದರಲ್ಲಿ ದುಷ್ಪರಿಣಾಮಗಳು ಬಹಳಷ್ಟಿವೆ. ಆದುದರಿಂದ ನೀವು ದಿನಾ ಬೆಳಗ್ಗೆ ನಾನು ಕೊಡುವ ಗಾಂಧಿ ಪೌಡರನ್ನು ಮುಖಕ್ಕೆ ಹಚ್ಚಿಕೊಳ್ಳಿ. ಮಧ್ಯಾಹ್ನ ಎರಡು ಚಮಚ ಅಂಬೇಡ್ಕರ್ ಸಿರಪ್ ತೆಗೆದುಕೊಳ್ಳಿ. ರಾತ್ರಿ ಲೋಹಿಯಾ ಮಾತ್ರೆಗಳನ್ನು ಕುಟ್ಟಿ ಪುಡಿ ಮಾಡಿ ನೀರಲ್ಲಿ ಚೆನ್ನಾಗಿ ಕಲಕಿ. ಅದಕ್ಕೆ ಎರಡು ಚಿಟಿಕೆ ಭಗವದ್ಗೀತೆ ಸಾಲುಗಳನ್ನು ಹಾಕಿ ಕುಡಿಯಿರಿ. ಎಲ್ಲವೂ ಸರಿಯಾಗುತ್ತದೆ...ನೆಕ್ಸ್ಟ್...’’ ಅ. ಡಾ. ಕೂಗಿದರು.

ಅವರೆದು ಒಬ್ಬ ಪೀಚಲು, ಕುರುಚಲು ಗಡ್ಡದ ವ್ಯಕ್ತಿ ಬಂದು ನಿಂತ. ಅ.ಡಾ. ತಲೆಯೆತ್ತಿ ನೋಡಿದರು. ‘‘ಇವನೊಳಗೆ ಭಾರೀ ರೋಗವಿರಬೇಕು’’ ಎಂದು ಅ.ಡಾ. ಅವರಿಗೆ ಅನ್ನಿಸಿತು.

‘‘ಏನ್ರೀ ನಿಮಗೆ ಕಾಯಿಲೆ?’’ ಅ. ಡಾ. ಕೇಳಿದರು.

‘‘ನಾನು ರೋಗಿ ಅಲ್ಲ ಸಾರ್....ಪತ್ರಕರ್ತ ಎಂಜಲು ಕಾಸಿ...’’ ಕಾಸಿ ಹಲ್ಲುಕಿರಿಯುತ್ತಾ ಹೇಳಿದ.

‘‘ಹೇಳಿ ಏನಾಗಬೇಕಿತ್ತು?’’ ಅ. ಡಾ. ಕೇಳಿದರು.

‘‘ಸಾರ್...ಡಾ. ಮಹಾದೇವ್ ಅವರು ಬೇಕಾಗಿತ್ತು....’’ ‘‘ಡಾ. ಮಹಾದೇವ್ ಅವರು ಆಪರೇಷನ್ ಥಿಯೇಟರ್‌ನಲ್ಲಿದ್ದಾರೆ...ನೀವು ನಮ್ಮನ್ನೇ ಇಂಟರ್ಯೂ ಮಾಡಿ...’’ ಅ.ಡಾ. ಉತ್ತರಿಸಿದರು.

‘‘ನಿಮ್ಮ ಹೆಸರೇನು ಸಾರ್?’’ ಕಾಸಿ ಕೇಳಿದ.

‘‘ನಾನು ಡಾ. ಸಿದ್ದಲಿಂಗಯ್ಯ ಅಂತ. ಇತ್ತೀಚೆಗಷ್ಟೇ ವಿಶ್ವೇಶ್ವರಯ್ಯ ಯುನಿವರ್ಸಿಟಿಯಲ್ಲಿ ಎಂಬಿಬಿಎಸ್ ಮಾಡಿ, ಆಯುರ್ವೇದದಲ್ಲಿ ವಿಶೇಷ ಪದವಿ ಪಡೆದು, ಇದೀಗ ‘ಮಡೆಸ್ನಾನದಲ್ಲಿ ಚರ್ಮರೋಗ ನಿವಾರಣಾ ಔಷಧಿಗಳು? ಎಂಬ ವಿಷಯದಲ್ಲಿ ಥೀಸಿಸ್ ಬರೆಯುತ್ತಿದ್ದೇನೆ....’’ ಅ.ಡಾ. ನಾಚುತ್ತಾ ಹೇಳಿದರು.

‘‘ಸಾರ್ ವಿಶ್ವೇಶ್ವರಯ್ಯ ಯುನಿವರ್ಸಿಟಿಯಲ್ಲಿ ಎಂಜಿನಿಯರಿಂಗ್ ಕಲಿಸೋದಲ್ವಾ?’’ ಕಾಸಿ ಅನುಮಾನದಿಂದ ಕೇಳಿದ.

‘‘ಅದು ಬೇರೆ ಯುನಿವರ್ಸಿಟಿ. ಇದು ಉಡುಪಿಯ ಯುನಿವರ್ಸಿಟಿ ಕಣ್ರೀ...’’ ಅ. ಡಾ. ಸ್ಪಷ್ಟಪಡಿಸಿದರು.

‘‘ಸಾರ್, ಡಾ. ಮಹದೇವ್ ಆಪರೇಷನ್ ಥಿಯೇಟರ್‌ನಲ್ಲಿ ಏನು ಮಾಡ್ತಾ ಇದ್ದಾರೆ ಸಾರ್? ಕೇಸ್ ಸೀರಿಯಸ್ಸಾ?’’ ಕಾಸಿ ಕುತೂಹಲದಿಂದ ಕೇಳಿದ.

‘‘ಅದೇರಿ....ಬುದ್ಧ ಚಿಂತನೆಯ ಹೊಟ್ಟೆಯೊಳಗೆ ಅದೇನೋ ಭಗವದ್ಗೀತೆ ಎಂಬ ಗಡ್ಡೆ ಬೆಳೆದಿದೆಯಂತೆ....ಕುವೆಂಪು ಸ್ಕಾನಿಂಗ್ ಮಶಿನ್‌ನಲ್ಲಿ ಹಾಕಿ ನಮ್ಮ ಡಾಕ್ಟರ್ ನೋಡಿದಾಗ ಅದು ಪತ್ತೆಯಾಗಿದೆ...ಈಗ ಆಧುನಿಕ ಕುವೆಂಪು ಕತ್ತರಿ ಬಳಸಿ ಆ ಗಡ್ಡೆಯನ್ನು ಕತ್ತರಿಸುವುದಕ್ಕೆ ಹೊರಟಿದ್ದಾರೆ ಭಾರೀ ಸೀರಿಯಸ್ ಕೇಸ್...’’

‘‘ಹೌದಾ ಸಾರ್...ಈಗ ಸರ್ಜರಿ ಮಾಡ್ತಾ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News