ಪಂಜಾಬ್‌ನಲ್ಲಿ ಮುಂದುವರಿದ ಭಯೋತ್ಪಾದಕರ ಅಟ್ಟಹಾಸ

Update: 2016-01-02 09:06 GMT

ಪಂಜಾಬ್, ಜ.2: ಪಂಜಾಬ್‌ನಲ್ಲಿ ಉಗ್ರರ ಅಟ್ಟಹಾಸ ಆಗಾಗ ಕಂಡು ಬರುತ್ತಿದೆ. 2001ರಿಂದ ಈ ತನಕ ಹಲವು ಬಾರಿ ಭಯೋತ್ಪಾದಕರು ಪಂಜಾಬ್‌ಗೆ ದಾಳಿ ಇಟ್ಟಿದ್ದಾರೆ.
ವಿವರ ಈ ಕೆಳಗಿನಂತಿದೆ.
 *ಮಾ.1, 2001: ಪಂಜಾಬ್‌ನ ಗುರುದಾಸಪುರ ಜಿಲ್ಲೆಯ ಭಾರತ -ಪಾಕಿಸ್ತಾನ ಗಡಿಯಲ್ಲಿ ಭಯೋತ್ಪಾದಕರು ನಿರ್ಮಿಸಿದ್ದ ಸುರಂಗ ಮಾರ್ಗ ಪತ್ತೆ.
  *ಜ.2, 2002: ದಮ್ಟಾಲದಲ್ಲಿ ಉಗ್ರರ ದಾಳಿಯಿಂದ 3 ಯೋಧರು ಬಲಿ, 5 ಮಂದಿಗೆ ಗಾಯ.
 *ಜ.2.31,2002: ಹೊಶಿಯಾರ್‌ಪುರ್ ಜಿಲ್ಲೆಯ ಪತ್ರಾನದಲ್ಲಿ ಸರಕಾರಿ ಬಸ್‌ನಲ್ಲಿ ಬಾಂಬ್ ಸ್ಫೋಟ ಸಂಭವಿಸಿ 2 ಸಾವು, 12 ಮಂದಿಗೆ ಗಾಯ.
*ಮಾ.31, 2002: ಲೂಧಿಯಾನದ ಬಳಿ ಫಿರೋಝ್‌ಪುರ-ಧ್ಯಾನ್‌ಬಾದ್ ರೈಲಿನಲ್ಲಿ ಬಾಂಬ್ ಸ್ಪೋಟದಿಂದ 2 ಸಾವು, 28 ಮಂದಿಗೆ ಗಾಯ.
*ಎ.28, 2006: ಜಲಂಧರ್ ಬಸ್‌ನಲ್ಲಿ ಬಾಂಬ್ ಸ್ಫೋಟ 8 ಮಂದಿಗೆ ಗಾಯ.
*ಅ.14, 2007: ಲೂಧಿಯಾನದ ಚಿತ್ರಮಂದಿರವೊಂದರಲ್ಲಿ ಬಾಂಬ್ ಸ್ಫೋಟದಿಂದ 7 ಸಾವು, 40 ಮಂದಿಗೆ ಗಾಯ.
*ಜು.27, 2015: ಗುರುದಾಸಪುರ ಜಿಲ್ಲೆಯ ಪೊಲೀಸ್ ಠಾಣೆ ಮೇಲೆ ನಡೆದ ಭಯೋತ್ಪಾದಕರ ದಾಳಿಯಿಂದ ಪೊಲೀಸ್ ಅಧೀಕ್ಷಕ ಸೇರಿದಂತೆ 7 ಮಂದಿ ಬಲಿ, ಮೂವರು ಭಯೋತ್ಪಾದಕರ ಹತ್ಯೆ.
*ಜ.2, 2016: ಪಠಾಣ್‌ಕೋಟ್ ವಾಯುನೆಲೆಗೆ ಉಗ್ರರ ದಾಳಿ. ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರ ಹತ್ಯೆ, ನಾಲ್ವರು ಯೋಧರು ಹುತಾತ್ಮ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News