"ಎರಡನೇ ಎವರೆಸ್ಟ್ " ಏರಿದ ಒಂಟಿ ಕಾಲಿನ ಅರುಣಿಮಾ ಸಿನ್ಹಾ

Update: 2016-01-02 11:26 GMT

ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರಿ ಅನನ್ಯ ಸಾಧನೆ ಮಾಡಿದ್ದ ಒಂಟಿ ಕಾಲಿನ ಪರ್ವತಾರೋಹಿ ಭಾರತದ ಅರುಣಿಮಾ ಸಿನ್ಹಾ ಈಗ ಇನ್ನೊಂದು ವಿಶೇಷ ಸಾಧನೆ ಮಾಡಿದ್ದಾರೆ. ಅರ್ಜೆಂಟೀನಾದ ಅಕೊನ್ಕಗುವಾ ಶಿಖರವನ್ನು ಅರುಣಿಮಾ ಯಶಸ್ವಿಯಾಗಿ ಏರಿದ್ದಾರೆ. ಡಿಸೆಂಬರ್ 12 ರಂದು ಪ್ರಾರಂಭಿಸಿ ಡಿಸೆಂಬರ್ 25 ರಂದು ಶಿಖರದ ತುದಿ ತಲುಪಿ ತ್ರಿವರ್ಣ ಧ್ವಜ ಹಾರಿಸಿದ್ದಾಗಿ ಅರುಣಿಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಅಕೊನ್ಕಗುವಾ ಏಶ್ಯಾದ ಹೊರಗಿನ ಅತಿ ಎತ್ತರದ (6960ಮೀಟರ್ ಗಳು ) ಶಿಖರವಾಗಿದೆ. 
" ನಾನು ನನ್ನ ಉದ್ದೇಶಿತ 7 ಶಿಖರಗಳ ಗುರಿಯಲ್ಲಿ 5 ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇನೆ. ಇದು ಎರಡನೇ ಎವರೆಸ್ಟ್ ಎಂಬ ಖ್ಯಾತಿ ಪಡೆದಿರುವ ಶಿಖರ.  ಇದರೊಂದಿಗೆ ವಿಶ್ವದ 7 ಶಿಖರಗಳಲ್ಲಿ ೫ ಅನ್ನು ಏರಿದ ಮೊದಲ ಮಹಿಳಾ ಒಂಟಿಕಾಲಿನ ಪರ್ವತಾರೋಹಿ ಎಂಬ ವಿಶ್ವ ದಾಖಲೆ ನನ್ನದಾಗಿದೆ. ಉಳಿದ ಎರಡು ಶಿಖರಗಳನ್ನೂ ನಾನು ಏರುವ ಮೂಲಕ ಈ ಸಾಧನೆಯನ್ನು ಪೂರ್ಣಗೊಳಿಸುತ್ತೇನೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News